ಇರಾನ್ ಮೇಲೆ ಯುದ್ಧ ಇನ್ನು 2-3 ವಾರಗಳಲ್ಲಿ ಕೊನೆಯಾಗುತ್ತೆ! – ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶಾಕಿಂಗ್‌ ಹೇಳಿಕೆ!

ಇರಾನ್ ಮೇಲೆ ಯುದ್ಧ ಇನ್ನು 2-3 ವಾರಗಳಲ್ಲಿ ಕೊನೆಯಾಗುತ್ತೆ! – ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶಾಕಿಂಗ್‌ ಹೇಳಿಕೆ!

ಇರಾನ್ & ಅಮೆರಿಕ- ಇಸ್ರೇಲ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಈಗಾಗಲೇ ಈ ಯುದ್ದದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಯುದ್ದದಿಂದಾಗಿ ಹಲವು ದೇಶಗಳ ಮೇಲೆ ಎಫೆಕ್ಟ್‌ ಬಿದ್ದಿದೆ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್ ವಿರುದ್ಧದ ಯುದ್ಧ ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾಹನ ಸವಾರರಿಗೆ ಬಿಗ್‌ ಶಾಕ್‌! – ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ!

ಇರಾನ್ ವಿರುದ್ಧ ಮುಗಿಬಿದ್ದಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ಯಾಕೋ ಈಗ ತಣ್ಣಗಾಗಿರುವಂತೆ ಕಾಣುತ್ತಿದ್ದು, ಯುದ್ಧದ ಕುರಿತು ಆರಂಭದಲ್ಲಿದ್ದ ಉತ್ಸಾಹ ಈಗ ಕಾಣದಂತಾಗಿದೆ. ಇದೀಗ ಟ್ರಂಪ್, ಅಮೆರಿಕ ಶೀಘ್ರದಲ್ಲೇ ಇರಾನ್​ನಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲಿದೆ. ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಗುರಿಯನ್ನು ಸಾಧಿಸಲಾಗಿದೆ. ಈ ಸಂಘರ್ಷವನ್ನು ಮುಂದುವರಿಸಲು ಅಮೆರಿಕ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಧನ ಬೆಲೆ ಏರಿಕೆಯ ಪರಿಣಾಮ ಕುರಿತು ಕೇಳಿದಾಗ, ನಾವು ನಮ್ಮ ಕೆಲಸವನ್ನು ಮುಗಿಸುತ್ತಿದ್ದೇವೆ. ಬಹುಶಃ ಎರಡು ಅಥವಾ ಮೂರು ವಾರಗಳಲ್ಲಿ ನಾವು ಮುಗಿಸಲಿದ್ದೇವೆ. ನಾವು ಬೇಗನೇ ಇರಾನ್ ಬಿಟ್ಟು ಹೋಗಬೇಕಿದೆ. ಇರಾನ್‌ನಲ್ಲಿ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಕೊನೆಗೊಳಿಸಲಾಗುವುದು. ಇರಾನ್ ಸೋಲಿನ ಸನಿಹದಲ್ಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ಕಾರ್ಯಾಚರಣೆಯ ಅಂತ್ಯವು ಇರಾನ್‌ನ ಜೊತೆ ಯಾವುದೇ ಒಪ್ಪಂದ ಅವಲಂಬಿಸಿಲ್ಲ. ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿಲ್ಲ. ಇರಾನ್‌ಗೆ ಅಣ್ವಸ್ತ್ರ ತಯಾರಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದಾಗ ನಾವು ಹೊರಡುತ್ತೇವೆ. ಒಂದು ವೇಳೆ ರಾಜತಾಂತ್ರಿಕವಾಗಿ ಪರಿಹಾರ ದೊರಕಿದರೆ ಯುದ್ಧ ಇನ್ನೂ ಬೇಗನೇ ಕೊನೆಗೊಳ್ಳಬಹುದು. ಅವರು ಸಹ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ನಮಗಿಂತಲೂ ಹೆಚ್ಚಾಗಿ ಅವರೇ ಬಯಸುತ್ತಿದ್ದಾರೆ ಎಂದಿದ್ದಾರೆ.

ಒಂದು ದಿನದ ಹಿಂದಷ್ಟೇ ಟ್ರಂಪ್‌ ಕದನ ವಿರಾಮ ಮಾತುಕತೆಯನ್ನ ಇರಾನ್‌ ವಿದೇಶಾಂಗ ಸಚಿವಾಲಯ ತಳ್ಳಿಹಾಕಿತ್ತು. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕದ ಮನವಿಯನ್ನಷ್ಟೇ ಸ್ವೀಕರಿಸಿದ್ದೇವೆ. ಆದ್ರೆ ಯುದ್ಧ ಶುರುವಾದ ದಿನದಿಂದ ಈವರೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದೂ ಸ್ಪಷ್ಟಪಡಿಸಿತ್ತು.

Shwetha M