CSK ಬೇಟೆಗೆ ಹೀಗಿದೆ RCB ಪಡೆ – ಹೇಜಲ್GOD ಬಂದ್ರೆ ಡಫಿ ಡ್ರಾಪ್?
ಚೆನ್ನೈ ಚೆಂಡಾಡಲು ಶೆಫರ್ಡ್ ತಾಲೀಮು!

CSK ಬೇಟೆಗೆ ಹೀಗಿದೆ RCB ಪಡೆ – ಹೇಜಲ್GOD ಬಂದ್ರೆ ಡಫಿ ಡ್ರಾಪ್?ಚೆನ್ನೈ ಚೆಂಡಾಡಲು ಶೆಫರ್ಡ್ ತಾಲೀಮು!

ಐಪಿಎಲ್ ಉದ್ಘಾಟನಾ ಪಂದ್ಯದ ಬಳಿಕ ಆರ್​ಸಿಬಿಗೆ ಲಾಂಗ್ ಬ್ರೇಕ್ ಸಿಕ್ಕಿದ್ದು ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಅದೂ ಕೂಡ ಬದ್ಧವೈರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ. ಚಿನ್ನಸ್ವಾಮಿ ಮೈದಾನದಲ್ಲೇ ಈ ಮ್ಯಾಚ್ ನಡೆಯಲಿದ್ದು ಹೈವೋಲ್ಟೇಜ್ ಪಂದ್ಯಕ್ಕಾಗಿ ಫ್ಯಾನ್ಸ್ ಅಂತೂ ಫುಲ್ ಎಕ್ಸೈಟ್ ಆಗಿದ್ದಾರೆ. ಸದ್ಯಕ್ಕೆ ಆರ್ಸಿಬಿ ಇರೋ ಫಾರ್ಮ್ ನೋಡಿದ್ರೆ ರೆಡ್ ಆರ್ಮಿಯೇ ಗೆದ್ದು ಬೀಗೋ ಎಲ್ಲಾ ಚಾನ್ಸಸ್ ಕಾಣ್ತಿದೆ. ಚೆನ್ನೈ ವಿರುದ್ಧದ ಪ್ರತಿಷ್ಠೆಯ ಪಂದ್ಯಕ್ಕೆ ಆರ್​ಸಿಬಿ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋ ಕುತೂಹಲವೂ ಇದೆ.

ಇದನ್ನೂ ಓದಿ : KKR ಸೋಲಿಸಿ ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್‌ ಹೈದರಾಬಾದ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್​ನ ಹಾಲಿ ಚಾಂಪಿಯನ್ಸ್.. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್​ನಲ್ಲಿ 5 ಬಾರಿ ಟ್ರೋಫಿ ವಿನ್ನರ್ಸ್. ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿಯಂಥ ಲೆಜೆಂಡರಿ ಕ್ರಿಕಟರ್​ಗಳಿಂದಾಗೇ ವರ್ಲ್ಡ್ ವೈಡ್ ಫ್ಯಾನ್ ಬೇಸ್ ಹೊಂದಿರೋ ತಂಡಗಳು. ಸದ್ಯ ಭಾನುವಾರ ಐಪಿಎಲ್​ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗೋಕೆ ರೆಡಿಯಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಹೈಫೀವರ್ ಇರುವಂಥ ಕ್ಲ್ಯಾಶ್ ಇದು. ಬೆಂಗಳೂರು ತಂಡಕ್ಕೆ ಇದು ಎರಡನೇ ಮ್ಯಾಚ್ ಆಗಿದ್ರೆ ಸಿಎಸ್​ಕೆಗೆ ಇದು ಮೂರನೇ ಪಂದ್ಯ. ಮೊದಲ ಮ್ಯಾಚಲ್ಲಿ ಭರ್ಜರಿಯಾಗೇ ಗೆದ್ದಿರೋ ಬೆಂಗಳೂರು ಎರಡನೇ ಪಂದ್ಯವನ್ನ ಅದೂ ಕೂಡ ತವರಿನ ಮೈದಾನದಲ್ಲೇ ಗೆದ್ದು ಬೀಗೋಕೆ ಕಾಯ್ತಿದೆ. ವಿನ್ನಿಂಗ್ ಜರ್ನಿ ಅನ್ನೋದಕ್ಕಿಂತ ಚೆನ್ನೈ ವಿರುದ್ಧದ ಗೆಲುವು ಒಂಥರಾ ಪ್ರತಿಷ್ಠೆ ಕೂಡ. ಹೀಗಾಗಿ ಪ್ಲೇಯಿಂಗ್ 11 ಬಗ್ಗೆಯೂ ಚರ್ಚೆಯಾಗ್ತಿದೆ. ಅದಕ್ಕೆ ಕಾರಣ ಜೋಶ್ ಹೇಜಲ್​ವುಡ್.

