ಸ್ಯಾಂಡಲ್‌ವುಡ್‌ನಲ್ಲಿ ಸೈಡ್ ರೋಲ್ ಮಾಡುತ್ತೇನೆ ಎಂದ ಕೊಹ್ಲಿ!

IPL ಹಬ್ಬ ಈಗಾಗಲೇ ಶುರುವಾಗಿದೆ. ಆರ್‌ಸಿಬಿ ಉದ್ಘಾಟನಾ ಪಂದ್ಯದಲ್ಲೇ ಗೆದ್ದು ಬೀಗಿದೆ. ಇದೀಗ ಕಿಂಗ್ ಕೊಹ್ಲಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಅದೂ ಕೂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡೋದ್ರ ಬಗ್ಗೆ. ಸ್ಯಾಂಡಲ್‌ವುಡ್‌ನಲ್ಲಿ ಚಾನ್ಸ್ ಸಿಕ್ಕಿದ್ರೆ ನಾನು ಸೈಡ್‌ರೋಲ್ ಮಾಡ್ತೀನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ.. ಕಾಮಿಡಿ ಕಿಂಗ್ ಗಿಲ್ಲಿ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ?
ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಆರ್‌ಸಿಬಿ ಬಾಯ್ಸ್ ಈಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. RCB ಎರಡನೇ ಪಂದ್ಯ ಬದ್ದ ವೈರಿ ಸಿಎಸ್‌ಕೆ ವಿರುದ್ದ ನಡೆಯಲಿದೆ. ಈ ಮಧ್ಯೆ ಅವರು ದ್ಯಾನಿಶ್ ಸೇಠ್ ಜೊತೆ ಯೂಟ್ಯೂಬ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸ್ಯಾಂಡಲ್‌ವುಡ್‌ನಲ್ಲಿ ಆ್ಯಕ್ಟ್ ಮಾಡೋ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.
ಐಪಿಎಲ್ ಮ್ಯಾಚ್ ನಡೆಯುವಾಗ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಮಾಡುವ ಮೂಲಕ ನ್ಯಾಗ್ಸ್ ಅವರು ಗಮನ ಸೆಳೆಯುತ್ತಾ ಇರುತ್ತಾರೆ. ಈಗ ಅವರು ವಿರಾಟ್ ಕೊಹ್ಲಿ ಸಂದರ್ಶನ ಮಾಡಿದ್ದಾರೆ. ಆಗ ಆರ್‌ಸಿಬಿ ಮಾಲೀಕತ್ವ ಬದಲಾದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕೊಹ್ಲಿ ಕಂಪನಿ ಯಾವುದೇ ಬರಲಿ, ನ್ಯಾಗ್ಸ್ ಇದ್ದೇ ಇರ್ತಾರೆ. ನೀವು ಹಾಗೂ ಜಿರಳೆ ಮಾತ್ರ ಎಲ್ಲ ಕಡೆಗಳಲ್ಲಿ ಉಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು. ಇದಕ್ಕೆ ಕೌಂಟರ್ ಕೊಟ್ಟ ನ್ಯಾಗ್ಸ್, ‘ನಿಮಗೆ ಅಭದ್ರತಾ ಭಾವ ಕಾಡುತ್ತಿದೆಯೇ? ಹಾಗೆ ಕಾಡುತ್ತಿದ್ದರೆ ಹೇಳಿ ನಾನು ನಿಮ್ಮನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ, ಭಯಬೇಡಿ ಎಂದು ನ್ಯಾಗ್ಸ್ ಹೇಳಿದರು. ನನಗೆ ಅಭದ್ರತಾ ಭಾವ ಕಾಡುತ್ತಿಲ್ಲ. ಏಕೆಂದರೆ ಎಲ್ಲೂ ಆಗಿಲ್ಲ ಅಂದ್ರೆ ಕೊನೆಗೆ ನಿಮ್ಮ ಇನ್ಫ್ಲ್ಯುಯೆನ್ಸ್ ಬಳಸಿ ನಾನು ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡಬಹುದು. ನಿವು ಇಲ್ಲಿ ದೊಡ್ಡ ಸ್ಟಾರ್ ಅಲ್ಲವೇ? ನಾನು ಸೈಡ್ ರೋಲ್ ಮಾಡುತ್ತೇನೆ ಎಂದಿದ್ದಾರೆ ಕೊಹ್ಲಿ. ಆಗ ನ್ಯಾಗ್ಸ್ ನಾನು ನಿಮ್ಮ ಪರ ಇದ್ದೇನೆ ಭಯ ಬೇಡ ಎಂದರು. ಈ ಫನ್ ಗಮನ ಸೆಳೆದಿದೆ. .

ನೋಡಿರಿ

