IPL ಧೂಳಿಗೂ ಸಮ ಇಲ್ಲ PSL – ಬರ್ಬಾದ್ ಆದ್ರೂ ಯಾಕೀ ಬಂಡಲ್?
ಪಾಕಿಸ್ತಾನ ನೌಟಂಕಿ ಆಟಕ್ಕೆ ಇಲ್ಲಿದೆ ಸಾಕ್ಷಿ

ಜಗತ್ತಿನ ಶ್ರೀಮಂತ ಲೀಗ್ ಐಪಿಎಲ್ ಅಬ್ಬರ ಸ್ಟಾರ್ಟ್ ಆಯ್ತು. ಬೆಂಗಳೂರು ಮತ್ತು ಹೈದ್ರಾಬಾದ್ ನಡುವಿನ ಹೈವೋಲ್ಟೇಜ್ ಮ್ಯಾಚ್ನೊಂದಿಗೆ 19ನೇ ಸೀಸನ್ ಗ್ರ್ಯಾಂಡ್ ಆಗೇ ಶುರುವಾಗಿದೆ. ಇನ್ನೆರಡು ತಿಂಗಳು ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಕ್ರಿಕೆಟ್ ಲೋಕದ ದಿಗ್ಗಜರೆಲ್ಲಾ ಸೇರಿ ಆಡ್ತಿರೋ ಈ ಟೂರ್ನಮೆಂಟ್ನ ವಿಶ್ವವೇ ಬೆರಗುಗಣ್ಣಿನಿಂದ ನೋಡ್ತಿದ್ರೆ ಪಾಕಿಸ್ತಾನ ಮಾತ್ರ ಹೊಟ್ಟೆಕಿಚ್ಚಿನಿಂದಲೇ ನೋಡುತ್ತೆ. ಯಾಕಂದ್ರೆ ಐಪಿಎಲ್ಗೆ ಸೆಡ್ಡು ಹೊಡ್ಯೋಕೆ ಅಂತಾ ಸ್ಟಾರ್ಟ್ ಮಾಡಿದ್ದ ಪಿಎಸ್ಎಲ್ ಈಗ ಪ್ರೇಕ್ಷಕರೇ ಇಲ್ಲದೇ ನಡೀತಿದೆ. ಅದೂ ಕೂಡ ಇಡೀ ಟೂರ್ನಿ ಎರಡೇ ಸ್ಟೇಡಿಯಮ್ಗಳಲ್ಲಿ. ಮಾತೆತ್ತಿದ್ರೆ ನಾವೇ ನಂಬರ್ 1 ಅಂತಾ ಬಂಡಲ್ ಬಿಡೋ ಪಾಕಿಸ್ತಾನದ ಲೀಗ್ಗೂ ಕ್ರಿಕೆಟ್ ಲೋಕವನ್ನೇ ಆಳ್ತಿರೋ ಐಪಿಎಲ್ಗೂ ಇರೋದು ಅಜಗಜಾಂತರ ವ್ಯತ್ಯಾಸ. ಇಲ್ಲಿನ ಆಟಗಾರರಿಗೂ ಅಲ್ಲಿನ ಫ್ರಾಂಚೈಸಿಗಳು ಸಮ ಇಲ್ಲ.
