RCB ಗೇಮ್ ಚೇಂಜರ್ ಡಫಿ – ಡೆಬ್ಯೂ ಮ್ಯಾಚಲ್ಲೇ ಡೆಡ್ಲಿ ಬೌಲಿಂಗ್
ಜೋಶ್ ಹೆಚ್ಚಿಸಿದ ಟ್ರೆಂಡಿಂಗ್ ಸ್ಟಾರ್!

RCB ಗೇಮ್ ಚೇಂಜರ್ ಡಫಿ – ಡೆಬ್ಯೂ ಮ್ಯಾಚಲ್ಲೇ ಡೆಡ್ಲಿ ಬೌಲಿಂಗ್ಜೋಶ್ ಹೆಚ್ಚಿಸಿದ ಟ್ರೆಂಡಿಂಗ್ ಸ್ಟಾರ್!

ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡೋಕೆ ಕ್ರಿಕೆಟರ್ಸ್ ಕೂಡ ಯಾಕೆ ಆ ಮಟ್ಟಿಗೆ ಇಂಟ್ರೆಸ್ಟ್ ತೋರಿಸ್ತಾರೆ ಅಂದ್ರೆ ಅದಕ್ಕೆ ಕಾರಣ ಇಲ್ಲಿರುವಂಥ ಫ್ಯಾನ್ಸ್ ಕ್ರೇಜ್.. ಲಾಯಲ್ಟಿ ಹಾಗೇ ಹೋಂ ಮ್ಯಾಚ್​​ಗಳಲ್ಲಿ ಸಿಗೋ ಸಪೋರ್ಟ್.. ಅದೆಲ್ಲಕ್ಕಿಂತ ಜಾಸ್ತಿ ನೀವು ಅಟ್​ಲೀಸ್ಟ್ ಒಂದ್ ಮ್ಯಾಚಲ್ಲಿ ಅವ್ರು ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರೂ ಸಾಕು. ಅಭಿಮಾನಿಗಳ ಹಾರ್ಟಲ್ಲಿ ಜಾಗ ಫಿಕ್ಸ್ ಅಂತಾನೇ ಲೆಕ್ಕ. ಈಗ ಹೈದ್ರಾಬಾದ್ ವಿರುದ್ಧದ ಪಂದ್ಯದ ಬಳಿಕ ಜೇಕಬ್ ಡಫಿ ಕೂಡ ಫುಲ್ ಟ್ರೆಂಡಿಂಗ್​ನಲ್ಲಿದ್ದಾರೆ.

ಇದನ್ನೂ ಓದಿ : IPL ಧೂಳಿಗೂ ಸಮ ಇಲ್ಲ PSL – ಬರ್ಬಾದ್ ಆದ್ರೂ ಯಾಕೀ ಬಂಡಲ್?

19ನೇ ಸೀಸನ್ ಐಪಿಎಲ್​ನ ಭರ್ಜರಿಯಾಗೇ ಸ್ಟಾರ್ಟ್ ಮಾಡಿ ಟೇಬಲ್ ಟಾಪರ್ ಆಗಿರೋ ಆರ್​ಸಿಬಿ ಬಾಯ್ಸ್ ಈಗ ನೆಕ್ಸ್​ಟ್ ಮ್ಯಾಚ್​ಗೆ ರೆಡಿಯಾಗ್ತಿದ್ದಾರೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲೇ ಎರಡನೇ ಪಂದ್ಯ ಆಡ್ತಾರೆ. ಕಳೆದ ಮೂರು ಪಂದ್ಯಗಳಲ್ಲೂ ಸಿಎಸ್​ಕೆ ವಿರುದ್ಧ ಗೆದ್ದಿರೋ ರೆಡ್ ಆರ್ಮಿ ಈ ಸಲ ಕೂಡ ಡಾಮಿನೇಷನ್ ಮೈಂಡ್​ಸೆಟ್ ನಲ್ಲೇ ಇರುತ್ತೆ. ಜೊತೆಗೆ ಜೇಕಬ್ ಡಫಿ ಪರ್ಫಾಮೆನ್ಸ್ ಮತ್ತಷ್ಟು ಬೂಸ್ಟ್ ನೀಡ್ತಿದೆ. ಯಾಕಂದ್ರೆ ಐಪಿಎಲ್ ಡೆಬ್ಯೂ ಮ್ಯಾಚಲ್ಲೇ ಬ್ಯಾಟರ್​ಗಳನ್ನ ಊಸ್ಟ್ ಮಾಡಿದ್ದಾರೆ.