ಜೋಶ್ ಗಾಗಿ ಜಾಗ ಬಿಟ್ಟುಕೊಡ್ತಾರಾ ಜೇಕಬ್ ಡಫಿ?

ಹೈದ್ರಾಬಾದ್ ವಿರುದ್ಧದ ಉದ್ಘಾಟನಾ ಮ್ಯಾಚಲ್ಲಿ ಆರ್​ಸಿಬಿಯ ಗೇಮ್ ಚೇಂಜರ್ ಜೇಕಬ್ ಡಫಿ. ಬೌಲಿಂಗ್​ನಲ್ಲಿ ಅವ್ರು ಮ್ಯಾಜಿಕ್ ಮಾಡದೇ ಇದ್ರೆ ಹೈದ್ರಾಬಾದ್ ಮತ್ತಷ್ಟು ಸ್ಕೋರ್ ಮಾಡೋ ಚಾನ್ಸಸ್ ಇತ್ತು. 4 ಓವರ್​ಗಳನ್ನ ಬೌಲ್ ಮಾಡಿ ಕೇವಲ 22 ರನ್ಸ್ ನೀಡಿ ಅಂದ್ರೆ 24 ಎಸೆತಗಳಲ್ಲಿ 22 ರನ್ ಅಷ್ಟೇ ನೀಡಿ 3 ವಿಕೆಟ್ಸ್ ಪಡೆದಿದ್ರು. ಆದ್ರೆ ಚೆನ್ನೈ ವಿರುದ್ಧ ಆಡ್ತಾರಾ ಇಲ್ವಾ ಅನ್ನೋ ಗೊಂದಲ ಇದೆ. ಅದಕ್ಕೆ ಕಾರಣ ಜೋಶ್ ಹೇಜಲ್​ವುಡ್. ಲಾಸ್ಟ್ ಸೀಸನ್​ನಲ್ಲಿ ಚಾಂಪಿಯನ್ ಪರ್ಫಾಮೆನ್ಸ್ ನೀಡಿದ್ದ ಹೇಜಲ್​ವುಡ್ ಇಂಜುರಿಯಿಂದ ಫಸ್ಟ್ ಮ್ಯಾಚ್ ಆಡಿರಲಿಲ್ಲ. ಹೀಗಾಗಿ ಡಫಿಗೆ ಚಾನ್ಸ್ ಕೊಡಲಾಗಿತ್ತು. ಆದ್ರೀಗ ಹೇಜಲ್​ವುಡ್ ಪ್ರಾಕ್ಟೀಸ್ ಕೂಡ ಸ್ಟಾರ್ಟ್ ಮಾಡಿರೋದ್ರಿಂದ ಚೆನ್ನೈ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ 11 ಸೇರ್ತಾರಾ ಅನ್ನೋ ಮಾತುಗಳಿಗೆ. ಹಾಗೇನಾದ್ರೂ ಜೋಶ್ ಬರ್ಬೇಕು ಅಂದ್ರೆ ಡಫಿಯನ್ನ ಡ್ರಾಪ್ ಮಾಡ್ಬೇಕಾಗುತ್ತೆ. ಯಾಕಂದ್ರೆ ಇಬ್ರೂ ಕೂಡ ಫಾರಿನ್ ಪ್ಳೇಯರ್ ಕೋಟಾನೇ ಆಗಿರೋದ್ರಿಂದ ಒಬ್ರಿಗಷ್ಟೇ ಚಾನ್ಸ್ ಕೊಡ್ಬೋದು. ಬಟ್ ಸದ್ಯದ ಸಿಚುಯೇಷನ್ ನೋಡಿದ್ರೆ ಜೋಶ್​ರನ್ನ ಈ ಪಂದ್ಯದಿಂದಲೂ ಹೊರಗಿಡೋ ಚಾನ್ಸಸ್ ಇದೆ. ಅದೂ ಅಲ್ದೇ ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರೋದ್ರಿಂದ ವಿನ್ನಿಂಗ್ಸ್ ಕಾಂಬಿನೇಷನ್​ನೇ ಕಂಟಿನ್ಯೂ ಮಾಡೋ ಚಾನ್ಸಸ್ ಇದೆ.