ಇದನ್ನೂ ಓದಿ : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPLಗೆ ಅದ್ದೂರಿ ಚಾಲನೆ – RCB VS SRH ಪಂದ್ಯಕ್ಕೆ ಇದ್ಯಾ ಮಳೆ ಕಾಟ
2008 ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೇ 2015 ರಲ್ಲಿ ಪ್ರಾರಂಭವಾದ ಪಾಕಿಸ್ತಾನ್ ಸೂಪರ್ ಲೀಗ್ ಎರಡು ಟಿ-20 ಕ್ರಿಕೆಟ್ ಲೀಗ್‌ಗಳೇ. ಆದ್ರೆ ವ್ಯಾಲ್ಯೂವೇಷನ್ನಲ್ಲಿ ಮಾತ್ರ ಕಂಪೇರಿಸನ್ ಮಾಡೋಕೂ ಆಗಲ್ಲ. 2007 ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಗೆದ್ದ ಬೆನ್ನಲ್ಲೇ ಐಪಿಎಲ್ ಹುಟ್ಟಿಕೊಂಡಿತ್ತು. ಬಿಸಿಸಿಐ 2007 ರಲ್ಲಿ ಲೀಗ್ ಪ್ರಾರಂಭಿಸಿತು. ಮೊದಲ ಸೀಸನ್ 2008ರಲ್ಲಿ ಎಂಟು ಫ್ರಾಂಚೈಸಿಗಳೊಂದಿಗೆ ಪ್ರಾರಂಭವಾಯಿತು. ಬಾಲಿವುಡ್ ಸ್ಟಾರ್ಸ್, ಬ್ಯುಸಿನೆಸ್ ಐಕಾನ್ಸ್, ಇಂಟರ್ನ್ಯಾಷನಲ್ ಕ್ರಿಕೆಟರ್ಸ್ ಇದನ್ನ ಜಸ್ಟ್ ಟೂರ್ನಮೆಂಟ್ ಆಗಿ ಇರಿಸದೆ ಕಲ್ಚರಲ್ ಈವೆಂಟ್ ಆಗಿ ಮಾಡಿದ್ದಾರೆ. ಐಪಿಎಲ್ ಸ್ಟಾರ್ಟ್ ಆದ 6 ವರ್ಷಗಳ ಬಳಿಕ ಅಂದ್ರೆ 2016ರಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಸ್ಟಾರ್ಟ್ ಆಗಿತ್ತು. ಅಂದಿನಿಂದ್ಲೂ ನಾವು ಐಪಿಎಲ್ಗೆ ಠಕ್ಕರ್ ಕೊಡ್ತೀವಿ ಅಂಥಾ ಬಿಲ್ಡಪ್ ಕೊಡ್ತಾನೇ ಇದ್ದಾರೆ ಹೊರತು ಯಾವುದ್ರಲ್ಲೂ ನಮ್ಮ ಹತ್ತಿರಕ್ಕೆ ಬರೋಕೂ ಆಗಿಲ್ಲ.
ಐಪಿಎಲ್ ಧೂಳಿಗೂ ಸಮ ಇಲ್ಲ ಪಿಎಸ್ ಎಲ್!
ಮಾದರಿ IPL PSL
ಆರಂಭ 2008 2016
ತಂಡಗಳು 10 8
ಒಟ್ಟು ಪಂದ್ಯಗಳು 84 44
ತಂಡಗಳ ವೇತನ ಮಿತಿ 120 ಕೋಟಿ 14 ಕೋಟಿ
ಬಹುಮಾನ 20 ಕೋಟಿ 4.67 ಕೋಟಿ
