ಬಲೆಗೆ ಬಿತ್ತು ಬಂಗಾರದ ಮೀನು! – ಗೋಲ್ಡನ್ ಫಿಶ್ ರೇಟ್ ಎಷ್ಟು ಗೊತ್ತಾ?

ಬಲೆಗೆ ಬಿತ್ತು ಬಂಗಾರದ ಮೀನು! – ಗೋಲ್ಡನ್ ಫಿಶ್ ರೇಟ್ ಎಷ್ಟು ಗೊತ್ತಾ?

ಉಡುಪಿ: ಅಪರೂಪದ ಬಂಗಾರ ಬಣ್ಣದ ಅಂಜಲ್ ಮೀನು ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.

ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಈ ಚಿನ್ನದ ಬಣ್ಣದ ಮೀನು ಅಚ್ಚರಿ ಮೂಡಿಸಿದೆ. ಬಲೆಗೆ ಬಿದ್ದಿದ್ದ ರಾಶಿ ರಾಶಿ ಮೀನುಗಳ ಮಧ್ಯೆ ಹೊಳೆಯುತ್ತಿದ್ದ ಈ  ಮೀನು ಕಂಡು ಬೆರಗುಗೊಂಡಿದ್ದಾರೆ. ಬೃಹತ್ ಗಾತ್ರ ಇದ್ದಿದ್ದರಿಂದ ಮತ್ತಷ್ಟು ಕುತೂಹಲಗೊಂಡಿದ್ದಾರೆ.  ಬಳಿಕ ಮೀನುಗಾರರೆಲ್ಲಾ ಬಂಗಾರ ಬಣ್ಣದ ಈ ಮೀನನ್ನು ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹಾಗೆ ವಿಡಿಯೋ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ತೊಗರಿ ಬೆಳೆಗಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್ – ನೆಟೆ ರೋಗದ ಹಾನಿಗೆ ಪರಿಹಾರ ಘೋಷಣೆ!

ಮಲ್ಪೆ ಕಡಲ ತೀರದ ಮೀನುಗಾರರು ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಸುಮಾರು 16 ಕೆಜಿಯ ಬಂಗಾರ ಬಣ್ಣದ ಮೀನು ಬಲೆಗೆ ಬಿದ್ದಿದೆ. ಈ ಮೀನು ಖರೀದಿಗಾಗಿ ಭಾರಿ ಪೈಪೋಟಿ ನಡೆದಿತ್ತು. ಬಳಿಕ ಸುರೇಶ್ ಎಂಬುವವರು ಕೆಜಿ ಗೆ 600 ರೂಪಾಯಿಗಳಂತೆ ಇಡೀ ಮೀನನ್ನು 9,600 ರೂಪಾಯಿಗೆ ಖರೀದಿ ಮಾಡಿದ್ದಾರೆ.

ಈ ಮೀನು ಹೆಚ್ಚಾಗಿ ಅಟ್ಲಾಂಟಿಕ್ ಸರೋವರದಲ್ಲಿ ಕಂಡು ಬರುತ್ತವೆ. ಇದನ್ನು ಗೋಲ್ಡನ್ ಫಿಶ್ ಎಂದು ಕರೆಯಲಾಗುತ್ತದೆ. ಪ್ರಾಕೃತಿಕ ವೈಚಿತ್ರ್ಯದಿಂದಾಗಿ ಅಥವಾ ಅನುವಂಶಿಕವಾಗಿ ಈ ಮೀನು ಬಂಗಾರದ ಬಣ್ಣ ಬರುತ್ತವೆ ಅಂತ ತಜ್ಞರು ತಿಳಿಸಿದ್ದಾರೆ. ಸದ್ಯ ಮಲ್ಪೆಯಲ್ಲಿ ಸಿಕ್ಕಿರೋ ಈ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

suddiyaana