ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಮನೆಗೆ ಪುಟ್ಟ ಲಕ್ಷ್ಮೀ ಆಗಮನ! – ಹೆಣ್ಣು ಮಗುವಿಗೆ ಜನ್ಮ ನೀಡಿದ ಮಾನಸ ಮನೋಹರ್!

ಜೊತೆ ಜೊತೆಯಲಿ, ಲಕ್ಷ್ಮಿ ನಿವಾಸದಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಮಾನಸ ಮನೋಹರ್ ಮನೆಗೆ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ. ನಟಿ ಮಾನಸ ಮನೋಹರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಖುಷಿ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಗ್ನಿಸಾಕ್ಷಿ ಧಾರಾವಾಹಿ ಪ್ರಿಯರಿಗೆ ಗುಡ್ನ್ಯೂಸ್ – ಹೊಸ ಕಥೆ, ಹೊಸ ರೂಪದಲ್ಲಿ ಬರುತ್ತಿದೆ ಅಗ್ನಿಸಾಕ್ಷಿ ಸೀರಿಯಲ್
ಇನ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ನಟಿ ಮಾನಸ, ನಮ್ಮ ಪುಟ್ಟ ದೇವತೆ ಮಾರ್ಚ್ 20, 2026ರಂದು ಜನಿಸಿದಳು. ಅವಳು ನಮ್ಮ ಕುಟುಂಬಕ್ಕೆ ಅಪಾರ ಸಂತೋಷವನ್ನು ತಂದಿದ್ದಾಳೆ, ನಿಜಕ್ಕೂ ಅವಳು ನಮ್ಮ ಪಾಲಿನ ದೇವತೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಅಂದ್ಹಾಗೆ ನಟಿ ಮಾನಸ ಮನೋಹರ್ ಅವರು ಜೀ ಕನ್ನಡ ವಾಹಿನಿಯಲ್ಲಿ ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ನಟಿಸಿದ ಬಳಿಕ ಲಕ್ಷ್ಮೀ ನಿವಾಸ’ದಲ್ಲಿ ಖಳನಾಯಕಿಯಾಗಿ ರಂಜಿಸಿದ್ದರು. ಅದಾದ ಬಳಿಕ ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ನೀಲು ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಇತ್ತೀಚೆಗೆ ಧಾರಾವಾಹಿಯಿಂದ ಹೊರ ಬಂದಿದ್ದರು. ಕೊನೆಯ ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನೆನಪನ್ನು ನಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಎಂಬುವವರ ಜೊತೆಗೆ ಎರಡನೇ ಮದುವೆಯಾಗಿದ್ದರು. ಸದ್ಯ ನಟ ಮೊದಲ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ನೋಡಿರಿ