ದುಬಾರಿ ಆಟಗಾರ ರಿಷಭ್ ಪಂತ್ (27 ಕೋಟಿ) ಸ್ವೀವ್ ಸ್ಪಿತ್ (4.67 ಕೋಟಿ)
ವೀಕ್ಷಣೆ 700+ ಮಿಲಿಯನ್ 150+ ಮಿಲಿಯನ್
ಮೀಡಿಯಾ ರೈಟ್ಸ್ ₹48,390 ಕೋಟಿ (2023-27) ₹ 775 ಕೋಟಿ (2026-29)
ಲೀಗ್ ಮೌಲ್ಯ ₹1.55 ಲಕ್ಷ ಕೋಟಿ ₹2,175 ಕೋಟಿ
ವಾರ್ಷಿಕ ವಹಿವಾಟು ₹9,300 ಕೋಟಿ ₹450 ಕೋಟಿ
ದುಬಾರಿ ಫ್ರಾಂಚೈಸಿ ₹16,706 ( RCB) ₹54 ಕೋಟಿ (ಪೇಶಾವರ್ ಜಲ್ಮಿ)
ಬ್ರಾಡ್ ಕಾಸ್ಟ್ ರೀಚ್ 140+ ದೇಶಗಳು ಸೌತ್ ಏಷ್ಯಾ
ಇದೆಲ್ಲಾ ಮೇನ್ ಮೇನ್ ಡಿಫರೆನ್ಸಸ್ ಅಷ್ಟೇ. ಇನ್ನೂ ಸಾಕಷ್ಟು ವಿಚಾರಗಳಲ್ಲಿ ಪಿಎಸ್ಎಲ್ ಐಪಿಎಲ್ನ ಹತ್ತಿರಕ್ಕೆ ಬರೋಕೂ ಸಾದ್ಯ ಇಲ್ಲ. ಯಾಕಂದ್ರೆ ಐಪಿಎಲ್ ವಿಶ್ವಕ್ರಿಕೆಟ್ನಲ್ಲಿ ಆಲ್ರೆಡಿ ಹೆಮ್ಮರವಾಗಿ ಬೆಳೆದು ನಿಂತಿದೆ. ಪಾಕಿಸ್ತಾನ ಎಷ್ಟೇ ಬೊಂಬಡ ಹೊಡ್ಕೊಂಡು ನಾವೇ ಗ್ರೇಟ್ ಅಂದ್ರೂ ಆನೆ ನಡೆದಿದ್ದೇ ದಾರಿ ಅಂತಾ ಬಿಸಿಸಿಐ ಸಾವಿರಾರು ಕೋಟಿ ವಹಿವಾಟಿನೊಂದಿಗೆ ವರ್ಷದಿಂದ ವರ್ಷಕ್ಕೆ ಬೆಳೀತಾನೇ ಇದೆ. ಌಂಡ್ ಐಪಿಎಲ್ ಕ್ರೇಜ್ ಹೆಂಗಿದೆ ಅಂದ್ರೆ ಟಿಕೆಟ್ಸ್ ಮಾರಾಟ ಶುರುವಾದ ಐದು ಹತ್ತು ನಿಮಿಷದಲ್ಲೇ ಸೋಲ್ಡ್ ಔಟ್ ಆಗ್ತಿವೆ. ಆದ್ರೆ ಪಿಎಸ್ಎಲ್ ಮಾತ್ರ ಅಭಿಮಾನಿಗಳೇ ಇಲ್ಲದೆ ಪಂದ್ಯಗಳನ್ನ ಆಡಿಸ್ತಿದೆ. ಆಟಗಾರರೂ ಕೂಡ ಒಂದೊಂದು ಸೀಸನ್ಗೆ ಕೋಟಿ ಕೋಟಿ ಜೇಬಿಗಿಳಿಸ್ತಾರೆ. ಈ ಸಲ ಕೂಡ ಸಾಕಷ್ಟು ವಿದೇಶಿ ಆಟಗಾರರು ಪಾಕಿಸ್ತಾನ ಲೀಗ್ ಬಿಟ್ಟು ಐಪಿಎಲ್ಗೆ ಬರೋಕೆ ಕಾರಣವೂ ಸಂಭಾವನೆ. ಅಲ್ಲಿ ಲಕ್ಷಗಳ ಲೆಕ್ಕದಲ್ಲಿ ಹಣ ಕೊಟ್ರೆ ಐಪಿಎಲ್ನಲ್ಲಿ ಕೋಟಿಗಳ ಲೆಕ್ಕದಲ್ಲಿ ಇರುತ್ತೆ. ಜೊತೆಗೆ ಇಲ್ಲಿ ಆಡೋದು ಪ್ರತಿಷ್ಠೆ ಕೂಡ.

ನೋಡಿರಿ

