ಜಡ್ಡು ಚೇಟಾ ಮುಖಾಮುಖಿ ಹೇಗಿರಲಿದೆ? – ರವೀಂದ್ರ ಜಡೇಜಾ ವಿರುದ್ಧ ಸಂಜು ಸಮರ ನೋಡಲು ಫ್ಯಾನ್ಸ್ ಕುತೂಹಲ

ಜಡ್ಡು ಚೇಟಾ ಮುಖಾಮುಖಿ ಹೇಗಿರಲಿದೆ? – ರವೀಂದ್ರ ಜಡೇಜಾ ವಿರುದ್ಧ ಸಂಜು ಸಮರ ನೋಡಲು ಫ್ಯಾನ್ಸ್ ಕುತೂಹಲ

ಚೆನ್ನೈ ಸೂಪರ್ ಕಿಂಗ್ಸ್ ಕಾಲದಲ್ಲಿ ದೀರ್ಘಕಾಲ ಆಡಿದ್ದಾರೆ ರವೀಂದ್ರ ಜಡೇಜಾ. ಇನ್ನು ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಮಾತ್ರವಲ್ಲದೆ ಐಕಾನ್ ಕೂಡಾ ಆಗಿದ್ದರು. ಇದೀಗ ಇಬ್ಬರ ಸ್ಥಾನ ಅದಲು ಬದಲಾಗಿದೆ. ಈ ಬದಲಾದ ಸನ್ನಿವೇಶದಲ್ಲಿಸೋಮವಾರ ಎರಡು ತಂಡಗಳ ಜೊತೆ ರವೀಂದ್ರ ಜಡೇಜಾ ಮತ್ತು ಸಂಜು ಮೊದಲ ಬಾರಿ ಮುಖಾಮುಖಿಯಾಗಲಿದ್ದಾರೆ.

ಇದನ್ನೂ ಓದಿ:RCBಯಲ್ಲಿ ಬೆಂಚ್ ಕಾದವನೇ BOSS – MI ಅಲ್ಲಾಡಿಸಿದ KKRನ ಫಿನ್ ಅಲೆನ್

ರವೀಂದ್ರ ಜಡೇಜಾ ಅವರು ರಾಜಸ್ಥಾನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸಂಜು ಸ್ಯಾಮ್ಸನ್ ಚೆನ್ನೈ ತಂಡಕ್ಕೆ ಆಗಮಿಸಿದ್ದಾರೆ. ಸೋಮವಾರ ಗುವಾಹಟಿಯಲ್ಲಿ ನಡೆಯುವ ಪಂದ್ಯದಲ್ಲಿ ಇಬ್ಬರೂ ತಮ್ಮ ಹಳೆಯ ತಂಡವನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಚೆನ್ನೈ ತಂಡ ಪಂದ್ಯ ಆರಂಭಕ್ಕೂ ಮೊದಲೇ ಆಘಾತ ಅನುಭವಿಸಿದೆ.  ಗಾಯದ ಸಮಸ್ಯೆಯಿಂದಾಗಿ ಎಂ.ಎಸ್‌.ಧೋನಿ ಕಣಕ್ಕಿಳಿಯುತ್ತಿಲ್ಲ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಡೆವಾಲ್ಡ್‌ ಬ್ರೆವಿಸ್‌  ಕೂಡಾ ಚೆನ್ನೈ ತಂಡದ ಪರ ಕಣಕ್ಕಿಳಿಯುತ್ತಿಲ್ಲ.

ದಶಕಕ್ಕೂ ಹೆಚ್ಚು ಕಾಲ ರಾಜಸ್ಥಾನ ತಂಡದಲ್ಲಿದ್ದ ಸಂಜು ಸ್ಯಾಮ್ಸನ್‌ ಈ ಬಾರಿ ಚೆನ್ನೈ ಪರ ಬ್ಯಾಟ್‌ ಬೀಸಲಿದ್ದಾರೆ. ಈವರೆಗೂ ಚೆನ್ನೈನ ಭಾಗವಾಗಿದ್ದ, ತಂಡಕ್ಕೆ ಹಲವು ಬಾರಿ ಕಪ್‌ ಗೆಲ್ಲಿಸಿಕೊಟ್ಟಿದ್ದ ರವೀಂದ್ರ ಜಡೇಜಾ ಈ ಸಲ ರಾಜಸ್ಥಾನ ಪರ ಆಡುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರುತ್ತದೆ. ತಮ್ಮ ಹಳೆ ತಂಡದ ವಿರುದ್ಧ ಇವರಿಬ್ಬರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಇನ್ನು ಎಂ.ಎಸ್‌.ಧೋನಿ ತಂಡದ ಜೊತೆ ಗುವಾಹಟಿಗೆ ಪ್ರಯಾಣಿಸಲಿಲ್ಲ. ಅವರು ಚೆನ್ನೈನಲ್ಲೇ ಉಳಿದುಕೊಳ್ಳಲಿದ್ದು, ಪುನಶ್ಚೇತನ ಶಿಬಿರದಲ್ಲಿರಲಿದ್ದಾರೆ. ಸಂಪೂರ್ಣ ಫಿಟ್‌ ಆದ ಬಳಿಕವೇ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ದ.ಆಫ್ರಿಕಾದ ತಾರಾ ಕ್ರಿಕೆಟಿಗ ಡೆವಾಲ್ಡ್‌ ಬ್ರೆವಿಸ್‌ ಕೂಡಾ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ರಾಜಸ್ಥಾನ ಸೇರಿದಂತೆ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದನ್ನು ಸಿಎಸ್‌ಕೆ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಖಚಿತಪಡಿಸಿಕೊಂಡಿದ್ದಾರೆ. ಅವರು ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದಾಗಿ ಫ್ಲೆಮಿಂಗ್‌ ಮಾಹಿತಿ ನೀಡಿದ್ದಾರೆ.

Sulekha