 ಚೆನ್ನೈ ಬೇಟೆಗೆ ಬೆಂಗಳೂರು ಪಡೆ ರೆಡಿ!

ಫಿಲ್ ಸಾಲ್ಟ್

ವಿರಾಟ್ ಕೊಹ್ಲಿ

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್

ಜಿತೇಶ್ ಶರ್ಮಾ

ಟಿಮ್ ಡೇವಿಡ್

ರೊಮ್ಯಾರಿಯೋ ಶೆಫರ್ಡ್

ಕೃನಾಲ್ ಪಾಂಡ್ಯ

ಭುವನೇಶ್ವರ್ ಕುಮಾರ್

ಅಭಿನಂದನ್ ಸಿಂಗ್

ಜೇಕಬ್ ಡಫಿ

ಸುಯಾಶ್ ಶರ್ಮಾ

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಪರ ದೇವದತ್ ಪಡಿಕ್ಕಲ್​ರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಿತ್ತು. ಜೇಕಬ್ ಡಫಿ ಬದಲಿಗೆ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ರು. ಸೋ ಚೆನ್ನೈ ವಿರುದ್ಧದ ಮ್ಯಾಚಲ್ಲೂ ಸೇಮ್ ಫಾರ್ಮುಲಾ ಯೂಸ್ ಮಾಡ್ಬೋದು. ಌಂಡ್ ಈ ಮ್ಯಾಚಲ್ಲಿ ಎಲ್ಲರ ಕಣ್ಣು ಕೂಡ ಕೆರೆಬಿಯನ್ ದೈತ್ಯ ರೊಮ್ಯಾರಿಯೋ ಶೆಫರ್ಡ್ ಮೇಲೆ ಇದೆ.

ಚೆನ್ನೈ ಬೌಲರ್ ಗಳನ್ನು ಮತ್ತೆ ಚೆಂಡಾಡ್ತಾರಾ ಶೆಫರ್ಡ್?

ಈಗ ಆರ್​ಸಿಬಿ ವರ್ಸಸ್ ಸಿಎಸ್​ಕೆ ಮ್ಯಾಚ್ ಅಂದ್ರೆ ಕೆರೆಬಿಯನ್ ದೈತ್ಯ ರೊಮ್ಯಾರಿಯೋ ಶೆಫರ್ಡ್ ಟ್ರೆಂಡಿಂಗ್​ನಲ್ಲಿರ್ತಾರೆ. ಅದಕ್ಕೆ ಕಾರಣ 2025ರಲ್ಲಿ ಚೆನ್ನೈ ವಿರುದ್ಧದ ಅವ್ರ ಪ್ರದರ್ಶನ. ಮೇ 3ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಚೆನ್ನೈ ಬೌಲರ್​ಗಳನ್ನ ಚೆಂಡಾಡಿದ್ರು. ಕೇವಲ 14 ಎಸೆತಗಳಲ್ಲೇ 6 ಸಿಕ್ಸ್ ಹಾಗೇ 4 ಬೌಂಡರಿಗಳೊಂದಿಗೆ 53 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಅದ್ರಲ್ಲೂ ಚೆನ್ನೈ ಬೌಲರ್ ಖಲೀಲ್ ಅಹ್ಮದ್ ಬೌಲಿಂಗ್ ವೇಳೆ 19ನೇ ಓವರ್​ನಲ್ಲಿ ಬರೋಬ್ಬರಿ 33 ರನ್ಸ್ ದಾಖಲಿಸಿದ್ರು. ಹೀಗಾಗಿ ಈ ಸೀಸನ್​ನಲ್ಲೂ ಶೆಫರ್ಡ್ ಕಡೆಯಿಂದ ಅಂಥದ್ದೇ ಪರ್ಫಾಮೆನ್ಸ್ ಬರುತ್ತೆ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ಗಳನ್ನ ಹಾಕುತ್ತಾ ವೀ ಆರ್ ವೇಯ್ಟಿಂಗ್ ಅಂತಾ ಪಂದ್ಯದ ಬಿಸಿ ಏರಿಸ್ತಿದ್ದಾರೆ. ಒಟ್ನಲ್ಲಿ ಐಪಿಎಲ್​ನಲ್ಲಿ ಆರ್​ಸಿಬಿ ವರ್ಸಸ್ ಸಿಎಸ್​ಕೆ ಮ್ಯಾಚ್​ಗಳಂತೆ ಸಿಕ್ಕಾಪಟ್ಟೆ ಕ್ರೇಜ್ ಇದೆ.

Shantha Kumari