KKR ಸೋಲಿಸಿ ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್‌ ಹೈದರಾಬಾದ್‌

KKR ಸೋಲಿಸಿ ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್‌ ಹೈದರಾಬಾದ್‌

ಗುರುವಾರ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 65 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಇದು ಹೈದರಾಬಾದ್‌ಗೆ ಹಾಲಿ ಆವೃತ್ತಿಯಲ್ಲಿ ಒಲಿದ ಮೊದಲ ಗೆಲುವಾದರೆ, ಕೋಲ್ಕತಾಗೆ ಸತತ ಎರಡನೇ ಸೋಲು.

ಇದನ್ನೂ ಓದಿ: IPLನ ಬೆಸ್ಟ್ ಕ್ಯಾಪ್ಟನ್ ಶ್ರೇಯಸ್ – ಜಿಂಬಾಬ್ವೆ ಸರಣಿಗೂ ಭಾರತದ ನಾಯಕ?

 ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್‌ ತಂಡ ಆರಂಭಿಕ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ (48) ಹಾಗೂ ಟ್ರಾವಿಸ್ ಹೆಡ್ (46) ಸ್ಫೋಟಕ 81 ರನ್‌ಗಳ ಜೊತೆಯಾಟ ಮತ್ತು ಆ ಬಳಿಕ ಹೆನ್ರಿಚ್‌ ಕ್ಲಾಸೆನ್‌(52) ಬಾರಿಸಿದ ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 226 ರನ್‌ ಬಾರಿಸಿತು.

227 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಫಿನ್ ಅಲೆನ್ ಸ್ಫೋಟಕ ಆರಂಭ ನೀಡಿದರು. ನಂತರ ಬಂದ ಅಂಗ್‌ಕ್ರಿಷ್ ರಘುವಂಶಿ (52) ಹಾಗೂ ರಿಂಕು ಸಿಂಗ್ (35) ಹೋರಾಟ ನಡೆಸಿದರು. ಆದರೆ ಉಳಿದ ಬ್ಯಾಟರ್‌ಗಳ ವೈಫಲ್ಯದಿಂದ ತಂಡ 16 ಓವರ್‌ಗಳಿಗೆ 161 ರನ್‌ಗಳಿಗೆ ಆಲೌಟ್ ಆಗುವ ಮೂಲಕ 65 ರನ್‌ಗಳ ಸೋಲು ಅನುಭವಿಸಿತು. ಎಸ್‌ಆರ್‌ಎಚ್ ಪರ ಹಿರಿಯ ಬೌಲರ್‌ ಜಯದೇವ್‌ ಉನಾದ್ಕತ್ 3 ವಿಕೆಟ್ ಪಡೆದು ಮಿಂಚಿದರೆ, ನಿತೀಶ್ ಕುಮಾರ್ ಹಾಗೂ ಇಶಾನ್ ಮಲಿಂಗಾ ತಲಾ ಎರಡು ವಿಕೆಟ್ ಪಡೆದುಕೊಂಡರು.

ಸನ್‌ರೈಸರ್ಸ್‌ ತಂಡ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ  ಖಾತೆ ತೆರೆಯಿತು. ಸದ್ಯ 2 ಅಂಕದೊಂದಿಗೆ 6ನೇ ಸ್ಥಾನಿಯಾಗಿದೆ. ಸತತ ಎರಡು ಸೋಲು ಕಂಡ ಕೆಕೆಆರ್‌ 9ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಕೊನೆಯ 10ನೇ ಸ್ಥಾನದಲ್ಲಿದೆ. ರಾಜಸ್ಥಾನ್‌ ಮತ್ತು ಆರ್‌ಸಿಬಿ ಮೊದಲ ಎರಡು ಸ್ಥಾನ ಪಡೆದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್‌, ಮುಂಬೈ ಇಂಡಿಯನ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದೆ.

Kishor KV