ಮಧ್ಯಪ್ರಾಚ್ಯ ಯುದ್ಧಕ್ಕೆ ಬಿಗ್‌ ಟ್ವಿಸ್ಟ್!‌ – ಇದೇ ಮೊದಲ ಬಾರಿಗೆ ಇಸ್ರೇಲ್‌ ಮೇಲೆ ಮಿಸೈಲ್‌ ದಾಳಿ ನಡೆಸಿದ ಯೆಮೆನ್‌!

ಮಧ್ಯಪ್ರಾಚ್ಯ ಯುದ್ಧಕ್ಕೆ ಬಿಗ್‌ ಟ್ವಿಸ್ಟ್!‌ – ಇದೇ ಮೊದಲ ಬಾರಿಗೆ ಇಸ್ರೇಲ್‌ ಮೇಲೆ ಮಿಸೈಲ್‌ ದಾಳಿ ನಡೆಸಿದ ಯೆಮೆನ್‌!

ಮಧ್ಯಪ್ರಾಚ್ಯ ಯುದ್ಧ ಆರಂಭವಾಗಿ ಒಂದು ಆಗುತ್ತಾ ಬಂತು. ಈಗಾಗಲೇ ಈ ಯುದ್ಧದಿಂದಾಗಿ ಸಾಕಷ್ಟು ಜನರು ಪ್ರಾಣOK ಕಳೆದುಕೊಂಡಿದ್ದಾರೆ. ಇದೀಗ ಈ ಯುದ್ದಕ್ಕೆ ಮತ್ತೊಂದು ರಾಷ್ಟ್ರ ಎಂಟ್ರಿಯಾಗಿದೆ. ಇದೇ ಮೊದಲ ಬಾರಿಗೆ ಯೆಮೆನ್‌ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ಅಪಘಾತ! – ತಿರುಪತಿಗೆ ಹೊರಟಿದ್ದ ಒಂದೇ ಕುಟುಂಬದ ಮೂವರು ದುರಂತ ಅಂತ್ಯ!

ಇರಾನ್‌ – ಇಸ್ರೇಲ್‌, ಅಮೆರಿಕಾ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವೆಲ್ಲದ್ರ ಮಧ್ಯೆ ಈ ಯೆಮೆನ್‌ ಇಸ್ರೇಲ್‌ ಮೇಲೆ ದಾಳಿ ನಡೆಸಿದೆ. ಯೆಮನ್‌ ಮಿಸೈಲ್‌ ದಾಳಿಯನ್ನ ಇಸ್ರೇಲ್‌ ಖಚಿತಪಡಿಸಿದೆ. ಯೆಮನ್‌ ಕ್ಷಿಪಣಿಯನ್ನ ನಾಶಪಡಿಸಿದ್ದೇವೆ. ನಮ್ಮ ಕಡೆ ಯಾವುದೇ ಯಾವುದೇ ಸಾವುನೋವು ಆಗಿಲ್ಲ ಎಂದು ಇರಾನ್‌ ಸೇನೆ ಹೇಳಿದೆ.

ಇರಾನ್ ಬೆಂಬಲಿಸಿ ಇತ್ತೀಚೆಗೆ ಯೆಮೆನ್‌ನಲ್ಲಿರುವ ಹೌತಿ ಬಂಡುಕೋರ ಸಂಘಟನೆ ಇಸ್ರೇಲ್ ಹಾಗೂ ಅಮೆರಿಕಕ್ಕೆ ಎಚ್ಚರಿಕೆ ನೀಡಿತ್ತು. ಇಸ್ರೇಲ್ ಅನ್ನು ಬೆಂಬಲಿಸಿ ಮತ್ತೆ ಯಾರಾದರೂ ಮುಂದುವರೆದರೆ ನಮ್ಮ ಬೆರಳುಗಳು ಬಂದೂಕಿನ ಟ್ರಿಗರ್‌ಗಳ ಮೇಲೆಯೇ ಇವೆ ಎಂದು ಹುತಿ ಕಮಾಂಡರ್ ಇತ್ತೀಚೆಗೆ ಎಚ್ಚರಿಸಿದ್ದ ಬೆನ್ನಲ್ಲೇ ಯೆಮೆನ್‌ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಆಗಿದೆ. ಇಸ್ರೇಲ್, ಅಮೆರಿಕ ಪಡೆಗಳು ಇರಾನ್ ಮೇಲೆ ದಾಳಿ ಮಾಡಲು ಕೆಂಪು ಸಮುದ್ರದಲ್ಲಿ ಆಟಾಟೋಪ ಪ್ರದರ್ಶಿಸಿದರೇ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಹೌತಿಗಳು ಎಚ್ಚರಿಸಿದ್ದಾರೆ. ಯೆಮೆನ್‌ನಲ್ಲಿ ಅಲ್ಪಸಂಖ್ಯಾತರು ಎನಿಸಿಕೊಂಡಿರುವ ಶಿಯಾ ಪಂಗಡದ ಉಪ ಪಂಗಡವಾಗಿರುವ ಹೌತಿಗಳಿಗೆ ಇರಾನ್ ಸಂಪೂರ್ಣ ಬೆಂಬಲ ನೀಡುತ್ತಿದೆ.

ಇನ್ನೊಂದೆಡೆ ಹೌತಿ ಸೇನೆಯ ನಾಯಕರೊಬ್ಬರು ಇಸ್ರೇಲ್‌-ಅಮೆರಿಕ ಮಾಡುತ್ತಿರುವ ಯುದ್ಧ ಇಡೀ ಮುಸ್ಲಿಂ ರಾಷ್ಟ್ರಗಳ ವಿರುದ್ಧ. ಇದು ಇಸ್ಲಾಂ ವಿರುದ್ಧದ ಯುದ್ಧ. ಏಕತೆ, ನಮ್ಮ ಅಸ್ಮಿತೆಯ ವಿರುದ್ಧ ಎಂದು ಗುಡುಗಿರುವ ವಿಡಿಯೊಗಳು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಹರಿದಾಡುತ್ತಿವೆ. ಸದ್ಯ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಅಧಿಕೃತವಾಗಿ ಹೌತಿಗಳು ಮಧ್ಯಪ್ರವೇಶಿಸಿದಂತಾಗಿದೆ. ಇದರಿಂದಾಗಿ ಕೆಂಪು ಸಮುದ್ರದಲ್ಲೂ ಕೆಂಪು ಬಾವುಟಗಳು ಹಾರುವಂತಾಗಿದೆ.

Shwetha M