ಲಕ್ನೋ ಗೆಲುವಿಗೆ ಸಂಜೀವ್ ಗೋಯೆಂಕಾ ಕಣ್ಣೀರು – ತಂಡದ ಗೆಲುವಿಗಾಗಿ ಜೊತೆಯಲ್ಲೇ ನಿಂತ ಮಾಲೀಕ

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸೋತಾಗ ಸಿಟ್ಟು ತೋರುವುದು, ಸೋಲು ಕಂಡಾಗ ನೋವು ತೋಡಿಕೊಳ್ಳುವುದನ್ನು ಇಷ್ಟು ದಿನ ಕ್ರಿಕೆಟ್ ಪ್ರೇಕ್ಷಕರು ನೋಡಿದ್ದರು. ಇದೀಗ ತನ್ನ ತಂಡ ಗೆದ್ದಾಗ ಸಂಜೀವ್ ಗೋಯೆಂಕಾ ಅವರು ಭಾವುಕರಾಗಿದ್ದು, ಜೊತೆಗೆ ಕಣ್ಣೀರು ಹಾಕಿದ್ದು ಕೂಡಾ ಲಕ್ನೋ ಅಭಿಮಾನಿಗಳ ಮನಕಲಕುವಂತೆ ಮಾಡಿದೆ.
ಇದನ್ನೂ ಓದಿ:ಬದ್ಧ ವೈರಿ ಚೆನ್ನೈ ವಿರುದ್ಧ ಗೆದ್ದ RCB – CSKಗೆ ಹ್ಯಾಟ್ರಿಕ್ ಸೋಲು, ಪಾಯಿಂಟ್ಸ್ ಟೇಬಲ್ ಟಾಪ್ನಲ್ಲಿ ಬೆಂಗಳೂರು
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ಜೈಂಟ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆಟಗಾರರಷ್ಟೇ ಗಮನ ಸೆಳೆದದ್ದು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ. ಲಕ್ನೋ ಈ ಸೀಸನ್ನ ಮೊದಲ ಗೆಲುವು ಕಂಡಿತು. ಆಗ ಲಕ್ನೋ ಮಾಲೀಕ ಸಂಜೀವ್ ಅವರು ಮಗುವಿನಂತಾಗಿದ್ದರು. ಖುಷಿಪಟ್ಟರು, ಕಣ್ಣೀರಟ್ಟರು.. ಭಾವುಕರಾದರು.. ಒಂದು ತಂಡದ ಗೆಲುವಿಗಾಗಿ ಮಾಲೀಕನ ಡೆಡಿಕೇಷನ್ ಅಭಿಮಾನಿಗಳ ಮನ ಸೆಳೆದಿದೆ.
ಐಪಿಎಲ್ನಲ್ಲಿ ಲಕ್ನೋ ತಂಡ ತನ್ನ ಪ್ರದರ್ಶನದಿಂದ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಮ್ಮ ನಡವಳಿಕೆಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಹಿಂದಿನ ಸೀಸನ್ಗಳಲ್ಲಿ ತಂಡದ ನಾಯಕರನ್ನು ಕ್ರೀಡಾಂಗಣದಲ್ಲೇ ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಈ ಆವೃತ್ತಿಯಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದರು. ಲಕ್ನೋ ತಂಡ ಡೆಲ್ಲಿ ವಿರುದ್ಧ ಸೋತಾಗ ತಂಡದ ನಾಯಕ ರಿಷಭ್ ಪಂತ್ಗೆ ಗೋಯೆಂಕಾ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನು ಗಮನಿಸಿದ್ದ ಬಿಸಿಸಿಐ, ಬಹಿರಂಗವಾಗಿ ಆಟಗಾರರನ್ನು ಅಥವಾ ನಾಯಕರನ್ನು ನಿಂಧಿಸಿದಂತೆ ಎಲ್ಲಾ ತಂಡಗಳ ಮಾಲೀಕರಿಗೆ ಖಡಕ್ ಸಂದೇಶ ರವಾನಿಸಿತ್ತು. ಇದೀಗ ಇದೆಲ್ಲದರ ನಡುವೆ ಇದೀಗ ಸಂಜೀವ್ ಗೋಯೆಂಕಾ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.
ಭಾನುವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಅವರ ತವರು ನೆಲದಲ್ಲಿ ಎದುರಿಸಿತ್ತು. ಸನ್ರೈಸರ್ಸ್ ತಂಡಕ್ಕೆ ಇದು ತವರು ಪಂದ್ಯವಾಗಿದ್ದರಿಂದ ತಂಡದಿಂದ ಸ್ಫೋಟಕ ಬ್ಯಾಟಿಂಗ್ನ ನಿರೀಕ್ಷೆ ಇತ್ತು. ಆದರೆ ಇದಕ್ಕೆ ಲಕ್ನೋ ವೇಗಿಗಳು ಅವಕಾಶ ಮಾಡಿಕೊಡಲಿಲ್ಲ. ತಂಡದ ಪ್ರಮುಖ 4 ವಿಕೆಟ್ಗಳು ಬಹುಬೇಗನೇ ಉದುರಿದವು. ಅಭಿಷೇಕ್ ಶರ್ಮಾ ಸೊನ್ನೆಗೆ ಔಟಾದರೆ, ಟ್ರಾವಿಸ್ ಹೆಡ್ ಕೂಡಾ ಕೇವಲ 7 ರನ್ ಗಳಿಸಿದ್ದರು. ಇವರಿಬ್ಬರೂ ಕೂಡಾ ಔಟಾದಾಗ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಂತರ ಹೈದ್ರಾಬಾದ್ ತಂಡದ ನಾಯಕ ಇಶಾನ್ ಕಿಶನ್ ಔಟಾದಾಗ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನೀಡಿದ ಪ್ರತಿಕ್ರಿಯೆಯಂತೂ ತುಂಬಾ ಭಾವುಕವಾಗಿತ್ತು. ಇಶಾನ್ ಕಿಶನ್ ಕೇವಲ 1 ರನ್ ಗಳಿಸಿ ಔಟಾದರು. ಕಿಶನ್ ಔಟಾದ ಕೂಡಲೇ ಸಂಜೀವ ಗೋಯೆಂಕಾ ತಮ್ಮ ಆಸನದಿಂದ ಮೇಲೆದ್ದು, ತಮ್ಮ ಕಿಸೆಯಲ್ಲಿದ್ದ ದೇವರ ಫೋಟೋವನ್ನು ಹೊರತೆಗೆದು ಅದನ್ನು ತಮ್ಮ ಹಣೆಗೆ ಒತ್ತಿಕೊಂಡರು. ನಂತರ ತಮ್ಮ ಎರಡು ಕೈಗಳನ್ನು ಜೋಡಿಸಿ ದೇವರಿಗೆ ನಮಸ್ಕರಿಸಿದರು. ಈ ವೇಳೆ ಅವರ ಮೊಗದಲ್ಲಿ ಸಂತಸ ತುಂಬಿ ತುಳುಕುತ್ತಿತ್ತು. ಇದೀಗ ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನೋಡಿರಿ

