ಮುಂಬೈ ಗ್ರಹಣ ಬಿಡಿಸಿದ ಪಾಂಡ್ಯ – ರೋಹಿತ್ & ರಿಕಲ್ಟನ್ ಡೆಡ್ಲಿ ಓಪನರ್ಸ್
220 ರನ್ಸ್ ಇದ್ರೂ ಎಡವಿದ್ದೆಲ್ಲಿ KKR?

ಮುಂಬೈ ಗ್ರಹಣ ಬಿಡಿಸಿದ ಪಾಂಡ್ಯ – ರೋಹಿತ್ & ರಿಕಲ್ಟನ್ ಡೆಡ್ಲಿ ಓಪನರ್ಸ್220 ರನ್ಸ್ ಇದ್ರೂ ಎಡವಿದ್ದೆಲ್ಲಿ KKR?

19ನೇ ಸೀಸನ್ ಐಪಿಎಲ್ ಸಖತ್ತಾಗೇ ಸ್ಟಾರ್ಟ್ ಆಗಿದೆ. ಫಸ್ಟ್ ಮ್ಯಾಚಲ್ಲೂ 200 ಪ್ಲಸ್ ಸ್ಕೋರ್ ಚೇಸ್.. ಸೆಕೆಂಡ್ ಮ್ಯಾಚಲ್ಲೂ 220 ಪ್ಲಸ್ ಸ್ಕೋರ್ ಚೇಸಿಂಗ್. ಅದ್ರಲ್ಲೂ ಭಾನುವಾರ ಕೆಕೆಆರ್ ವಿರುದ್ಧ ಗೆಲ್ಲೋ ಮೂಲಕ ಮುಂಬೈ ಹೊಸ ದಾಖಲೆಯನ್ನೇ ಬರೆದಿದೆ. ಹಿಟ್​ಮ್ಯಾನ್ ರೋಹಿತ್ ಶರ್ಮಾ ಅಬ್ಬರ, ಮುಂಬೈ ಗೆಲುವು, 13 ವರ್ಷದ ವನವಾಸ ಕೊನೆಯಾಗಿದೆ.

ಇದನ್ನೂ ಓದಿ : 6.5 ತಿಂಗಳ ಮಗುವಿನ ಪ್ರಾಣ ಕಸಿದ ಒಣಗಿದ ದಾಸವಾಳ – ನಿಜಕ್ಕೂ ಆಗಿದ್ದೇನು ಗೊತ್ತಾ?

ಐಪಿಎಲ್ ಈಗ ಬ್ಯಾಟರ್​ಗಳ ಪಾಲಿನ ಸ್ವರ್ಗವಾಗ್ತಿದೆ. ಬಿಗ್ ಸ್ಕೋರ್​ಗಳನ್ನೇ ಸೆಟ್ ಮಾಡಿದ್ರೂ ಬೌಲರ್​ಗಳಿಗೆ ಅದನ್ನ ಡಿಫೆನ್ಸ್ ಮಾಡಿಕೊಳ್ಳೋಕೆ ಆಗ್ತಿಲ್ಲ. ಈಗ ಭಾನುವಾರ ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಮುಂಬೈ ಭರ್ಜರಿಯಾಗಿ ಗೆದ್ದು ಶುಭಾರಂಭ ಮಾಡಿದೆ. ದಾಖಲೆಯ ಚೇಸಿಂಗ್ ಮೂಲಕ ಹಾರ್ದಿಕ್ ಪಾಂಡ್ಯ ಮುಂಬೈಗೆ ಅಂಟಿದ್ದ ಬ್ಯಾಡ್​ಲಕ್​ನ ದೂರ ಮಾಡಿದ್ದಾರೆ.

220 ರನ್ಸ್ ಹೊಡೆದ್ರೂ ಸೋತ ಕೆಕೆಆರ್!

