ಆ 4 ಗಂಟೆ.. ಧುರಂಧರ್ 2 ಸಿನಿಮಾ ವೀಕ್ಷಿಸಿ ವಿಮರ್ಶೆ ಬರೆದ ವಿರಾಟ್ ಕೊಹ್ಲಿ!

ವಿರಾಟ್ ಕೊಹ್ಲಿ ಸದ್ಯ ಐಪಿಎಲ್ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದಾರೆ. RCB ತಂಡದ ಪರ ಅದ್ಬುತ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಕೊಹ್ಲಿ ಮುಂದಿನ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ನಡುವೆಯೇ ಕಿಂಗ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಧುರಂಧರ್-2 ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಕೊಹ್ಲಿ ಧುರಂಧರ್ 2 ಸಿನಿಮಾದ ಬಗ್ಗೆ ವಿಮರ್ಶೆ ಬರೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕದನ ವಿರಾಮ ಒಪ್ಪದ ಇರಾನ್ ಮೇಲೆ ಮತ್ತೆ ದಾಳಿ ಮಾಡಿದ ಅಮೆರಿಕ! – ಹಲವೆಡೆ ಸ್ಫೋಟ
ನಟ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ ಧುರಂಧರ್-2 ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲೂ ದಾಖಲೆ ಬರೆದಿದೆ. ಭಾರತದ ಮಾರುಕಟ್ಟೆಯೊಂದರಲ್ಲೇ ಬರೋಬ್ಬರಿ ₹ 985 ಕೋಟಿಗೂ ಅಧಿಕ ಗಳಿಕೆ ಕಂಡಿರುವ ಚಿತ್ರ, ಸಾವಿರ ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಇದೀಗ RCB ಆಟಗಾರ ವಿರಾಟ್ ಕೊಹ್ಲಿ ಈ ಸಿನೆಮಾದ ವಿಮರ್ಶೆ ಮಾಡಿದ್ದು, ನಟ ರಣವೀರ್ ಸಿಂಗ್ಗೆ ಮಹತ್ವದ ಸಂದೇಶ ನೀಡಿದ್ದಾರೆ.
ಇನ್ಸ್ಸ್ಟಾಗ್ರಾಂ ನಲ್ಲಿ ಸ್ಟೋರಿ ಹಾಕಿರುವ ಕೊಹ್ಲಿ, ಸಿನೆಮಾವನ್ನು ನೋಡಿದೆ ಮತ್ತು ಭಾರತದಲ್ಲಿ ತಯಾರಿಸಿದ ಇಂತಹ ಸಿನಿಮೀಯ ಅನುಭವವನ್ನು ನಾನು ಎಂದಿಗೂ ನೋಡಿಲ್ಲ ಎಂದು ಹೇಳಲು ಧೈರ್ಯ ಮಾಡುತ್ತೇನೆ. ಇದು ಎಲ್ಲಾ ರೀತಿಯ ಭಾವನೆಗಳನ್ನು ಮೇಲ್ಮೈಗೆ ತಂದಿತು ಮತ್ತು ಸುಮಾರು 4 ಗಂಟೆಗಳ ಕಾಲ ನಾನು ಒಮ್ಮೆಯೂ ಹಿಂಜರಿಯಲಿಲ್ಲ. ಆದಿತ್ಯ ಧರ್ ನಿಮ್ಮ ಪ್ರತಿಭೆ ಮತ್ತು ದೃಢನಿಶ್ಚಯವು ನೀವು ರಚಿಸಿದ್ದರಲ್ಲಿ ಪ್ರತಿಫಲಿಸುತ್ತದೆ. ನಿಮಗೆ ಹ್ಯಾಟ್ಸ್ ಆಫ್. ನೀವು ಒಬ್ಬ ಪ್ರತಿಭೆ. ಮತ್ತು ಎಲ್ಲಾ ನಟರು ತಮ್ಮ ಪಾತ್ರಗಳಲ್ಲಿ ಅದ್ಭುತವಾಗಿದ್ದರೂ ರಣವೀರ್ ಸಿಂಗ್ ಈ ಚಿತ್ರದ ನಂತರ ನೀವು ವಿಭಿನ್ನ ಮಟ್ಟವನ್ನು ತಲುಪಿದ್ದೀರಿ ಮತ್ತು ನಿಮ್ಮ ಅಭಿನಯ ಅದ್ಭುತವಾಗಿದೆ. ಖಂಡಿತ ವಾವ್ ಎಂದು ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮೆಚ್ಚುಗೆಯ ಪೋಸ್ಟ್ ಮಾಡಿದ್ದಾರೆ.

ನೋಡಿರಿ

