CSK Vs RCB ಪಂದ್ಯಕ್ಕೂ ಮುನ್ನ RCB ಕ್ಯಾಪ್ಟನ್ ಟೆಂಪಲ್‌ ರನ್! – ತಿಮ್ಮಪ್ಪನ ದರ್ಶನ ಪಡೆದ ರಜತ್‌ ಪಾಟೀದಾರ್!

CSK Vs RCB ಪಂದ್ಯಕ್ಕೂ ಮುನ್ನ RCB ಕ್ಯಾಪ್ಟನ್ ಟೆಂಪಲ್‌ ರನ್! – ತಿಮ್ಮಪ್ಪನ ದರ್ಶನ ಪಡೆದ ರಜತ್‌ ಪಾಟೀದಾರ್!

‌ಐಪಿಎಲ್‌ 2026ರ ಉದ್ಘಾಟನಾ ಪಂದ್ಯದಲ್ಲಿ RCB ಗೆದ್ದು ಬೀಗಿದೆ. ಇದೀಗ ಹಾಲಿ ಚಾಂಪಿಯನ್‌ 2ನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ನಡುವೆಯೇ RCB ಕ್ಯಾಪ್ಟನ್‌ ರಜತ್‌ ಪಾಟೀದಾರ್‌ ಹಾಗೂ ಜಿತೇಶ್‌ ಶರ್ಮಾ ಟೆಂಪಲ್‌ ರನ್‌ ಮಾಡಿದ್ದಾರೆ. ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ:ಜೀಮ್‌ಗೆ ಬರುವ ಯುವತಿಯರೇ ಸಮೀರ್ ಟಾರ್ಗೆಟ್!‌ – ಬಗೆದಷ್ಟು ಬಯಲಾಗ್ತಿದೆ ಜಿಮ್ ಟ್ರೈನರ್ ಬಂಡವಾಳ!

ಹಾಲಿ ಚಾಂಪಿಯನ್‌ ಆರ್‌ಸಿಬಿ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬದ್ಧ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ನಾಯ ರಜತ್‌ ಪಾಟೀದಾರ್‌ ಮತ್ತು ಜಿತೇಶ್‌ ಶರ್ಮ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಉಭಯ ಆಟಗಾರರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸತತ ಎರಡು ಸೋಲು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಆದರೆ ಬಲಿಷ್ಠ ಆರ್‌ಸಿಬಿಯನ್ನು ಸೋಲಿಸುವುದು ಅಷ್ಟು ಸುಲಭ ಮಾತಲ್ಲ. ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗದಲ್ಲಿಯೂ ಸಮರ್ಥವಾಗಿದೆ.

ಇನ್ನು ಪಂದ್ಯದ ದಿನ ಬೆಂಗಳೂರು ಮೆಟ್ರೋ ಮತ್ತು ಬಿಎಂಟಿಸಿ ವಿಶೇಷ ಬಸ್ ಸೇವೆಗಳನ್ನು ಕಲ್ಪಿಸಿದೆ. ಪ್ರಯಾಣಿಕರಿಗೆ ಸುಲಭ ಮತ್ತು ಸುರಕ್ಷಿತ ಪ್ರಯಾಣಕ್ಕೆ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮುಂದಿನ ದಿನ ಮಧ್ಯರಾತ್ರಿ 2 ಗಂಟೆವರೆಗೆ ವಿಸ್ತರಿಸಿದೆ.

ವೈಟ್‌ಫೀಲ್ಡ್(ಕಾಡುಗೋಡಿ)ಯಿಂದ ರಾತ್ರಿ 12.30ಕ್ಕೆ ಮತ್ತು ಚಲ್ಲಘಟ್ಟದಿಂದ ರಾತ್ರಿ 12.45ಕ್ಕೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ 12.45ಕ್ಕೆ. ಬೊಮ್ಮಸಂದ್ರ ದಿಂದ ರಾತ್ರಿ 1ಕ್ಕೆ ಹಾಗೂ ಆರ್‌.ವಿ. ರಸ್ತೆಯಿಂದ ರಾತ್ರಿ 2ಕ್ಕೆ. ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ 1.30ಕ್ಕೆ ಕೊನೆಯ ರೈಲು ಹೊರಡಲಿದೆ.

ಎಚ್‌ಎಎಲ್ ರಸ್ತೆ ಮೂಲಕ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ, ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್‌ ಸಿಟಿಗೆ, ನಾಗವಾರ–ಟ್ಯಾನರಿ ರಸ್ತೆ ಮೂಲಕ ಆರ್‌.ಕೆ. ಹೆಗಡೆ ನಗರಕ್ಕೆ, ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‌ಶಿಪ್‌ಗೆ ಸಂಚರಿಸಲಿವೆ. ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ಹೊಸಕೋಟೆ, ಬನಶಂಕರಿ ನಿಲ್ದಾಣಗಳಿಗೆ ಬಸ್‌ ಇರಲಿದೆ.

Shwetha M