RR ಬೌಲಿಂಗ್ ಬ್ರಹ್ಮಾಸ್ತ್ರ ಬ್ರಿಜೇಶ್ – ಚೊಚ್ಚಲ ಮ್ಯಾಚಲ್ಲೇ ಚೆನ್ನೈಗೆ ಪಂಚ್!
ಕ್ರಿಕೆಟ್ಗೆ ಕಣ್ಣೀರಿಟ್ಟ ಕಾರ್ಮಿಕನ ಮಗ

ಬ್ರಿಜೇಶ್ ಶರ್ಮಾ.. ರಾಜಸ್ಥಾನ್ ರಾಯಲ್ಸ್ ತಂಡದ ಯುವ ಪ್ರತಿಭೆ. ತಮ್ಮ ಚೊಚ್ಚಲ ಪಂದ್ಯವನ್ನಾಡಿ ಇಡೀ ಕ್ರಿಕೆಟ್ ಜಗತ್ತಿನ ಗಮನ ತನ್ನತ್ತ ಸೆಳೆಯುವಂತೆ ಮಾಡಿದ್ದಾರೆ. ಇವರಿಗೆ ಜಸ್ಟ್ 27 ವರ್ಷ.. ಇವರನ್ನ ರಾಜಸ್ತಾನ್ ರಾಯಲ್ಸ್ ಜಸ್ಟ್ 30 ಲಕ್ಷ ರೂ.ಗಳ ಮೂಲಬೆಲೆಗೆ ಖರೀದಿಸಿತ್ತು. ಈ ಮೂಲಕ ಮೊದಲ ಬಾರಿಗೆ ಬ್ರಿಜೇಶ್ ಐಪಿಎಲ್‌ಗೆ ಸೆಲೆಕ್ಟ್ ಆಗಿದ್ದಾರೆ. ಹೊಸಬರು ಐಪಿಎಲ್‌ಗೆ ಸೆಲೆಕ್ಟ್ ಆಗುವುದು ದೊಡ್ಡಸಾಧನೆ, ಅದಹದ್ರಲ್ಲಿ ಈ ಸೀಸನ್ ಮೊದಲ ಪಂದ್ಯದಲ್ಲಿ ಬ್ರಿಜೇಶ್‌ಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ಕಿದೆ. ಸಿಕ್ಕ ಅವಕಾಶನ್ನ ಬ್ರಿಜೇಶ್ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ.
ಇದನ್ನೂ ಓದಿ: ಗೆಲ್ಲೋ ಮ್ಯಾಚ್ ಕೈ ಚೆಲ್ಲಿದ ಗಿಲ್ – ಸಿರಾಜ್ & ಕೃಷ್ಣಗಿಂತ ಬೌಲರ್ ಬೇಕಾ?
ತಮ್ಮ ಚೊಚ್ಚಲ ಪಂದ್ಯದಲ್ಲೇ ಆರ್‌ಆರ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬ್ರಿಜೇಶ್ ಶರ್ಮಾ ಎದುರಾಳಿ ಬ್ಯಾಟರ್‌ಗಳಿಗೆ ರನ್ ಗಳಿಸಲು ಪರದಾಡುವಂತೆ ಮಾಡಿದರು. ಸಿಎಸ್‌ಕೆ ವಿರುದ್ಧ ತಾವು ಬೌಲ್ ಮಾಡಿದ 3 ಓವರ್‌ಗಳ ಕೇವಲ 17 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟು, ಒಂದು ಪ್ರಮುಖ ವಿಕೆಟ್ ಕಬಳಿಸಿದ್ದಾರೆ. ಬ್ರಿಜೇಶ್ ಶರ್ಮಾ ತೆಗೆದ ವಿಕೆಟ್ ಸಿಎಸ್‌ಕೆ ಪಾಲಿನ ದೊಡ್ಡ ವಿಕೆಟ್ ಆಗಿತ್ತು. ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬರೋಬ್ಬರಿ 14.20 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಖರೀದಿಸಿದ್ದ ಸ್ಟಾರ್ ಆಟಗಾರ ಕಾರ್ತಿಕ್ ಶರ್ಮಾ ಅವರನ್ನು ಬ್ರಿಜೇಶ್ ಔಟ್ ಮಾಡಿದರು. ಕೇವಲ 30 ಲಕ್ಷ ರೂಪಾಯಿಗೆ ಬಿಕರಿಯಾಗಿದ್ದ ಬೌಲರ್, 14 ಕೋಟಿ ರೂಪಾಯಿಯ ಬ್ಯಾಟರ್‌ನನ್ನು ಪೆವಿಲಿಯನ್‌ಗೆ ಕಳುಹಿಸಿದ್ದು, ಕ್ರಿಕೆಟ್ ಲೋಕವೇ ಬ್ರಿಜೇಶ್ ಕಡೆ ತಿರುಗಿ ನೋಡುವಂತೆ ಮಾಡಿದೆ. ಈ ಮೂಲಕ ತನಗೆ ಕೊಟ್ಟವನ್ನ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡು, ತಂಡದ ನಂಬಿಕೆಯನ್ನ ಬ್ರಿಜೇಶ್ ಶರ್ಮಾ ಉಳಿಸಿಕೊಂಡಿದ್ದಾರೆ. ಇನ್ನೂ ಇವರು ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿ ಹಾದಿಯನ್ನ ನೋಡೋದಾದ್ರೆ.