300+ ರನ್ಸ್ ಎಂದಿದ್ದ ಹೈದ್ರಾಬಾದ್ ಹೆಡೆಮುರಿ ಕಟ್ಟಿದ ಡಫಿ!

ಐಪಿಎಲ್ ಆರಂಭಕ್ಕೂ ಮೊದ್ಲೇ ಚಿನ್ನಸ್ವಾಮಿಯಲ್ಲಿ ನಮ್ಮ ಟಾರ್ಗೆಟ್ 300+ ರನ್ಸ್.. ನಾನು ಹೇಗೆ ಬ್ಯಾಟಿಂಗ್ ಮಾಡ್ತೇನೋ ಗೊತ್ತಿಲ್ಲ. ಬಟ್ ಟ್ರಾವಿಸ್ ಹೆಡ್​ಗೆ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಬ್ಯಾಟಿಂಗ್ ಮಾಡೋದಂದ್ರೆ ಇಷ್ಟ ಅಂತಾ ಅಭಿಷೇಕ್ ಶರ್ಮಾ ಹೇಳಿದ್ರು. ಆದ್ರೆ ಅಭಿಷೇಕ್ ಮತ್ತು ಹೆಡ್ ಇಬ್ರಿಗೂ ಬ್ಯಾಟ್ ಬಿಚ್ಚೋ ಮೊದ್ಲೇ ಪೆವಿಲಿಯನ್ ಹಾದಿ ತೋರಿಸಿದ್ದೇ ನ್ಯೂಜಿಲೆಂಡ್ ಮೂಲದ ವೇಗಿ ಜೇಕಬ್ ಡಫಿ. ಜೋಶ್ ಹೇಜಲ್​ವುಡ್ ಅವ್ರ ಆಬ್ಸೆನ್ಸ್​ನಲ್ಲಿ ಪ್ಲೇಯಿಂಗ್ 11ನಲ್ಲಿ ಬಂದ ಡಫಿ ಫಸ್ಟ್ ಮ್ಯಾಚಲ್ಲೇ ಬಲಿಷ್ಠ ಬ್ಯಾಟಿಂಗ್ ಲೈನಪ್ ಇರೋ ತಂಡಕ್ಕೇ ನೀರು ಕುಡ್ಸಿದ್ದಾರೆ. ಟಾಸ್ ಸೋತು ಪಸ್ಟ್ ಬ್ಯಾಟಿಂಗ್​ಗೆ ಬಂದ ಹೈದ್ರಾಬಾದ್ ಪರ ಅಭಿಷೇಕ್ ಮತ್ತು ಹೆಡ್ ಇನ್ನಿಂಗ್ಸ್ ಆರಂಭ ಮಾಡ್ತಾರೆ. ಇಬ್ರೂ ಟಿ-20 ಫಾರ್ಮೆಟ್​ನ ಸ್ಫೋಟಕ ಬ್ಯಾಟರ್​ಗಳೇ. ಆದ್ರೆ ಮೂರನೇ ಓವರ್​ನಲ್ಲೇ ಡಫಿ ಇಬ್ಬರನ್ನೂ ಪೆವಿಲಿಯನ್​ಗೆ ಅಟ್ಟಿದ್ರು. 3ನೇ ಓವರ್​ನ ಮೊದಲ ಬಾಲಲ್ಲೇ 7 ರನ್ ಗಳಿಸಿದ್ದ ಅಭಿಷೇಕ್ ಹಾಗೇ ಅದೇ ಓವರ್​ನ ಕೊನೇ ಬಾಲಲ್ಲಿ 11 ರನ್ ಗಳಿಸಿದ್ದ ಟ್ರಾವಿಸ್ ಹೆಡ್ ವಿಕೆಟ್ ತೆಗೆದಿದ್ರು. ಒಂದೇ ಓವರ್​ನಲ್ಲಿ ಇಬ್ಬರು ಓಪನರ್​ಗಳನ್ನ ಬೇಟೆಯಾಡಿದ್ರು. ಌಂಡ್ ನೆಕ್ಸ್​ಟ್ 5ನೇ ಓವರ್​ನಲ್ಲಿ ನಿತೀಶ್ ಕುಮಾರ್ ರೆಡ್ಡಿಗೂ ವಿಕೆಟ್ ಕಿತ್ತು ಶಾಕ್ ಕೊಟ್ರು. 6 ಬಾಲಲ್ಲಿ 1 ರನ್ ಗಳಿಸಿ ರೆಡ್ಡಿ ವಾಪಸ್ ಹೋದ್ರು. ಸೋ ಅಲ್ಲಿಗೆ ಟಾಪ್ 4 ಬ್ಯಾಟರ್​ಗಳಲ್ಲಿ ಮೂವರನ್ನ ಡಫಿಯೇ ಔಟ್ ಮಾಡಿದ್ರು. ಌಂಡ್ ಇವ್ರೆಲ್ಲಾ ಸೆಟಲ್ ಆಗೋ ಮೊದ್ಲೇ ವಿಕೆಟ್ ಒಪ್ಪಿಸಿದ್ರು. ಒನ್ಸ್ ಸೆಟಲ್ ಆಗಿದ್ರೆ ಡೇಂಜರಸ್ ಆಗ್ತಿದ್ರು. ಡಫಿಯವ್ರ ಇದೇ ಪರ್ಫಾಮೆನ್ಸ್​ನಿಂದಾಗಿ ಪವರ್ ಪ್ಲೇನಲ್ಲಿ ಎಸ್‌ಆರ್‌ಹೆಚ್ ಕೇವಲ 6 ಓವರ್‌ಗಳಲ್ಲಿ 3 ವಿಕೆಟ್ ಕಳ್ಕೊಂಡು 49 ರನ್ಸ್ ಕಲೆ ಹಾಕಿತ್ತು. ತಮ್ಮ ಕರಾರುವಾಕ್ ಬೌಲಿಂಗ್​ನಿಂದ 4 ಓವರ್​ಗಳಲ್ಲಿ ನೀಡಿದ್ದು ಕೇವಲ 22 ರನ್​ಗಳನ್ನ ಮಾತ್ರ. ಅವ್ರ 24 ಎಸೆತಗಳಲ್ಲಿ 11 ಬಾಲ್​ಗಳಲ್ಲಿ ಮಾತ್ರ ರನ್ ನೀಡಿದ್ದರು. ಇನ್ನುಳಿದ 13 ಬಾಲ್​ಗಳನ್ನು ಡಾಟ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಪಾದಾರ್ಪಣೆ ಪಂದ್ಯದಲ್ಲೇ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ. ಬ್ಯಾಟರ್ ಫ್ರೆಂಡ್ಲಿ ಪಿಚ್​ನಲ್ಲಿ ಇಷ್ಟು ಕಡಿಮೆ ಎಕಾನಮಿಯಲ್ಲಿ ರನ್ಸ್ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಯಲ್ಲಾಗೇ ಪರ್ಫಾಮ್ ಮಾಡಿದ್ದಾರೆ. ಅಷ್ಟಕ್ಕೂ ಡಫಿಯನ್ನ ಆರ್​ಸಿಬಿ ಫ್ರಾಂಚೈಸಿ ಖರೀದಿ ಮಾಡಿದ್ದೇ ಇಂಟ್ರೆಸ್ಟಿಂಗ್ ಆಗಿದೆ. ಹೈದ್ರಾಬಾದ್ ವಿರುದ್ಧದ ಪಂದ್ಯದ ಬಳಿಕ ಕ್ರಿಕೆಟ್ ಲೋಕದಲ್ಲಿ ಅದ್ರಲ್ಲೂ ಭಾರತದಲ್ಲಿ ಡಫಿ ಹೆಸರು ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದೆ. ಬಟ್ ಇಂಡಿಯನ್ ಫ್ಯಾನ್ಸ್​ಗೆ ಇವರ ಹೆಸರು ಹೊಸದಾಗಿರಬಹುದು. ಆದರೆ ಡಫಿ ಹಲವು ವರ್ಷಗಳಿಂದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡದಲ್ಲಿ ಆಡುತ್ತಿದ್ದಾರೆ.

