ಸ್ಕೂಲ್ ಫೀಸ್ ಆಯ್ತು.. ಈಗ ಪಠ್ಯ ಪುಸ್ತಕವೂ ಬಲು ದುಬಾರಿ! – ಒಂದು ಪಠ್ಯ ಪುಸ್ತಕದ ಬೆಲೆ 1,035 ರೂ!

ಈಗೀಗ ಶಿಕ್ಷಣ ಕೂಡ ಬ್ಯುಸಿನೆಸ್ ಆಗಿ ಬಿಟ್ಟಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್, ಅತಿಯಾದ ಶುಲ್ಕ, ಮತ್ತು ಪುಸ್ತಕ/ಯೂನಿಫಾರ್ಮ್ ಹೆಸರಿನಲ್ಲಿ ಪೋಷಕರಿಂದ ಭಾರಿ ಹಣ ವಸೂಲಿ ಮಾಡುತ್ತಿವೆ. ಈ ಬಗ್ಗೆ ಸಾಕಷ್ಟು ಸುದ್ದಿಗಳು ಸದ್ದು ಮಾಡುತ್ತಿವೆ. ಇದೀಗ ಇಲ್ಲೊಂದು ಕಡೆ 5 ಕ್ಲಾಸ್‌ನ ಪಠ್ಯ ಪುಸ್ತಕದ ಬೆಲೆ ಕೇಳಿ ಪೋಷಕರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ಬಳಿಕ ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ!
ಇಂದು ಶಿಕ್ಷಣ ಕ್ಷೇತ್ರ ಅನ್ನುವುದು ದಿನೇ ದಿನೇ ದುಬಾರಿಯಾಗುತ್ತಿದೆ. ಹೆಚ್ಚುತ್ತಿರುವ ಶಾಲಾ ಶುಲ್ಕದ ಮೊತ್ತ, ಸಮ ವಸ್ತ್ರಗಳು ಮತ್ತು ಪುಸ್ತಕದ ವೆಚ್ಚಗಳು ಮಧ್ಯಮ ವರ್ಗದ ಕುಟುಂಬಗಳಿಗೆ ಭರಿಸುವುದು ಕಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ 5ನೇ ತರಗತಿ ವಿದ್ಯಾರ್ಥಿಯ ಪಠ್ಯಪುಸ್ತಕದ ಬೆಲೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. 5ನೇ ತರಗತಿ ವಿದ್ಯಾರ್ಥಿಯ ಇಂಗ್ಲೀಷ್ ಪುಸ್ತಕಕ್ಕೇ ದುಬಾರಿ ಮೊತ್ತ ವಿಧಿಸಿರುವ ಬಗ್ಗೆ ಪೋಷಕರೇ ಶಾಕ್ ಆಗಿದ್ದಾರೆ. ಇಂಗ್ಲಿಷ್ ಪಠ್ಯಪುಸ್ತಕದ ಬೆಲೆ 1,035 ರೂ. ಎಂದು ವ್ಯಕ್ತಿ ಯೊಬ್ಬರು ಬಹಿರಂಗಪಡಿಸಿದ ನಂತರ ಪೋಷಕರಲ್ಲಿ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ.
ಲಕ್ನೋದ ಸಿಟಿ ಮಾಂಟೆಸ್ಸರಿ ಶಾಲೆಯ 5ನೇ ತರಗತಿಯ ಬರ್ಲಿಂಗ್ಟನ್ ಇಂಗ್ಲಿಷ್ ಸರಣಿಯ ಕೇವಲ ಒಂದು ಪುಸ್ತಕಕ್ಕೆ 1035ರುಪಾಯಿ. ಸಣ್ಣ ಮಕ್ಕಳ ಪುಸ್ತಕಕ್ಕೆ ಇಷ್ಟು ಹಣ ವಸೂಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಕೇವಲ 50 ರೂಪಾಯಿ ಪುಸ್ತಕಕ್ಕೆ ಇಷ್ಟೊಂದು ಹಣವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ವೈರಲ್ ಆದ ವಿಡಿಯೋಲ್ಲಿ ಹಿಂದಿಯಲ್ಲಿ ಮಾತನಾಡುತ್ತಾ, ಅವರು ಬೆಲೆಯನ್ನು ಪ್ರಶ್ನಿಸುತ್ತಾ, “ಇದು ಸಿಟಿ ಮಾಂಟೆಸ್ಸರಿ ಶಾಲೆಯ ಇಂಗ್ಲಿಷ್ ಪುಸ್ತಕ. ಇದರ ಹೆಸರು ಬರ್ಲಿಂಗ್ಟನ್ ಇಂಗ್ಲಿಷ್ ಇದರ ಬೆಲೆ ಎಷ್ಟು? ಕೇವಲ ಒಂದು ಪುಸ್ತಕ. 1035 ರೂ. ಇದು ಶಿಕ್ಷಣ ಅಲ್ಲ ವಸೂಲಿ ಮಾಡುವ ಚಮತ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹೆಚ್ಚುತ್ತಿರುವ ವೆಚ್ಚಗಳು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಬಳಕೆದಾರರೊಬ್ಬರು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಶಾಲಾ ಪುಸ್ತಕಗಳ ಬೆಲೆಯನ್ನು ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರರು ಪಠ್ಯಪುಸ್ತಕ ಬೆಲೆಯನ್ನು ಕಡಿಮೆಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

ನೋಡಿರಿ

