ಸೋತ ಪಂತ್ ಗೂ ಗೋಯೆಂಕಾ ಕ್ಲಾಸ್ – ಓವರ್ ಕಾನ್ಫಿಡೆನ್ಸ್ ನಲ್ಲಿ KL ಸೊನ್ನೆ
ಟಾಸ್ ಗೆದ್ರಷ್ಟೇ ಮ್ಯಾಚ್ ಗೆಲ್ಲೋದಾ?

ಐಪಿಲ್ ನಲ್ಲಿ ಎಲ್ಲ ತಂಡಗಳಿಗೆ ಫಸ್ಟ್ ರೌಂಡ್ ಮುಗೀತು. ಅಂದ್ರೆ ಎಲ್ರು ಕೂಡ ಮೊದಲ ಪಂದ್ಯಗಳನ್ನ ಆಡಿದ್ದಾರೆ. ಬಟ್ ಇಂಟ್ರೆಸ್ಟಿಂಗ್ ಅಂದ್ರೆ ಕಳೆದ ಐದು ಮ್ಯಾಚ್ ಗಳಲ್ಲೂ ಯಾರೊಬ್ಬರಿಂದಲೂ ತಮ್ಮ ಸ್ಕೋರ್ ಡೆಫಿನ್ಸ್ ಮಾಡಿಕೊಳ್ಳೋಕೆ ಆಗಿಲ್ಲ. ಎಲ್ಲ ಪಂದ್ಯಗಳನ್ನು ಚೇಂಸಿಂಗ್ ಮಾಡಿದ ತಂಡಗಳೇ ಗೆದ್ದಿವೆ. ನಿನ್ನೆ ಮ್ಯಾಚ್ ನಲ್ಲಿ ಲುನೊ ಗೆ ಅವಕಾಶ ಇದ್ರೂ ಕೈ ಚೆಲ್ಲಿದ್ರು. ಲಕ್ನೋನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ 18.4 ಓವರ್ಗಳಲ್ಲಿ 141 ರನ್ಗಳಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17.1 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಮ್ಯಾಚ್ ಕೂಡ ಪಂಜಾಬ್ ಗುಜರಾತ್ ನಂತೆಯೇ ಇಬ್ರಿಗೂ ಗೆಲುವಿನ ಚಾನ್ಸಸ್ ಕ್ರಿಯೇಟ್ ಮಾಡಿತ್ತು. ಆದ್ರೆ ಅಂತಿಮವಾಗಿ ಪಂಜಾಬ್ ಗೆದ್ದಿತ್ತು. ಈ ಮ್ಯಾಚಲ್ಲೂ ಅದೇ ಆಯ್ತು.
ಇದನ್ನೂ ಓದಿ : RR ಬೌಲಿಂಗ್ ಬ್ರಹ್ಮಾಸ್ತ್ರ ಬ್ರಿಜೇಶ್ – ಚೊಚ್ಚಲ ಮ್ಯಾಚಲ್ಲೇ ಚೆನ್ನೈಗೆ ಪಂಚ್!
ಆರಂಭದಲ್ಲಿ ಎಡವಿದ್ರೂ ಗೆದ್ದ ಡೆಲ್ಲಿ!
ಟಾಸ್ ಸೋತ ಎಲ್ ಎಸ್ ಜಿಗೆ ಕೈಕೊಟ್ಟ ಬ್ಯಾಟರ್ಸ್
ಅಬ್ದುಲ್ ಸಮದ್ 36, ಮಿಚೆಲ್ ಮಾರ್ಷ್ 35 ರನ್ಸ್
18.4 ಓವರ್ ಗಳಲ್ಲೇ 142 ರನ್ಸ್ ಆಲೌಟ್
ಡೆಲ್ಲಿ ಪರ ರಾಹುಲ್ ಫಸ್ಟ್ ಬಾಲ್ ಗೋಲ್ಡನ್ ಡಕ್
26ಕ್ಕೆ 4 ವಿಕೆಟ್.. ಆಮೇಲೆ ಯಾವುದೇ ವಿಕೆಟ್ ಇಲ್ಲದೆ ಗೆಲುವು
ಟ್ರಿಸ್ಟನ್ ಸ್ಟಬ್ಸ್ 39 ರನ್ಸ್ , ಸಮೀರ್ ರಿಜ್ವಿ 70 ರನ್ಸ್
17.1 ಓವರ್ ನಲ್ಲೇ 4 ವಿಕೆಟ್ ನಷ್ಟಕ್ಕೆ ಗೆದ್ದ ಡೆಲ್ಲಿ

ನೋಡಿರಿ