ಡೇಂಜರಸ್ ಡಫಿ!

2012ರಲ್ಲಿ 17ನೇ ವಯಸ್ಸಿನಲ್ಲೇ ಹಿರಿಯರ ಕ್ರಿಕೆಟ್‌ ಗೆ ಪದಾರ್ಪಣೆ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 340ಕ್ಕೂ ಹೆಚ್ಚು ವಿಕೆಟ್ ಬೇಟೆ

ಟಿ20 ಕ್ರಿಕೆಟ್‌ನಲ್ಲಿ 180ಕ್ಕೂ ಹೆಚ್ಚು ವಿಕೆಟ್‌ ಪಡೆದಿರುವ ಡಫಿ

2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದ ಡಫಿ

ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ವಿಶ್ವದ ನಂ.1 ಬೌಲರ್

ಆರ್‌ಸಿಬಿ ತಂಡವು ಡಫಿ ಅವರನ್ನು ಮೂಲ ಬೆಲೆ 2 ಕೋಟಿ ರೂಪಾಯಿಗೆ ಖರೀದಿ

ಗ್ರೌಂಡ್ ವರ್ಕ್ ಮಾಡಿದ್ದ ಫ್ರಾಂಚೈಸಿ ಬೇಸ್​ ಪ್ರೈಸ್​ಗೆ ಖರೀದಿ ಮಾಡಿತ್ತು

ಬ್ಯಾಕಪ್ ಬೌಲರ್ ಅನ್ಕೊಂಡ್ರೆ ಈಗ ಪ್ರೈಮ್ ಬೌಲರ್ ರೀತಿ ಪರ್ಫಾಮೆನ್ಸ್

ಜೋಶ್ ಹ್ಯಾಜಲ್‌ವುಡ್ ಆಬ್ಸೆನ್ಸ್​ನಲ್ಲಿ ಇವರೇ ತಂಡದ ಖಾಯಂ ಸದಸ್ಯ

ಜೇಕಬ್ ಡಫಿ ಅವ್ರ ಇತ್ತೀಚಿನ ಟಿ20 ನಂಬರ್ಸ್ ಅಷ್ಟೇನು ಇಂಪ್ರೆಸ್ಸಿವ್ ಆಗಿರಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಐದು ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳು ಮತ್ತು 10.86 ರ ಎಕಾನಮಿ ರೇಟ್‌ನೊಂದಿಗೆ ರನ್ಸ್ ಕೊಟ್ಟಿದ್ರು. ಸೋ ಇಂಡಿಯನ್ ಸಾಯಿಲ್​ನಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋ ಗೊಂದಲವೂ ಇತ್ತು. ಆದ್ರೆ ಐಪಿಎಲ್​ನಲ್ಲಿ ತಾವಾಡಿದ ಮೊದಲ ಮ್ಯಾಚಲ್ಲೇ 3 ವಿಕೆಟ್ ತೆಗೆದು ಗ್ರ್ಯಾಂಡ್ ಆಗೇ ಡೆಬ್ಯೂ ಮಾಡಿದ್ದಾರೆ. ಆರ್​ಸಿಬಿ ಬೌಲಿಂಗ್ ಲೈನಪ್​ನ ಭರವಸೆಯಾಗಿದ್ದಾರೆ.

Shantha Kumari