ಚಿನ್ನುಮರಿ ಇನ್ನು ಮುಂದೆ ಬೆಂಕಿಮರಿ – ಜಯಂತ್ ವಿರುದ್ಧ ಸೇಡು ತೀರಿಸಿಕೊಳ್ಳಲು ಜಾನು ರೆಡಿ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕಥೆ ರೋಚಕವಾಗಿ ಸಾಗುತ್ತಿದೆ. ಇಷ್ಟು ದಿನ ಚಿನ್ನು ಮರಿ ಹಾಯಾಗಿದ್ದಳು. ಸೈಕೋ ಗಂಡನ ಕಾಟವಿಲ್ಲದೇ ಮಾವನ ಮನೆಯಲ್ಲಿ ವಿಶ್ವನ ನೆರಳಲ್ಲಿ ಆರಾಮಾಗಿದ್ದಳು. ಇದೀಗ ಮತ್ತೆ ಜಯಂತ್ ಮನೆಗೆ ಜಾನು ಕಾಲಿಡುತ್ತಿದ್ದಾಳೆ. ಆದರೆ, ಅವಳೀಗ ಚಿನ್ನುಮರಿಯಲ್ಲ. ಬೆಂಕಿಮರಿ ಆಗಿ ಕಾಲಿಡುತ್ತಿದ್ದಾಳೆ.
ಇದನ್ನೂ ಓದಿ:ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಮನೆಗೆ ಪುಟ್ಟ ಲಕ್ಷ್ಮೀ ಆಗಮನ! – ಹೆಣ್ಣು ಮಗುವಿಗೆ ಜನ್ಮ ನೀಡಿದ ಮಾನಸ ಮನೋಹರ್!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ತನ್ನ ಗಂಡ ಜಯಂತ್ ಜೊತೆ ಗಂಡನ ಮನೆಗೆ ಕಾಲಿಡುತ್ತಿದ್ದಾಳೆ. ಇಷ್ಟು ದಿನ ಪ್ರೀತಿಯೆಂಬ ಪಂಜರದಲ್ಲಿ ಉಸಿರುಗುಟ್ಟಿ ಬದುಕುತ್ತಿದ್ದ ಚಿನ್ನುಮರಿ ಬದಲಾಗಿದ್ದಾಳೆ. ಸೈಕೋ ಗಂಡನ ವಿರುದ್ಧ ಸೇಡಿಗೆ ಇಳಿದಿದ್ದಾಳೆ. ಪತಿಯಿಂದ ವಿಚಿತ್ರ ಹಿಂಸೆ ಅನುಭವಿಸುತ್ತಿದ್ದ ಜಾನು ಇನ್ನು ಮುಂದೆ ಬೆಂಕಿ ಬಿರುಗಾಳಿಯಾಗಿ ಗಂಡನನ್ನು ಕಾಡುತ್ತಾಳೆ. ಜಯಂತ್ನ ತಂತ್ರಗಳನ್ನೇ ಬಳಸಿ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಜಾಹ್ನವಿಯ ಈ ಹೊಸ ಅವತಾರ ಧಾರಾವಾಹಿಯ ಕಥೆಯಲ್ಲಿ ಇನ್ನು ಮುಂದೆ ನೋಡಬಹುದು.
ಜಯಂತ್ ಹಾಗೂ ಜಾಹ್ನವಿ ಮತ್ತೆ ಒಂದಾಗಿದ್ದಾರೆ. ಇನ್ಮೇಲೆ ಜಯಂತ್ಗೆ ನರಕ ತೋರಿಸಲು ಜಾಹ್ನವಿ ರೆಡಿ ಆದಂತೆ ಇದೆ. ಈ ಸಂದರ್ಭದ ಪ್ರೋಮೋ ಜೀ ಕನ್ನಡ ಹಂಚಿಕೊಂಡಿದೆ. ಜಾಹ್ನವಿಯನ್ನು ಪ್ರೀತಿಸಿ ಮದುವೆ ಆದವನು ಜಯಂತ್. ಈ ಮದುವೆ ನಡೆಯುವುದಕ್ಕೂ ಮೊದಲು ಜಯಂತ್ ಒಳ್ಳೆಯವನು ಎಂದು ಜಾಹ್ನವಿ ಅಂದುಕೊಂಡಿದ್ದಳು. ಆದರೆ, ಮದುವೆ ಆದ ಬಳಿಕ ಆತನ ನಿಜವಾದ ಬಣ್ಣ ಗೊತ್ತಾಯಿತು. ಸದಾ ಜಾಹ್ನವಿಯನ್ನು ಚಿನ್ನುಮರಿ ಎಂದೇ ಕರೆಯುತ್ತಿದ್ದ ಜಯಂತ್, ಆಕೆಗೆ ಪ್ರೀತಿ ಹೆಸರಲ್ಲಿ ಹಿಂಸೆ ನೀಡುತ್ತಿದ್ದ. ಇದರಿಂದಾಗಿ ಜಾನುಗೆ ಜಯಂತ್ ಜೊತೆ ನೆಮ್ಮದಿಯಲ್ಲಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೂ ಜಾನು ಜಯಂತ್ನಿಂದ ದೂರವಾಗಿದ್ದಳು. ಇದೀಗ ಧಾರಾವಾಹಿ ಕಥೆಯಲ್ಲಿ ಮತ್ತೆ ಜಯಂತ್ ಜಾನು ಒಂದಾಗಿದ್ದಾರೆ. ಹೀಗೆ ಗಂಡನ ಜೊತೆ ಬರುವ ಜಾನು ಬದಲಾಗಿದ್ದಾಳೆ. ಈಗ ಜಾನು ಧೈರ್ಯವಂತೆ, ಪಂಜರದ ಪಕ್ಷಿಯಲ್ಲ.. ಹಾರಾಡಲು ಕಲಿತಿದ್ದಾಳೆ. ತನ್ನ ಜೊತೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲಿದ್ದಾಳೆ.

ನೋಡಿರಿ

