ಲಾಸ್ ಏಂಜಲೀಸ್‌ನಲ್ಲಿ ರಾಮಾಯಣ ಟೀಸರ್ ರಿಲೀಸ್ – ರಾಮನ ಪಾತ್ರ ಕಂಡು ವಿದೇಶಿ ವೀಕ್ಷಕರು ಭಾವುಕ

ಲಾಸ್ ಏಂಜಲೀಸ್‌ನಲ್ಲಿ ರಾಮಾಯಣ ಟೀಸರ್ ರಿಲೀಸ್ – ರಾಮನ ಪಾತ್ರ ಕಂಡು ವಿದೇಶಿ ವೀಕ್ಷಕರು ಭಾವುಕ

ಬಾಲಿವುಡ್‌ನ ಬಹುನಿರೀಕ್ಷೆಯ ಸಿನಿಮಾ ರಾಮಾಯಣ. ಇದೀಗ ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ ರಾಮಾಯಣ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕೇವಲ 2 ಸೆಕೆಂಡ್‌ಗಳಲ್ಲಿ ರಾಮನ ಪಾತ್ರವನ್ನು ಕಂಡು ವಿದೇಶಿ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ.

ಇದನ್ನೂ ಓದಿ:ಧುರಂಧರ್ -2 ಹವಾಕ್ಕೆ ಬಾಹುಬಲಿ ದಾಖಲೆ ಉಡೀಸ್ – ಜಸ್ಟ್ 12 ದಿನಕ್ಕೆ 1400 ಕೋಟಿ ಕಲೆಕ್ಷನ್‌!

ಏಪ್ರಿಲ್ 2ರಂದು ಹನುಮ ಜಯಂತಿ. ಹೀಗಾಗಿ ಇದೇ ದಿನ ರಾಮಾಯಣ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಇದಕ್ಕೂ ಮೊದಲು ವಿದೇಶದಲ್ಲಿ ರಾಮಾಯಣ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಚಿತ್ರದ ಟೀಸರ್ ಪ್ರದರ್ಶಿಸಲಾಗಿದೆ. ಈ ಮೂಲಕ ಚಿತ್ರದ ದೃಶ್ಯ ವೈಭವವನ್ನು ಮೊದಲ ಬಾರಿಗೆ ವಿದೇಶಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷೆಯ ಸಿನಿಮಾ ರಾಮಾಯಣ. ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದಾರೆ. ಟೀಸರ್ ಪ್ರದರ್ಶನದ ಬಳಿಕ ಮಾತನಾಡಿದ ನಟ ರಣಬೀರ್ ಕಪೂರ್, ಶ್ರೀರಾಮನ ಪಾತ್ರ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಇದು ನಮ್ಮ ಪ್ರೀತಿಯ ಶ್ರಮದ ಫಲ. ಈ ದೃಶ್ಯಗಳನ್ನು ಮೊದಲು ನೋಡುತ್ತಿರುವ ಅದೃಷ್ಟವಂತರು ನೀವು. ಶತಮಾನಗಳಿಂದಲೂ ಶ್ರೀರಾಮ ಕೋಟ್ಯಂತರ ಜನರ ಆತ್ಮಸಾಕ್ಷಿಯಾಗಿದ್ದಾನೆ. ಅವನು ಮಾನವ ಚೇತನದ ವಿಜಯವನ್ನು ಸಾರುತ್ತಾನೆ. ಸಹಾನುಭೂತಿ, ಧೈರ್ಯ ಮತ್ತು ಧರ್ಮದ ಸಂಕೇತವಾಗಿರುವ ರಾಮನನ್ನು ಮರ್ಯಾದಾ ಪುರುಷೋತ್ತಮ ಅಂತ ಕರೆಯಲಾಗುತ್ತದೆ’ ಎಂದು ರಣಬೀರ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇನ್ನು ಏಪ್ರಿಲ್ 2ರಂದು ಹನುಮ ಜಯಂತಿ ಪ್ರಯುಕ್ತ ರಾಮಾಯಣ: ಪಾರ್ಟ್ 1 ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಈ ವರ್ಷದ ದೀಪಾವಳಿ ಹಬ್ಬದ ಸಮಯದಲ್ಲಿ ಸಿನಿಮಾ ತೆರೆಕಾಣಲಿದೆ.

Sulekha