24 ಗಂಟೆಗಳಲ್ಲಿ RR ರಾಜಯೋಗ ಕಸಿದುಕೊಂಡ RCB- ಅಗ್ರ ಸ್ಥಾನದಲ್ಲಿ ಅಲಂಕರಿಸಿದ ಬೆಂಗಳೂರು ಟೀಮ್

24 ಗಂಟೆಗಳಲ್ಲಿ RR ರಾಜಯೋಗ ಕಸಿದುಕೊಂಡ RCB- ಅಗ್ರ ಸ್ಥಾನದಲ್ಲಿ ಅಲಂಕರಿಸಿದ ಬೆಂಗಳೂರು ಟೀಮ್

ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿ ಇದುವರೆಗೆ ರಾಜಸ್ಥಾನ್ ರಾಯಲ್ಸ್ ಇತ್ತು. ಆದರೆ, ರಾಜಸ್ತಾನ್ ಅಗ್ರಸ್ಥಾನದಲ್ಲಿ ಅಲಂಕರಿಸಿದ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿದೆ. ಚೆನ್ನೈ ತಂಡವನ್ನು ಚೆಂಡಾಡಿದ ಆರ್‌ಸಿಬಿ ತಂಡ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಇದನ್ನೂ ಓದಿ:ಲಕ್ನೋ ಗೆಲುವಿಗೆ ಸಂಜೀವ್ ಗೋಯೆಂಕಾ ಕಣ್ಣೀರು – ತಂಡದ ಗೆಲುವಿಗಾಗಿ ಜೊತೆಯಲ್ಲೇ ನಿಂತ ಮಾಲೀಕ

ಐಪಿಎಲ್‌ನಲ್ಲಿ ಇದುವರೆಗೆ 11 ಪಂದ್ಯಗಳು ನಡೆದಿವೆ. ಪ್ರತಿ ತಂಡವು ಕನಿಷ್ಠ ಎರಡು ಪಂದ್ಯಗಳನ್ನು ಆಡಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಎರಡೂ ತಂಡಗಳು ಈ ಬಾರಿ ಗೆಲುವಿನ ಶುಭಾರಂಭ ಮಾಡಿವೆ. ಹೀಗಾಗಿ ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರ ಸ್ಥಾನಕ್ಕಾಗಿ ಉಭಯ ತಂಡಗಳ ನಡುವೆ ಹೋರಾಟ ನಡೆಯುತ್ತಿದೆ. ಐಪಿಎಲ್ 2026 ರ 9 ನೇ ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್​​ನಲ್ಲಿ ರಾಜಸ್ಥಾನ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಇದಾದ ಕೇವಲ 24 ಗಂಟೆಗಳಲ್ಲಿ ರಾಜಸ್ಥಾನ ನಂಬರ್-1 ಸ್ಥಾನವನ್ನು ಕಳೆದುಕೊಂಡಿದೆ.  ಚೆನ್ನೈ ತಂಡವನ್ನು ಭರ್ಜರಿಯಾಗಿ ಸೋಲಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ರಾಜಸ್ಥಾನ (2.233) ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ (1.170) ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್ 0.637 ರನ್​ ರೇಟ್ ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇತರ ತಂಡಗಳಲ್ಲಿ, ಮುಂಬೈ ಇಂಡಿಯನ್ಸ್ ಆರನೇ ಸ್ಥಾನದಲ್ಲಿದೆ. 11 ಪಂದ್ಯಗಳ ನಂತರ, ಗುಜರಾತ್ ಟೈಟಾನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಮಾತ್ರ ಇನ್ನೂ ಗೆಲುವಿನ ಖಾತೆ ಇನ್ನೂ ತೆರೆದೇ ಇಲ್ಲ.

Sulekha