ಅಕ್ಷಯ ತೃತೀಯದಂದು ಅಪ್ಪಿತಪ್ಪಿ ಈ ವಸ್ತುಗಳನ್ನ ಮನೆಗೆ ತರಬೇಡಿ – ಯಾವೆಲ್ಲಾ ವಸ್ತುಗಳು ಗೊತ್ತಾ?

ಸನಾತನ ಧರ್ಮದಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಗೆ ವಿಶೇಷವಾದ ಧಾರ್ಮಿಕ ಮಹತ್ವವಿದೆ. ಈ ಪವಿತ್ರ ದಿನವನ್ನೇ ‘ಅಕ್ಷಯ ತೃತೀಯ’ ಎಂದು ಆಚರಿಸುತ್ತೇವೆ. ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷ ಈ ಶುಭ ಹಬ್ಬವು ಏಪ್ರಿಲ್ 19 ರಂದು ಬಂದಿದೆ. ಶಾಸ್ತ್ರಗಳ ಪ್ರಕಾರ, ಅಕ್ಷಯ ತೃತೀಯದಂದು ಮದುವೆ, ಗೃಹಪ್ರವೇಶ ಅಥವಾ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಪ್ರತ್ಯೇಕವಾಗಿ ಪಂಚಾಂಗ ನೋಡುವ ಅವಶ್ಯಕತೆಯಿಲ್ಲ, ಇಡೀ ದಿನವು ಅತ್ಯಂತ ಮಂಗಳಕರವಾಗಿರುತ್ತದೆ.
ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಟೀಚರ್ ಶವ ಪತ್ತೆ! – ರಸ್ತೆ ಪಕದಲ್ಲಿ ನಿಜಕ್ಕೂ ಆಗಿದ್ದೇನು ಗೊತ್ತಾ?
ಅಕ್ಷಯ ತೃತೀಯದಂದು ಐಶ್ವರ್ಯದ ದೇವತೆಯಾದ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಮಾಡಿದ ದಾನ, ಧರ್ಮ ಮತ್ತು ಪುಣ್ಯ ಕಾರ್ಯಗಳ ಫಲವು ಎಂದಿಗೂ ಕ್ಷಯಿಸುವುದಿಲ್ಲ ಎಂಬ ನಂಬಿಕೆಯಿದೆ. ಈ ಕಾರಣಕ್ಕಾಗಿಯೇ ಜನರು ಅಂದು ಚಿನ್ನ, ಬೆಳ್ಳಿ ಅಥವಾ ಬೆಲೆಬಾಳುವ ಆಭರಣಗಳನ್ನು ಖರೀದಿಸಿ ಮನೆಗೆ ತರುತ್ತಾರೆ. ಆದರೆ, ಸಂಪತ್ತು ಮತ್ತು ಸಮೃದ್ಧಿಯನ್ನು ತರುವ ಈ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಆ ವಸ್ತುಗಳು ಯಾವುವು ಅನ್ನೋದ್ದನ್ನ ನೋಡೋಣ.
ಚೂಪಾದ ಆಯುಧಗಳು:
ಅಕ್ಷಯ ತೃತೀಯದಂದು ಚಾಕು, ಕತ್ತರಿ, ಬ್ಲೇಡ್, ಸೂಜಿ ಅಥವಾ ಕೊಡಲಿಯಂತಹ ಕತ್ತರಿಸುವ ಸಾಧನಗಳನ್ನು ಖರೀದಿಸಬಾರದು. ಇವುಗಳನ್ನು ಮನೆಗೆ ತರುವುದರಿಂದ ಕುಟುಂಬದಲ್ಲಿ ಕಲಹ ಉಂಟಾಗುತ್ತದೆ ಮತ್ತು ಸುಖ-ಶಾಂತಿ ಹದಗೆಡುತ್ತದೆ ಎಂಬ ನಂಬಿಕೆಯಿದೆ.
ಕಪ್ಪು ಬಣ್ಣದ ವಸ್ತುಗಳು:
ಶಾಸ್ತ್ರಗಳಲ್ಲಿ ಕಪ್ಪು ಬಣ್ಣವನ್ನು ಶನಿ ಮತ್ತು ರಾಹುವಿಗೆ ಸಂಬಂಧಿಸಿದ್ದೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಶುಭ ದಿನದಂದು ಕಪ್ಪು ಬಟ್ಟೆ, ಬೂಟುಗಳು ಅಥವಾ ಕಪ್ಪು ಪೀಠೋಪಕರಣಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಮಂಗಳಕರ ಕಾರ್ಯಗಳಲ್ಲಿ ಕಪ್ಪು ಬಣ್ಣದ ಬಳಕೆ ಅಶುಭವೆಂದು ನಂಬಲಾಗಿದೆ.
ಮುಳ್ಳಿನ ಗಿಡಗಳು
ವಾಸ್ತು ಶಾಸ್ತ್ರದ ಪ್ರಕಾರ, ಈ ಪವಿತ್ರ ದಿನದಂದು ಕಳ್ಳಿ ಅಥವಾ ಯಾವುದೇ ಮುಳ್ಳಿನ ಗಿಡಗಳನ್ನು ಮನೆಗೆ ತರಬೇಡಿ. ಇವು ಜೀವನದಲ್ಲಿ ಅಡೆತಡೆಗಳನ್ನು ತರಬಹುದು ಮತ್ತು ಧನಾಗಮನಕ್ಕೆ ಅಡ್ಡಿಯಾಗಬಹುದು ಎಂದು ನಂಬಲಾಗಿದೆ.
ಅಲ್ಯೂಮಿನಿಯಂ
ಅಕ್ಷಯ ತೃತೀಯದಂದು ಲೋಹವನ್ನು ಖರೀದಿಸುವುದು ಶ್ರೇಷ್ಠವಾದರೂ, ಲೋಹದ ಆಯ್ಕೆ ಸರಿಯಾಗಿರಲಿ. ಅಲ್ಯೂಮಿನಿಯಂ ಮತ್ತು ಸ್ಟೀಲ್ ಪಾತ್ರೆಗಳು ರಾಹುವಿನ ಸಂಕೇತವೆಂದು ಹೇಳಲಾಗುತ್ತದೆ. ಇವುಗಳ ಖರೀದಿಯು ಮನೆಯ ಸಮೃದ್ಧಿಯನ್ನು ಕುಂಠಿತಗೊಳಿಸಬಹುದು. ಬದಲಿಗೆ ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿಯ ವಸ್ತುಗಳನ್ನು ಆರಿಸಿಕೊಳ್ಳುವುದು ಉತ್ತಮ.

ನೋಡಿರಿ

