RCB ಈಗ IPLನ ರಿಯಲ್ OG – ಬ್ಯಾಟಿಂಗ್ & ಬೌಲಿಂಗ್ ಕೆಮ್ಮಂಗಿಲ್ಲ!
ಮಾಸ್ಟರ್ ಮೈಂಡ್ DK ಬಾಸ್

RCB ಈಗ IPLನ ರಿಯಲ್ OG – ಬ್ಯಾಟಿಂಗ್ & ಬೌಲಿಂಗ್ ಕೆಮ್ಮಂಗಿಲ್ಲ!ಮಾಸ್ಟರ್ ಮೈಂಡ್ DK ಬಾಸ್

2026ರ ಐಪಿಎಲ್ ಸೂಪರ್ ಸ್ಟ್ರಾಂಗ್ ಆಗೇ ಸ್ಟಾರ್ಟ್ ಆಗಿದೆ. ಌಂಡ್ ಆರ್​ಸಿಬಿಯಂತೂ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡ್ತಿದೆ. ಹೈದ್ರಾಬಾದ್ ವಿರುದ್ಧ ಫಸ್ಟ್ ಮ್ಯಾಚಲ್ಲಿ ದಾಖಲೆಯ ಚೇಸಿಂಗ್, ಈಗ ಚೆನ್ನೈ ವಿರುದ್ಧ ದಾಖಲೆಯ ಟಾರ್ಗೆಟ್. ಪಂದ್ಯದಿಂದ ಪಂದ್ಯಕ್ಕೆ ಬೆಂಕಿಚೆಂಡಿನಂತೆ ಸಿಡೀತಿದ್ದಾರೆ. ಚೇಸಿಂಗ್​ಗೂ ಸೈ ಡಿಫೆನ್ಸ್ ಮಾಡಿಕೊಳ್ಳೋಕೂ ಜೈ ಅಂತಾ ಈಗ ಬೆಂಗಳೂರು ಆಟಗಾರರು ಮುಟ್ಟಿದ್ದೆಲ್ಲಾ ಚಿನ್ನ. ಆರ್​ಸಿಬಿಯ ಈ ಸಕ್ಸಸ್​​ಫುಲ್ ಜರ್ನಿ ಸೀಕ್ರೆಟ್ ಏನು ಅನ್ನೋದನ್ನ ಆರ್​ಸಿಬಿ ಡಿಕೆ ಬಾಸ್ ದಿನೇಶ್ ಕಾರ್ತಿಕ್ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : CSKಗೆ ನೀರು ಕುಡಿಸಿದ ಡೇವಿಡ್ – 3ನೇ ಮ್ಯಾಚಲ್ಲೂ ಕೊಚ್ಚಿ ಹೋದ ಚೆನ್ನೈ

ಐಪಿಎಲ್ ಇತಿಹಾಸದಲ್ಲಿ 18ನೇ ಸೀಸನ್​ವರೆಗೂ ಆರ್​ಸಿಬಿ ಕಪ್ ಗೆದ್ದಿರಲಿಲ್ಲ. ಹಾಗಂತ ಟೀಂ ವೀಕ್ ಇತ್ತು ಅಥವಾ ಪರ್ಫಾಮೆನ್ಸ್ ಚೆನ್ನಾಗಿರಲಿಲ್ಲ ಅಂತಲ್ಲ. ಬೆಂಗಳೂರು ಮೊದ್ಲಿಂದಲೂ ವರ್ಲ್ಡ್ ಕ್ಲಾಸ್ ಪ್ಲೇಯರ್​ಗಳನ್ನೇ ಆಡಿಸಿಕೊಂಡು ಬಂದಿರೋ ಫ್ರಾಂಚೈಸಿ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಅನಿಲ್ ಕುಂಬ್ಳೆ, ದಿನೇಶ್ ಕಾರ್ತಿಕ್, ಡುಪ್ಲೆಸಿಸ್, ಮ್ಯಾಕ್ಸಿ, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್ ಹೀಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿನೇ ಬೆಳೆಯುತ್ತೆ. ಌಂಡ್ ಆರ್​ಸಿಬಿ ಕ್ರಿಯೇಟ್ ಮಾಡಿರೋ ಎಷ್ಟೋ ರೆಕಾರ್ಡ್ಸ್​ನ ಸ್ಟಿಲ್ ಈವರೆಗೂ ಬ್ರೇಕ್ ಮಾಡೋಕೆ ಆಗಿರಲಿಲ್ಲ. ಆದ್ರೆ ಹಿಂದೆಲ್ಲ ಇಂಡಿವಿಶ್ಯೂಯಲ್ ಪರ್ಫಾಮೆನ್ಸ್ ಇರ್ತಿತ್ತು. ಬಟ್ ಈಗ ಆರ್​ಸಿಬಿ ಒಬ್ರ ಮೇಲೆ ಡಿಪೆಂಡ್ ಆಗಿಲ್ಲ. ಇಡೀ ಟೀಂ ಬೆಂಕಿಯಾಗಿದೆ. ಇದೇ ಸೀಕ್ರೆಟ್​ನ ಈಗ ಡಿಕೆ ಬಾಸ್ ರಿವೀಲ್ ಮಾಡಿದ್ದಾರೆ.