ಬ್ರಿಜೇಶ್ ಅವರು ಐಪಿಎಲ್ ತನಕ ಬರುವುದ್ದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಾಕಷ್ಟು ಸ್ಟ್ರಗಲ್ ಮಾಡಿದ್ದಾರೆ. ಅಂದಹಾಗೇ ಜಮ್ಮು ಮತ್ತು ಕಾಶ್ಮೀರದ ಉಧಂಪುರ್‌ನ ನಿವಾಸಿಯಾಗಿರುವ ಬ್ರಿಜೇಶ್, ಅತ್ಯಂತ ಬಡತನದಿಂದ ಬಂದವರು. ಬ್ರಿಜೇಶ್ ಶ್ರೀಮಂತರಲ್ಲ, ಇವರ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದವರು. ತಾನು ದಿನಗೂಲಿ ಕೆಲಸ ಮಾಡಿದ್ರೂ, ತನ್ನ ಮಗನ ಕ್ರಿಕೆಟ್ ಕನಸನನ್ನ ನನಸು ಮಾಡಿದ್ದಾರೆ. ಮಗನನ್ನು ದೊಡ್ಡ ಕ್ರಿಕೆಟಿಗನನ್ನಾಗಿ ಮಾಡಲು ಇವರು ಪಡಬಹುದಾದ ಎಲ್ಲಾ ಕಷ್ಟಗಳನ್ನೂ ಎದುರಿಸಿದ್ದಾರೆ. ತಂದೆಯ ಜೊತೆ ಸ್ನೇಹಿತರು ಕೂಡ ಬ್ರಿಜೇಶ್ ಕ್ರಿಕೆಟ್ ಕನಸಿಗೆ ಕೈ ಜೋಡಿಸಿದ್ದಾರೆ. ಕ್ರಿಕೆಟ್ ಕಿಟ್ ಖರೀದಿಸಲು ಅಥವಾ ತರಬೇತಿಗೆ ಹೋಗಲು ಆರ್ಥಿಕ ಸಂಕಷ್ಟ ಎದುರಾದಾಗಲೆಲ್ಲಾ, ಅವರ ಸ್ನೇಹಿತರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.
ಉಧಮ್‌ಪುರದಲ್ಲಿ ಕ್ರಿಕೆಟ್ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸೂಕ್ತವಾದ ಮೂಲಸೌಕರ್ಯಗಳು ಮತ್ತು ಅವಕಾಶಗಳ ಸಿಗಲಿಲ್ಲ.. ಹಾಗಂತ ಇವರು ಸುಮ್ಮನೆ ಕೂರಲಿಲ್ಲ. ತನ್ನ ಕನಸು ನನಸು ಮಾಡಿಕೊಳ್ಳಲು, ಬ್ರಿಜೇಶ್ ಅವರು ತಮ್ಮ ಹುಟ್ಟೂರು ಹಾಗೂ ರಾಜ್ಯವನ್ನು ಬಿಟ್ಟು ಪಶ್ಚಿಮ ಬಂಗಾಳಕ್ಕೆ ವಲಸೆ ಹೋದ್ರು. ಅಲ್ಲಿ ತುಂಬಾ ಪ್ರಾಕ್ಟಿಸ್ ಮಾಡಿ ಟಿ20 ಲೀಗ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡರು.
ಬಂಗಾಳ ಟಿ20 ಲೀಗ್‌ನಲ್ಲಿ ಎಲ್ಲರ ಗಮನ ಸೆಳೆದ್ರು. ಈ ಟೂರ್ನಿಯಲ್ಲಿ ಆಡಿದ ಕೇವಲ 7 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅವರು ಆಯ್ಕೆಗಾರರ ಗಮನ ಸೆಳೆದರು. ಅವರ ಈ ಅದ್ಭುತ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೌಟ್ ವಿಭಾಗವು, ಬ್ರಿಜೇಶ್ ಅವರನ್ನು ಗುರುತಿಸಿ ಮೆಗಾ ಹರಾಜಿನಲ್ಲಿ ಖರೀದಿಸಿ ಇದೀಗ ಐಪಿಎಲ್ ವೇದಿಕೆಗೆ ಪರಿಚಯಿಸಿದೆ. ಐಪಿಎಲ್‌ನಲ್ಲೂ ಕೂಡ ತನಗೆ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡು ತಾನು ಅತ್ಯತ್ತಮ ಬೌಲರ್ ಅಂತ ತೋರಿಸಿಕೊಟ್ಟಿದ್ದಾರೆ.

ನೋಡಿರಿ

