ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿ – ರಿಷಭ್ ಪಂತ್‌ಗೆ ಕೆ.ಎಲ್. ರಾಹುಲ್ ಸವಾಲ್

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿ – ರಿಷಭ್ ಪಂತ್‌ಗೆ ಕೆ.ಎಲ್. ರಾಹುಲ್  ಸವಾಲ್

ಐಪಿಎಲ್‌ನ ಈ ಸೀಸನ್‌ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಮೊದಲ ಪಂದ್ಯ ಆಡಲಿದ್ದಾರೆ. ಶುಭಾರಂಭದ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ:ಅನ್ನ ಕೊಟ್ಟ ಕೈ ಇನ್ನಿಲ್ಲ.. – ಅಜ್ಜಿ ಮೃತದೇಹ ಹಿಡಿದು ಕಣ್ಣೀರು ಹಾಕಿದ ಕೋತಿ!

ಈ ಬಾರಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಕಳೆದ ಆವೃತ್ತಿಯಲ್ಲಿ ಈ ಎರಡು ತಂಡಗಳೂ ಪ್ಲೇ-ಆಫ್‌ ಪ್ರವೇಶಿರಲಿಲ್ಲ. ಇದೀಗ ಎರಡು ತಂಡಗಳು ಬಲಿಷ್ಠ ಪಡೆ ಕಟ್ಟಿದ್ದು, ಗೆಲುವಿನ ತವಕದಲ್ಲಿವೆ.

ಡೆಲ್ಲಿ ತಂಡದಲ್ಲಿರುವ ಕೆ.ಎಲ್‌.ರಾಹುಲ್‌ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆ ಇಡಲಾಗಿದ್ದು, ಮೊದಲ ಪಂದ್ಯದಲ್ಲೇ ಅಬ್ಬರಿಸುವ ಕಾತರದಲ್ಲಿದ್ದಾರೆ. ಅಕ್ಷರ್‌ ಪಟೇಲ್‌ ನಾಯಕತ್ವದ ತಂಡದಲ್ಲಿ ಟ್ರಿಸ್ಟನ್‌ ಸ್ಟಬ್ಸ್‌, ಡೇವಿಡ್‌ ಮಿಲ್ಲರ್‌ರಂತದ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ರಣಜಿಯಲ್ಲಿ ಅಬ್ಬರಿಸಿದ್ದ ವೇಗಿ ಆಖಿಬ್‌ ನಬಿ ಐಪಿಎಲ್‌ನಲ್ಲೂ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ. ಇನ್ನು ಡೆಲ್ಲಿ ತಂಡದಲ್ಲಿ ಕೆ.ಎಲ್ ರಾಹುಲ್ ಮತ್ತು ಪೃಥ್ವಿ ಶಾ ಆರಂಭಿಕರಾಗಿ ಬ್ಯಾಟ್ ಬೀಸಲಿದ್ದಾರೆ.

ರಿಷಭ್‌ ಪಂತ್‌ ನಾಯಕತ್ವದ ಲಖನೌ ತಂಡ ವಿದೇಶಿ ಆಟಗಾರರ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಮಾರ್ಕ್‌ರಮ್‌, ಮಿಚೆಲ್‌ ಮಾರ್ಷ್‌, ಪೂರನ್‌ ತಂಡದ ಆಧಾರಸ್ತಂಭ. ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿರುವ ವೇಗಿ ಮೊಹಮ್ಮದ್ ಶಮಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ

ಲಖನೌ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್‌, ಏಯ್ಡನ್ ಮಾರ್ಕ್‌ರಮ್‌, ನಿಕೋಲಸ್ ಪೂರನ್‌, ರಿಷಭ್ ಪಂತ್‌(ನಾಯಕ), ಆಯುಷ್ ಬದೋನಿ, ಅಬ್ದುಲ್ ಸಮದ್‌, ಹಿಮ್ಮತ್‌ ಸಿಂಗ್, ಶಾಬಾಜ್‌ ಅಹಮದ್, ಮೊಹಮ್ಮದ್ ಶಮಿ, ಮಯಾಂಕ್‌ ಯಾದವ್, ದಿಗ್ವೇಶ್‌ ರಾಥಿ, ಏನ್ರಿಚ್ ನೋಕಿಯಾ.

ಡೆಲ್ಲಿ ಕ್ಯಾಪಿಟಲ್ಸ್: ಕೆ ಎಲ್ ರಾಹುಲ್‌, ಪಥುಮ್ ನಿಸ್ಸಾಂಕ, ನಿತೀಶ್‌ ರಾಣಾ, ಟ್ರಿಸ್ಟಿನ್ ಸ್ಟಬ್ಸ್‌, ಅಕ್ಷರ್‌ ಪಟೇಲ್(ನಾಯಕ), ಡೇವಿಡ್ ಮಿಲ್ಲರ್‌, ಅಶುತೋಷ್‌ ಶರ್ಮಾ, ವಿಪ್ರಾಜ್‌ ನಿಗಮ್, ಆಖಿಬ್‌ ನಬಿ ಧರ್, ದುಶ್ಮಂತ ಚಮೀರಾ, ಕುಲ್ದೀಪ್‌ ಯಾದವ್, ಟಿ ನಟರಾಜನ್‌.

Sulekha