ಧುರಂಧರ್ -2 ಹವಾಕ್ಕೆ ಬಾಹುಬಲಿ ದಾಖಲೆ ಉಡೀಸ್ – ಜಸ್ಟ್ 12 ದಿನಕ್ಕೆ 1400 ಕೋಟಿ ಕಲೆಕ್ಷನ್!

ಭಾರತೀಯ ಚಿತ್ರರಂಗದಲ್ಲಿ ಈಗ ‘ಧುರಂಧರ್’ ಹವಾ ಜೋರಾಗಿದೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಕೇವಲ ಸಿನಿಮಾ ಆಗಿ ಉಳಿದಿಲ್ಲ, ಅದೊಂದು ದಾಖಲೆಗಳ ಸುನಾಮಿಯಾಗಿ ಮಾರ್ಪಟ್ಟಿದೆ. ಬಿಡುಗಡೆಯಾದ ಕೇವಲ 12 ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂದಾಜು ₹ 1400 ಕೋಟಿ ಗಳಿಸುವ ಮೂಲಕ ಮುನ್ನುಗ್ಗುತ್ತಿದೆ.
ಒಂದು ಕಾಲದಲ್ಲಿ ‘ಬಾಹುಬಲಿ 2’ ಬರೆದಿದ್ದ ದಾಖಲೆಗಳು ಅಳಿಸಲಾಗದ ಮೈಲಿಗಲ್ಲು ಎನ್ನಲಾಗುತ್ತಿತ್ತು. ಆದರೆ, ‘ಧುರಂಧರ್ 2’ ಈಗ ಆ ಇತಿಹಾಸವನ್ನು ತಿರುಗಿ ಬರೆದಿದೆ. ಪುಷ್ಪ 2, ಬಾಹುಬಲಿ 2 ಮತ್ತು ದಂಗಲ್ನಂತಹ ಬ್ಲಾಕ್ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿರುವ ಈ ಸಿನಿಮಾ, ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತರ ಅಮೆರಿಕಾದಲ್ಲಿ 22 ಮಿಲಿಯನ್ ಡಾಲರ್ (ಸುಮಾರು ₹207 ಕೋಟಿ) ಕಲೆಕ್ಷನ್ ಮಾಡುವ ಮೂಲಕ ಪ್ರಭಾಸ್ ಅವರ 9 ವರ್ಷಗಳ ಹಳೆಯ ದಾಖಲೆಯನ್ನು ರಣವೀರ್ ಸಿಂಗ್ ಸದ್ದಿಲ್ಲದೆ ಮುರಿದು ಹಾಕಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಕಳ್ಳತನ – ಖತರ್ನಾಕ್ ಕಳ್ಳರು ಲಾಕ್, 21 ಮೊಬೈಲ್ ವಶಕ್ಕೆ
ಚಿತ್ರದ ಆರಂಭವೇ ಒಂದು ಅದ್ಧೂರಿ ಹಬ್ಬದಂತಿತ್ತು. ಮೊದಲ ದಿನವೇ ವಿಶ್ವದಾದ್ಯಂತ ₹ 240 ಕೋಟಿ ಲೂಟಿ ಮಾಡಿದ್ದ ಈ ಸಿನಿಮಾ, ಕೇವಲ ಒಂದು ವಾರದಲ್ಲಿ ₹ 1000 ಕೋಟಿ ಕ್ಲಬ್ ಸೇರಿ ಅಚ್ಚರಿ ಮೂಡಿಸಿತ್ತು. ದೇಶೀಯವಾಗಿ (ಭಾರತದಲ್ಲಿ) ಸದ್ಯಕ್ಕೆ ₹ 872 ಕೋಟಿ ಗಳಿಸಿರುವ ಈ ಸಿನಿಮಾ, ಶೀಘ್ರದಲ್ಲೇ ₹ 1000 ಕೋಟಿ ನೆಟ್ ಕಲೆಕ್ಷನ್ ತಲುಪುವತ್ತ ದಾಪುಗಾಲು ಹಾಕುತ್ತಿದೆ. ವಿಶೇಷವೆಂದರೆ, ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗದಿದ್ದರೂ ಈ ಮಟ್ಟದ ಸಾಧನೆ ಮಾಡಿರುವುದು ಸಣ್ಣ ವಿಷಯವೇನಲ್ಲ. ಮೊದಲ ಭಾಗವು ₹ 1300 ಕೋಟಿ ಗಳಿಸಿ ಸದ್ದು ಮಾಡಿತ್ತು, ಆದರೆ ಈ ಎರಡನೇ ಭಾಗವು ಅದರ ಎಲ್ಲಾ ಮಿತಿಗಳನ್ನು ದಾಟಿ ಬೆಳೆದು ನಿಂತಿದೆ.

ನೋಡಿರಿ

