ರಸ್ತೆ ಮಧ್ಯೆಯೇ ಮರಿಗೆ ಹಾಲುಣಿಸಿದ ಜಿಂಕೆ! – ಹೃದಯಸ್ಪರ್ಶಿ ಕ್ಷಣಕ್ಕೆ ಸ್ತಬ್ಧವಾಯ್ತು ಟ್ರಾಫಿಕ್!

ಮನುಷ್ಯರೇ ಆಗಲಿ ಪ್ರಾಣಿಗಳೇ ಆಗಲಿ ತಾಯಿಯ ಪ್ರೀತಿ ಮತ್ತು ವಾತ್ಸಲ್ಯ ಒಂದೇ ಆಗಿರುತ್ತದೆ. ಮಕ್ಕಳಿಗಾಗಿ ಅಮ್ಮ ಏನು ಬೇಕಾದ್ರೂ ಮಾಡುತ್ತಾಳೆ. ಇದೀಗ ಇಲ್ಲೊಂದು ಇದೀಗ ಇಲ್ಲೊಂದು ಜಿಂಕೆ ತನ್ನ ಮರಿಗೆ ರಸ್ತೆ ಮಧ್ಯೆ ಹಾಲುಣಿಸಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಡಿಂಪಲ್ ಕ್ವೀನ್ ರಚಿತಾರಾಮ್‌ಗೆ ಸಿದ್ದೇಗೌಡರಿಂದ ಪ್ರಪೋಸ್ – ಪ್ರೇಮನಿವೇದನೆಗೆ ನಾಚಿ ನೀರಾದ ಬುಲ್ ಬುಲ್
ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ತಾಯಿ ಜಿಂಕೆ ಯೊಂದು ರಸ್ತೆಯ ಮಧ್ಯದಲ್ಲಿಯೇ ತನ್ನ ಮರಿಯನ್ನು ಶಾಂತವಾಗಿ ಪೋಷಿಸಿ ಹಾಲುಣಿಸುತ್ತಿದೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ತಾಯಿ ಜಿಂಕೆಯೂ ಶಾಂತವಾಗಿ ತನ್ನ ಮರಿಗೆ ಹಾಲುಣಿಸುತ್ತಿದೆ. ಕಿಕ್ಕಿರಿದ ವಾಹನಗಳು ಸೇರಿದರೂ ಜಿಂಕೆ ಭಯಗೊಳ್ಳುವ ಬದಲು ಮರಿಯ ಪೋಷಣೆ ಮಾಡುವಲ್ಲಿ ಗಮನಹರಿಸಿದೆ. ಸಾಲುಗಟ್ಟಿ ನಿಂತಿದ್ದ ಸ್ಕೂಟರ್, ಕಾರು ಚಾಲಕರು ಹಾರ್ನ್ ಮಾಡದೆಯೇ ತಾಳ್ಮೆಯಿಂದ ಕಾಯುತ್ತಿದ್ದಾರೆ.
ಸುಮಾರು 18 ಸೆಕೆಂಡುಗಳ ವರೆಗೆ ರಸ್ತೆಯ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ಸೃಷ್ಟಿಕರ್ತ ವೈಭವ್ ಗುರ್ಜರ್ ಹಂಚಿಕೊಂಡ ಈ ಕ್ಲಿಪ್ ತ್ವರಿತವಾಗಿ ವೈರಲ್ ಆಗಿದ್ದು ಲಕ್ಷಾಂತರ ವೀಕ್ಷಣೆ ಗಳಿಸಿದೆ. ಐಐಟಿ ಮದ್ರಾಸ್ ಕ್ಯಾಂಪಸ್ ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿ ಯಾಗಿದೆ. ಚೆನ್ನೈನ ಅರಣ್ಯ ಪ್ರದೇಶದಲ್ಲಿ ಹರಡಿ ರುವ ಇದು ಚುಕ್ಕೆ ಜಿಂಕೆ, ಕೃಷ್ಣಮೃಗಗಳು ಮತ್ತು ಹಲವಾರು ಪಕ್ಷಿಗಳಂತಹ ಪ್ರಭೇದಗಳಿಗೆ ನೆಲೆಯಾಗಿದೆ.

ನೋಡಿರಿ

