ಬಲಿಷ್ಠ ಭಾರತಕ್ಕೆ ಶರಣಾದ ಬಾಂಗ್ಲಾ – ಸರಣಿ ಪ್ರವಾಸಕ್ಕೆ ಅಂಗಲಾಚಿ BCB ಪತ್ರ
ಮೋದಿ ಕಡೆ ಬೊಟ್ಟು ಮಾಡಿದ್ದೇಕೆ BCCI?

ಟಿ-20 ವಿಶ್ವಕಪ್ ಟೈಮಲ್ಲಿ ಪಾಕಿಸ್ತಾನದ ತಾಳಕ್ಕೆ ಕುಣಿದು ನಾವು ಭಾರತಕ್ಕೆ ಕಾಲಿಡಲ್ಲ ಅಂತಾ ಟೂರ್ನಿಯನ್ನೇ ಬಹಿಷ್ಕಾರ ಮಾಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಈಗ ಮತ್ತೆ ಭಾರತದ ಬಾಗಿಲಿಗೆ ಬಂದು ನಿಂತಿದೆ. ದಯವಿಟ್ಟು ನಮ್ಮ ದೇಶಕ್ಕೆ ಬಂದು ಪಂದ್ಯಗಳನ್ನ ಆಡಿ ಅಂತಾ ಬಿಸಿಸಿಐ ಮುಂದೆ ಅಂಗಲಾಚಿದೆ. ವಿಶ್ವಕಪ್ ಮುಗ್ದು ತಿಂಗಳೂ ಕೂಡ ಕಳೆದಿಲ್ಲ. ಅಷ್ಟರಲ್ಲೇ ಬಾಂಗ್ಲಾ ಥಂಡಾ ಹೊಡೆದಿದೆ.
ಇದನ್ನೂ ಓದಿ : ನಾಳೆ RCB Vs CSk ಮ್ಯಾಚ್! – ಪಂದ್ಯದ ಟಿಕೆಟ್ ಖರೀದಿಗೆ ಸ್ಪೀಕರ್ ಕಚೇರಿ ಮುಂದೆ ಶಾಸಕರ ಪಿಎಗಳ ಕ್ಯೂ
ಭಾರತ ಮತ್ತು ಬಾಂಗ್ಲಾ ನಡುವಿನ ಪೊಲಿಟಿಕಲ್ ಇಶ್ಯೂಸ್ನಿಂದಾಗಿ ಕ್ರಿಕೆಟ್ ಮೇಲೂ ಎಫೆಕ್ಟ್ ಆಗ್ತಿದೆ. ಸಾಲು ಸಾಲು ಡವಲಪ್ಮೆಂಟ್ಸ್ನಿಂದ ಒಂದಕ್ಕೊಂದು ಲಿಂಕ್ ಆಗಿ ಕಗ್ಗಂಟಾಗಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆಯಿಂದ ಶುರುವಾದ ಕಿಚ್ಚು ಆ ನಂತ್ರ ಐಪಿಎಲ್ನಲ್ಲಿ ಬಾಂಗ್ಲಾ ಆಟಗಾರರನ್ನ ಕೈಬಿಡೋ ಹಂತಕ್ಕೆ ಬಂದಿತ್ತು. ಆ ನಂತ್ರ ಬಾಂಗ್ಲಾದೇಶ ಭಾರತದಲ್ಲಿ ನಡೆಯುತ್ತಿದ್ದ ಟಿ-20 ವಿಶ್ವಕಪ್ನಲ್ಲಿ ಆಡಲ್ಲ ಅಂತಾ ಹಿಂದೆ ಸರಿದಿತ್ತು. ಸೋ ಭಾರತ ಇದ್ಯಾವುದಕ್ಕೂ ಕೇರ್ ಮಾಡದೆ ಐಸಿಸಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಆದ್ರೆ ಓವರ್ ಌಕ್ಟಿಂಗ್ ಮಾಡಿ ಬಾಂಗ್ಲಾ ಸರಿಯಾಗೇ ಹೊಡೆತ ತಿಂದು ಈಗ ಮತ್ತೆ ಬಿಸಿಸಿಐ ಮುಂದೆ ಬಂದು ನಿಂತಿದೆ.
ಬಾಂಗ್ಲಾ ಪ್ರವಾಸ ಕೈಗೊಳ್ಳುವಂತೆ ಬಿಸಿಸಿಐಗೆ ಪತ್ರ ಬರೆದ ಬಾಂಗ್ಲಾ!
ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ಮೇಲೆ ಹಳೇ ಇಶ್ಯೂಗಳಿಗೆ ಎಳ್ಳುನೀರು ಬಿಡೋಕೆ ಮುಂದಾಗಿದ್ದಾರೆ. ಅದೆಲ್ಲಕ್ಕಿಂತ ಜಾಸ್ತಿ ಭಾರತವನ್ನ ಎದುರು ಹಾಕ್ಕೊಂಡು ಸರ್ವೈವ್ ಆಗೋದು ಕಷ್ಟ ಅನ್ನೋದು ಗೊತ್ತಾಗಿದೆ. ಅಂದ್ರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದೆ. ಭಾರತೀಯ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವಂತೆ ಮನವಿ ಮಾಡಿದೆ. ಬಿಸಿಸಿಐ ಮತ್ತು ಬಿಸಿಬಿ ನಡುವಿನ ಹಿಂದಿನ ಜರ್ನಿಯನ್ನ ಉಲ್ಲೇಖ ಮಾಡಿ ಮತ್ತೆ ಅದೇ ದಾರಿಯಲ್ಲಿ ನಡೆಯುವಂತೆ ಕೇಳಿಕೊಂಡಿದೆ. ತಮ್ಮ ಪತ್ರದಲ್ಲಿ ಭಾರತೀಯ ತಂಡದ ಬಾಂಗ್ಲಾದೇಶ ಪ್ರವಾಸದ ಬಗ್ಗೆಯೂ ವಿನಂತಿಸಿಕೊಂಡಿದೆ. ಕಳೆದ ವರ್ಷ ಟೀಮ್ ಇಂಡಿಯಾ ಬಾಂಗ್ಲಾದೇಶದಲ್ಲಿ 3 ಏಕದಿನ ಮತ್ತು 3 ಟಿ-20ಐಗಳನ್ನು ಆಡಬೇಕಿತ್ತು, ಆದರೆ, ಬಿಸಿಸಿಐ ಬ್ಯುಸಿ ಶೆಡ್ಯೂಲ್ನಲ್ಲಿ ಈ ವರ್ಷದ ಸೆಪ್ಟೆಂಬರ್ಗೆ ಪೋಸ್ಟ್ಪೋನ್ ಮಾಡಿತ್ತು. ಈಗಿನ ಸಿಚುಯೇಷನ್ ನೋಡಿದ್ರೆ ಸರಣಿ ನಡೆಯೋದೇ ಇಲ್ಲ ಅನ್ನೋ ಡೌಟ್ನಲ್ಲಿ ಪತ್ರ ಬರೆದಿದೆ. ಜೊತೆಗೆ ಮುಂದಿನ ವರ್ಷದ ಟೂರ್ನಿಯೂ ಕಾರಣ.
ಏಷ್ಯಾಕಪ್ ನಲ್ಲಿ ಭಾರತ ಬಾಂಗ್ಲಾಗೆ ಬರಲ್ಲ ಅನ್ನೋ ಭಯ ಕಾಡ್ತಿದ್ಯಾ?
ಅಷ್ಟಕ್ಕೂ ಇಲ್ಲಿ ಬಾಂಗ್ಲಾ ದೇಶ ಹೊಸ ನೌಟಂಕಿ ಆಟ ಆಡೋಕೆ ಕಾರಣ ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್ ಆಯೋಜನೆಯ ಹಕ್ಕು ಬಾಂಗ್ಲಾದೇಶಕ್ಕೆ ಇದೆ. ಬಾಂಗ್ಲಾದೇಶ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಲ್ಲ. ಟೀಮ್ ಇಂಡಿಯಾ ಬಾಂಗ್ಲಾದೇಶದಲ್ಲಿ ಆಡಲು ನಿರಾಕರಿಸಿದರೆ ಭಾರತದ ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಬೇಕಾಗುತ್ತೆ. ಹಿಗೇನಾದ್ರೂ ಆದ್ರೆ ಬಿಸಿಬಿಗೆ ಫೈನಾನ್ಶಿಯಲ್ಲಿ ದೊಡ್ಡ ಹೊಡೆತ ಬೀಳುತ್ತೆ ಅದಕ್ಕೂ ಮುನ್ನವೇ ಸಂಬಂಧವನ್ನ ಸರಿಪಡಿಸಿಕೊಳ್ಳೋಕೆ ನೋಡ್ತಿದೆ. ಪತ್ರದ ಬಗ್ಗೆ ಬಿಸಿಸಿಐ ಅಧಿಕಾರಿಯೂ ಸ್ಪಷ್ಟಪಡಿಸಿದ್ದಾರೆ. ಬಟ್ ಬಿಸಿಸಿಐ ಯಾವುದೇ ರಿಪ್ಲೈ ಕೊಟ್ಟಿಲ್ಲ. ಬದಲಾಗಿ ಪ್ರಧಾನಿ ಮೋದಿ ನಾಯಕತ್ವದ ಕೇಂದ್ರ ಸರ್ಕಾರದ ತೀರ್ಮಾನವೇ ಅಂತಿಮ ಅನ್ನೋ ಮೂಲಕ ಸರ್ಕಾರದ ಕಡೆ ಬೊಟ್ಟು ಮಾಡಿದ್ದಾರೆ.
ಬಾಂಗ್ಲಾ ಆಟಗಾರರಿಗೆ ಐಪಿಎಲ್ ನಲ್ಲಿ ಮತ್ತೆ ಅವಕಾಶ?
ಇನ್ನು ಮುಂದಿನ ದಿನಗಳಲ್ಲಿ ಬಾಂಗ್ಲಾ ಆಟಗಾರರು ಮತ್ತೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳೋ ಚಾನ್ಸಸ್ ಇದೆ. ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಸುಳಿವು ಕೊಟ್ಟಿದ್ದಾರೆ. 2026 ಐಪಿಎಲ್‌ಗೂ ಮುನ್ನ ಮುಸ್ತಾಫಿಜುರ್ ರೆಹಮಾನ್ ಎದುರಿಸಿದ ಸಮಸ್ಯೆಯನ್ನ ಬಾಂಗ್ಲಾದೇಶಿ ಆಟಗಾರರು ಎದಿರಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮುಸ್ತಾಫಿಜುರ್ ರೆಹಮಾನ್ ಐಪಿಎಲ್‌ನಿಂದ ಹೊರಗುಳಿದಿದ್ದು ದುರದೃಷ್ಟಕರ, ಭವಿಷ್ಯದಲ್ಲಿ ಈ ಘಟನೆ ಪುನರಾವರ್ತನೆಯಾಗುವುದಿಲ್ಲ ಎನ್ನುವ ಮೂಲಕ ಭಾರತ-ಬಾಂಗ್ಲಾ ನಡುವೆ ಎಲ್ಲವೂ ಸರಿಹೋಗಬಹುದು ಅನ್ನೋ ಹಿಂಟ್ ಕೊಟ್ಟಿದ್ದಾರೆ.

ನೋಡಿರಿ

