ಕಿಂಗ್ ಕೊಹ್ಲಿ, ಪಡಿಕ್ಕಲ್ ಸ್ಫೋಟಕ ಅರ್ಧಶತಕ – ತವರಿನಲ್ಲಿ ಹೈದರಾಬಾದ್ ತಂಡಕ್ಕೆ ಸೋಲುಣಿಸಿದ ಆರ್ಸಿಬಿ

ತವರಿನಲ್ಲಿ ಆರ್ಸಿಬಿ ಶುಭಾರಂಭ ಮಾಡಿದೆ. ಬೆಂಗಳೂರಿನಲ್ಲಿ ಆರ್ಸಿಬಿ ಅಬ್ಬರಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡ ಸುಸ್ತಾಗಿ ಹೋಗಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಮೂಲಕ ತನ್ನ ಖಾತೆ ತೆರೆದಿದ್ದು ಕೋಟಿ ಕೋಟಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಯಿತು.
ಇದನ್ನೂ ಓದಿ:CSK ಫ್ಯಾನ್ಸ್ ಗೀಗ ತಲಾ ತಲೆಬಿಸಿ – RCB ವಿರುದ್ಧ ಆಡಲ್ಲ ಧೋನಿ
ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಆರ್ಸಿಬಿ ಗೆಲುವಿನ ಶುಭಾರಂಭ ಮಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ 201 ರನ್ ಕಲೆಹಾಕಿತು. 202 ರನ್ಗಳ ಗುರಿಯನ್ನು ಕೇವಲ 15.4 ಓವರ್ಗಳಲ್ಲಿ ಬೆನ್ನಟ್ಟಿದ ಆರ್ಸಿಬಿ ಗೆದ್ದು ಬೀಗಿದೆ.ತವರಿನಲ್ಲಿ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದ ಆರ್ಸಿಬಿ ಶನಿವಾರ ರಾತ್ರಿ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕ ಸಿಡಿಸಿದರು. ಆರ್ಸಿಬಿ ಪರ ಅಬ್ಬರಿಸಿದ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ತಮ್ಮ ಐಪಿಎಲ್ ವೃತ್ತಿಜೀವನದ ವೇಗದ ಅರ್ಧಶತಕ ಬಾರಿಸಿ ಗಮನ ಸೆಳೆದರು. ಟಾಪ್ ಗೇರ್ನಲ್ಲಿ ಬ್ಯಾಟಿಂಗ್ ಮಾಡಿದ ಪಡಿಕ್ಕಲ್ ಬೌಂಡರಿ ಸಿಕ್ಸರ್ಗಳ ಮಳೆಗರೆದರು. ಇದರ ಪರಿಣಾಮವಾಗಿ ಆರ್ಸಿಬಿ ಕೇವಲ 4 ಓವರ್ಗಳಲ್ಲಿ ಅರ್ಧಶತಕದ ಗಡಿ ದಾಟಿತು. ಈ ಹಂತದಲ್ಲಿ ಪಡಿಕ್ಕಲ್ 11 ಎಸೆತಗಳಲ್ಲಿ 34 ರನ್ ಬಾರಿಸಿದ್ದರು. ನಂತರವೂ ಅಬ್ಬರ ಮುಂದುವರೆಸಿದ ಪಡಿಕ್ಕಲ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಪಡಿಕ್ಕಲ್ ತಮ್ಮ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಬರೆದರು. ಅಂತಿಮವಾಗಿ 9ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದ ಪಡಿಕ್ಕಲ್ 26 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಬಾರಿಸಿ ಔಟಾದರು. ನಂತರ ಕಿಂಗ್ ಕೊಹ್ಲಿ ಬ್ಯಾಟಿಂಗ್ ಅಂತೂ ಅಮೋಘವಾಗಿತ್ತು. ಕಿಂಗ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಕ್ಲಾಸ್ ಆಟ ಪ್ರದರ್ಶಿಸಿ 38 ಎಸೆತಗಳಲ್ಲಿ 5 ಸಿಕ್ಸರ್ 5 ಬೌಂಡರಿ ಸಹಿತ ಅಜೇಯ 61 ರನ್ ಚಚ್ಚಿದರು.

ನೋಡಿರಿ