ಮೊದ್ಲೆಲ್ಲಾ ಕೊಹ್ಲಿ ಮೇಲೆ ಡಿಪೆಂಡ್.. ಈಗ ಬೇರೆಯವ್ರೂ ವಿನ್ನರ್ಸ್!

ಯೆಸ್. ಆರ್​ಸಿಬಿಯ ಆಪತ್ವಾಂಧವ ದಿನೇಶ್ ಕಾರ್ತಿಕ್ ಹೇಳಿರೋ ಮಾತುಗಳಿವು. ಅಂದ್ರೆ ಮೊದ್ಲೆಲ್ಲಾ ಆರ್​ಸಿಬಿ ಬ್ಯಾಟಿಂಗ್​ನಲ್ಲಿ ಸ್ಟ್ರಾಂಗ್ ಪ್ಲೇಯರ್​ಗಳನ್ನೇ ತಗೊಂಡಿದೆ. ಕ್ರಿಸ್ ಗೇಲ್, ಎಬಿಡಿ, ಕೊಹ್ಲಿ ಎಲ್ರೂ ರನ್ ಮಷಿನ್​ಗಳೇ. ಅದ್ರಲ್ಲೂ ಕೊಹ್ಲಿಯಂತೂ ಬ್ಯಾಟಿಂಗ್ ಮಹಾರಾಜ. ಆದ್ರೆ ತಂಡದ ವೀಕ್​ನೆಸ್ ಅಂದ್ರೆ ಮೋಸ್ಟ್ ಆಫ್ ದಿ ಟೈಂ ಆರ್​ಸಿಬಿ ಬ್ಯಾಟಿಂಗ್ ಕೊಹ್ಲಿ ಮೇಲೆಯೇ ಡಿಪೆಂಡ್ ಆಗಿತ್ತು. ಅವ್ರು ಎಷ್ಟೇ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ರು ಉಳಿದವ್ರಿಂದ ಸಾಥ್ ಸಿಗ್ತಾ ಇರ್ಲಿಲ್ಲ. ಒನ್ಸ್ ಅವ್ರ ವಿಕೆಟ್ ಬಿತ್ತು ಅಂದ್ರೆ ನೆಕ್ಸ್​ಟ್ ರನ್ ರೇಟ್ ಸರ್ರಂಥ ಜಾರುತ್ತಿತ್ತು. ಆದ್ರೆ ಈಗ ಹಾಗಿಲ್ಲ. ಕೊಹ್ಲಿ ಕಡೆಯಿಂದ ಬಿಗ್ ಸ್ಕೋರ್ ಬಂದಿಲ್ಲ ಅಂದ್ರೆ ಬೇರೆಯವ್ರು ಇನಿಶಿಯೇಟ್ ತಗೊಳ್ತಿದ್ದಾರೆ. ಈ ಬಗ್ಗೆಯೇ ಮಾತ್ನಾಡಿರೋ ಆರ್​ಸಿಬಿ ಬ್ಯಾಟಿಂಗ್ ಕೋಚ್, ಮೆಂಟರ್ ದಿನೇಶ್ ಕಾರ್ತಿಕ್ ಮೊದ್ಲೆಲ್ಲಾ ನಾವು ಕೊಹ್ಲಿ ಮೇಲೆ ಡಿಪೆಂಡ್ ಆಗ್ತಿದ್ವಿ. ಆದ್ರೀಗ ಉಳಿದ ಆಟಗಾರರೂ ಡೇಂಜರಸ್ ಆಗಿರೋದೇ ಪ್ಲಸ್ ಅಂದಿದ್ದಾರೆ. ಹಾಗೇ ಆಟಗಾರರ ರೆಸ್ಪಾನ್ಸಿಬಿಲಿಟಿಸ್ ಬಗ್ಗೆಯೂ ಮಾತ್ನಾಡಿದ್ದಾರೆ.

ಆರ್ ಸಿಬಿ ಈಗ ಬೆಂಕಿ!

ಪವರ್ ಪ್ಲೇನಲ್ಲೇ ಪವರ್ ಹಿಟ್ಟಿಂಗ್ ಸ್ಟಾರ್ ಫಿಲ್ ಸಾಲ್ಟ್

ನಂಬರ್ 3ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡ್ತಿರೋ ಪಡಿಕ್ಕಲ್

ಪಾಟಿದಾರ್ 250+ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸ್ತಿರೋದು

ವಿಕೆಟ್ ಕೀಪಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ಜಿತೇಶ್ ಸದ್ದು

ಡೆತ್ ಓವರ್ ಗಳಲ್ಲಿ ಸಿಕ್ಸ್ ಗಳಲ್ಲೇ ಡೀಲ್ ಮಾಡ್ತಿರೋ ಡೇವಿಡ್

ಕ್ರೂಶಿಯಲ್ ಟೈಮಲ್ಲಿ ಬ್ಯಾಟ್ & ಬಾಲ್ ನಲ್ಲಿ ಶೆಫರ್ಡ್ ಶಕ್ತಿ

ಬ್ಯಾಟಿಂಗ್ ಗೂ ಸೈ ಬೌಲಿಂಗ್ ಜೈ ಅನುಭವಿ ಕೃನಾಲ್ ಪಾಂಡ್ಯ

ಜೋಶ್ ಇಲ್ದಿದ್ರೂ ವಿಕೆಟ್ ಬೇಟೆಯಾಡ್ತಿರೋ ಬೇಟೆಗಾರ ಡಫಿ

ಸದ್ದೇ ಇಲ್ಲದೇ ಬ್ಯಾಟರ್ಸ್ ಕಾಡ್ತಿರೋ ಸ್ವಿಂಗ್ ಕಿಂಗ್ ಭುವಿ

ವಿಕೆಟ್ಸ್ ತಗೊಳ್ಳದೇ ಇದ್ರೂ ರನ್ಸ್ ಅಂತೂ ಕೊಡಲ್ಲ ಸುಯಾಶ್

ಹೀಗೆ ಓಪನಿಂಗ್ ಬ್ಯಾಟರ್ಸ್ ರಿಂದ ಹಿಡ್ದು ಡೆತ್ ಓವರ್ ಬೌಲರ್ ವರೆಗೂ ಆರ್​​ಸಿಬಿಯಲ್ಲಿ ಒರಿಜಿನಲ್ ಗ್ಯಾಂಗ್​ಸ್ಟರ್​ಗಳೇ ಇದ್ದಾರೆ. ಓಪನರ್ಸ್ ಕೈಕೊಟ್ರೆ ಮಿಡಲ್ ಆರ್ಡರ್ ಅಲ್ಲೂ ಸೆಟ್ ಆಗ್ದಿದ್ರೆ ಫಿನಿಶರ್ಸ್ ಹೀಗೆ ಬ್ಯಾಟಿಂಗ್ ಅಂತೂ ಒಬ್ರಿಗಿಂತ ಒಬ್ರು ಸೂಪರ್. ಬೌಲಿಂಗ್ ಅಂತಾ ಬಂದಾಗ್ಲೂ ಕೆಮ್ಮಂಗಿಲ್ಲ. ಈ ಸಾಲಿಡ್ ಗ್ರೂಪ್ ಹಿಂದೆ ಫ್ರಾಂಚೈಸಿಯ ಲೆಕ್ಕಾಚಾರ ಇರೋದನ್ನೂ ಮರೆಯೋಕಾಗಲ್ಲ.

ಕಡಿಮೆ ದುಡ್ಡಲ್ಲೇ ಡೆಡ್ಲಿ ಪ್ಲೇಯರ್ಸ್ ಖರೀದಿಸಿದ ಆರ್ ಸಿಬಿ!