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 2ನೇ ಮ್ಯಾಚಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್  20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತ್ತು. ಅಜಿಂಕ್ಯ ರಹಾನೆ ಹಾಗೇ ಆಂಗ್​ಕ್ರಿಶ್ ರಘುವಂಶೀ ಅರ್ಧಶತಕದ ಮೂಲಕ ತಂಡಕ್ಕೆ ನೆರವಾದ್ರು. ಇತ್ತ ಮುಂಬೈ ಇಂಡಿಯನ್ಸ್ ಪರ ಶಾರ್ದೂಲ್ ಠಾಕೂರ್ ನಾಲ್ಕು ಓವರ್‌ಗಳಲ್ಲಿ 39 ರನ್ ನೀಡಿ ಮೂರು ವಿಕೆಟ್ ಪಡೆದು ಶೈನ್ ಆದ್ರು.  221 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಪರ ರೋಹಿತ್​ ಶರ್ಮಾ ಮತ್ತು ರಿಕಲ್ಟನ್​ ಸ್ಫೋಟಕ ಓಪನಿಂಗ್ ನೀಡಿದ್ರು. ಮೊದಲ ವಿಕೆಟ್​ಗೆ 71 ಎಸೆತಗಳಲ್ಲಿ 148 ರನ್​ಗಳ ಜೊತೆಯಾಟವಾಡಿ ಗೆಲುವಿನ ಬುನಾದಿ ಹಾಕಿದ್ರು.  ರೋಹಿತ್​ ಶರ್ಮಾ ಜಸ್ಟ್ 23 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಬಾರಿಸಿದ್ರು.  ಮತ್ತೊಂದೆಡೆ ರಿಕಲ್ಟನ್ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶತಕದತ್ತ ಬರ್ತಿದ್ದ ಹಿಟ್​ಮ್ಯಾನ್ 78 ರನ್‌ಗಳಿಗೆ ಔಟಾದರು. ರಿಕಲ್ಟನ್ 81 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಸೂರ್ಯ 16, ತಿಲಕ್ 20 ರನ್ ಗಳಿಸಿದ್ರೆ ಪಾಂಡ್ಯ 18 ರನ್ಸ್ ಗಳಿಸಿದ್ರು. ಅಂತಿಮವಾಗಿ ಇನ್ನೂ ಐದು ಎಸೆತಗಳು ಇದ್ದಂತೆಯೇ 224 ರನ್ ಸಿಡಿಸಿ ಬಿಗ್ ಟಾರ್ಗೆಟ್​ನ ಚೇಸ್ ಮಾಡಿದ್ರು. ಌಂಡ್ ಮುಂಬೈಗೆ ಇದು ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ಸ್ಕೋರ್ ಚೇಸ್ ಮಾಡಿದ ದಾಖಲೆಯೂ ಆಯ್ತು. ಇದ್ರ ಜೊತೆಗೆ 13 ವರ್ಷಗಳ ಗ್ರಹಣವೂ ಬಿಟ್ಟಿದೆ.

13 ವರ್ಷಗಳ ಬಳಿಕ ಮೊದಲ ಪಂದ್ಯ ಗೆದ್ದ ಮುಂಬೈ!

ಐಪಿಎಲ್​​ನಲ್ಲಿ ಮುಂಬೈ ಯಶಸ್ವೀ ತಂಡ. ಐದು ಬಾರಿಯ ಚಾಂಪಿಯನ್. ಆದ್ರೆ 2013ರಿಂದ ಈಚೆಗೆ ಐಪಿಎಲ್​ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದಿದ್ದೇ ಇಲ್ಲ. 2012ರಲ್ಲಿ ಕೊನೇ ಬಾರಿಗೆ ಹರ್ಭಜನ್ ಸಿಂಗ್ ನಾಯಕತ್ವದಲ್ಲಿ ಫಸ್ಟ್ ಮ್ಯಾಚ್ ಗೆದ್ದಿದ್ದ ಮುಂಬೈ ಈಗ 2026ರಲ್ಲಿ ಗೆದ್ದಿದೆ. ಅಂದ್ರೆ ರೋಹಿತ್ ಶರ್ಮಾ 11 ವರ್ಷ ಕ್ಯಾಪ್ಟನ್ ಆಗಿದ್ರೂ ಒಂದೇ ಒಂದು ಮೊದಲ ಮ್ಯಾಚ್ ಗೆದ್ದಿರಲಿಲ್ಲ.ಬಟ್ ಅವ್ರ ನಾಯಕತ್ವದಲ್ಲೇ ತಂಡ 5 ಸಲ ಚಾಂಪಿಯನ್ ಆಗಿತ್ತು. ಇನ್ನು 2024ರಲ್ಲಿ ಪಾಂಡ್ಯ ನಾಯಕ ಆದಾಗ್ಲೂ ಮೊದಲ 2 ಸೀಸನ್​ನಲ್ಲಿ ಅವರೂ ಸೋತಿದ್ರು. ಆದ್ರೀಗ 13 ವರ್ಷಗಳ ಬಳಿಕ ಮುಂಬೈ ಮೊದಲ ಮ್ಯಾಚ್ ಗೆದ್ದಿದೆ. ಒಟ್ನಲ್ಲಿ 2026ರ ಐಪಿಎಲ್ ಭರ್ಜರಿಯಾಗೇ ಸ್ಟಾರ್ಟ್ ಆಗಿದೆ. ಮೊದಲ ಎರಡೂ ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ ಟೀಮ್​ಗಳೇ ವಿನ್ ಆಗಿವೆ.

Shantha Kumari