ಸುಟ್ಟ ಸ್ಥಿತಿಯಲ್ಲಿ ಟೀಚರ್ ಶವ ಪತ್ತೆ! – ರಸ್ತೆ ಪಕದಲ್ಲಿ ನಿಜಕ್ಕೂ ಆಗಿದ್ದೇನು ಗೊತ್ತಾ?

ಸುಟ್ಟ ಸ್ಥಿತಿಯಲ್ಲಿ ಟೀಚರ್ ಶವ ಪತ್ತೆ! –  ರಸ್ತೆ ಪಕದಲ್ಲಿ ನಿಜಕ್ಕೂ ಆಗಿದ್ದೇನು ಗೊತ್ತಾ?

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಕೊಲೆಯಾದವರು  ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾದ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ ಎಂದು ತಿಳಿದುಬಂದಿದೆ. ಮಾರಕಾಸ್ತ್ರಗಳಿಂದ ಶಿಕ್ಷಕಿಯನ್ನು ಕೊಚ್ಚಿಕೊಂದು, ಶವವನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದರು ಎಂಬ ವಿಚಾರ ತನಿಖೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ಕಾರು ಖರೀದಿ ವಿಚಾರಕ್ಕೆ ಕಿರಿಕ್ – ಭಾವನ ಕಥೆ ಮುಗಿಸಿದ ಬಾಮೈದ

ಜ್ಯೋತಿ ಕಪಾಳೆ ಹಿರೇಮಠ (57) ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಬೀದರ್‌ನಲ್ಲೇ ಮನೆ ಮಾಡಿ ಶಾಲೆಗೆ ಹೋಗಿಬರುತ್ತಿದ್ದ ಜ್ಯೋತಿ ವಾರಕ್ಕೊಂದು ಬಾರಿ ಕಲಬುರಗಿಗೆ ಬಂದು ವಾಪಸ್ ತೆರಳುತ್ತಿದ್ದರು. ಕಲಬುರಗಿಯಿಂದ ಬೀದರ್ ತೇರಳುವಾಗ ಮಾರ್ಗ ಮಧ್ಯದ ಕಮಲಾಪುರದ ಕಲ್ಮೂಡನಲ್ಲಿ ಜ್ಯೋತಿಯನ್ನು ಕೊಲೆಗೈದ ದುಷ್ಕರ್ಮಿಗಳು, ರಸ್ತೆ ಪಕ್ಕದಲ್ಲಿ ಐದು ಲೀಟರ್ ಪೆಟ್ರೋಲ್ ಹಾಕಿ ಶವವನ್ನು ಸುಟ್ಟಿದ್ದಾರೆ.

ಈ ಕುರಿತು ಪೊಲೀಸರು ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆಯಲ್ಲಿ ಕಲಬುರಗಿ ನಿವಾಸಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Kishor KV