ಆರ್​ಸಿಬಿಗೆ ಪ್ಲಸ್ ಆಗಿದ್ದೇ ಇದು ನೋಡಿ. ಉಳಿದೆಲ್ಲಾ ಫ್ರಾಂಚೈಸಿಗಳು ಸ್ಟಾರ್ ಪ್ಲೇಯರ್ಸ್ ಅನ್ಕೊಂಡು ಕೋಟಿಗಳಿಗೆ ಲೆಕ್ಕವೇ ಇಲ್ಲದಂತೆ ಹಣ ಸುದಿದಿತ್ತು. ಆದ್ರೆ ಆರ್​ಸಿಬಿ ಮಾತ್ರ ಹೆಸರಿಗಿಂತ ಸಾಮರ್ಥ್ಯ ಮುಖ್ಯ ಅಂತಾ ಆಟ ನೋಡಿ ಬಿಡ್ ಮಾಡಿತ್ತು. ಬೇರೆ ತಂಡಗಳು ಒಬ್ಬ ಪ್ಲೇಯರ್ ಮೇಲೆ ಇನ್ವೆಸ್ಟ್ ಮಾಡೋ ಅಮೌಂಟ್​​ನ ಬೆಂಗಳೂರು ಫ್ರಾಂಚೈಸಿ ಮೂರ್ನಾಲ್ಕು ಮ್ಯಾಚ್ ವಿನ್ನರ್​​ಗಳನ್ನೇ ಖರೀದಿ ಮಾಡಿದೆ. ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್​ಗೆ ಕೊಡ್ತಿರೋದು 3 ಕೋಟಿ. ಲೋಕಲ್ ಬಾಯ್ ದೇವದತ್ ಪಡಿಕ್ಕಲ್​ಗೆ 2 ಕೋಟಿ, ಬೌಲಿಂಗ್ ಕಿಂಗ್ ಜೇಕಬ್ ಡಫಿ 2 ಕೋಟಿ, ರೊಮ್ಯಾರಿಯೋ ಶೆಫರ್ಡ್ ಒಂದೂವರೆ ಕೋಟಿ,  ಸೋ ಅಲ್ಲಿಗೆ ಇವ್ರ ನಾಲ್ವರ ಸಂಭಾವನೆ ಸೇರಿದ್ರೂ 9 ಕೋಟಿ ಆಗುತ್ತೆ. ಆದ್ರೆ 15, 20 ಕೋಟಿ ತಗೊಳ್ಳೋ ಕೆಲ ಪ್ಲೇಯರ್​ಗಳು ಇವ್ರಲ್ಲಿ ಅರ್ಧದಷ್ಟು ಪ್ರದರ್ಶನ ಕೊಡ್ತಿಲ್ಲ. ಆರ್​ಸಿಬಿಯ ಇದೇ ಸ್ಮಾರ್ಟ್ ಮೂವ್ ಪ್ಲಸ್ ಆಗ್ತಿದೆ. ಌಂಡ್ ತಂಡದ ಈ ಬದಲಾವಣೆ ಹಿಂದೆ ಇರೋದು ಹಾಗೇ ಆನ್​ಫೀಲ್ಡ್ ಪರ್ಫಾಮೆನ್ಸ್ ಹಿಂದೆ ಇರೋದು ಡಿಕೆ ಅನ್ನೋ ಮಾಸ್ಟರ್ ಮೈಂಡ್.

ಡಿಕೆ ಗೈಡೆನ್ಸ್ ನಿಂದಲೇ ಸ್ಫೋಟಕ ಬ್ಯಾಟಿಂಗ್ ಎಂದ ಟಿಮ್ ಡೇವಿಡ್!

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ರೂವಾರಿ ಟಿಮ್ ಡೇವಿಡ್ ತಮ್ಮ ಈಗ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಹಿಂದಿನ ಶಕ್ತಿಯೇ ದಿನೇಶ್ ಕಾರ್ತಿಕ್ ಎಂದಿದ್ದಾರೆ. ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ಮಾತನಾಡಿದ ಟಿಮ್ ಡೇವಿಡ್, ನಾನು ನನ್ನ ಸಹಜ ಆಟವನ್ನೇ ಆಡ್ತೇನೆ. ಬಟ್ ಅದಕ್ಕಾಗಿ ನಾನು ಪ್ರಿಪೇರ್ ಆಗೋದ್ರ ಮೇಲೆ ಜಾಸ್ತಿ ನಂಬಿಕೆ. ದಿನೇಶ್ ಕಾರ್ತಿಕ್ ಅವರಂತಹ ಅನುಭವಿ ಆಟಗಾರನ ಜೊತೆ ಕೆಲಸ ಮಾಡಿದ್ದು ಖುಷಿಯ ವಿಚಾರ. ಇಲ್ಲಿನ ಕಂಡೀಷನ್ಸ್​ಗೆ ಹೇಗೆ ಹೊಂದಿಕೊಳ್ಳಬೇಕು ಅನ್ನೋ ಬಗ್ಗೆ ಅವ್ರು ಕೊಟ್ಟಂತ ಅಡ್ವೈಸ್​ಗಳೇ ಪ್ರೆಶರ್ ಫ್ರೀಯಾಗಿ ಬ್ಯಾಟ್ ಬೀಸಲು ಕಾರಣ ಎಂದಿದ್ದಾರೆ. ಒಟ್ನಲ್ಲಿ ಆರ್​ಸಿಬಿ ಈಗ ನಡೆದಿದ್ದೇ ದಾರಿಯಾಗಿದೆ. ಎದುರಾಳಿಗಳ ಎದೆನಡುಗಿಸೋ ಮಟ್ಟಕ್ಕೆ ಪರ್ಫಾಮ್ ಮಾಡ್ತಿದ್ದಾರೆ. ಆರ್​ಸಿಬಿಯ ಸ್ಲೋಗಲ್ ಆಡೋಕೆ ಬಂದಿಲ್ಲ ಆಳೋಕೆ ಬಂದಿದ್ದೇವೆ ಅನ್ನೋ ಥರ ಒಜಿ ಗ್ಯಾಂಗ್ ಮುನ್ನುಗ್ತಿದೆ.

Shantha Kumari