ಹೊಂಬಾಳೆ ಫಿಲ್ಮ್ಸ್ ಬಳಿಕ ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ!

ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಅನ್ನು ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರ್ತಿದೆ. ರಾಜ್ ಬಿ ಶೆಟ್ಟಿ ರಿಷಬ್ ಶೆಟ್ಟಿ ಜೊತೆ ಯಾವುದೇ ಮನಸ್ತಾಪ ಇಲ್ಲ ಈಗಾಗಲೇ ಪ್ರತಿಕ್ರಿಯೆ ನೀಡಿದ್ರು. ಆದ್ರೆ ರಿಷಭ್ ಶೆಟ್ಟಿ ಈ ಬಗ್ಗೆ ಮೌನ ವಹಿಸಿದ್ದಾರೆ. ಇದೀಗ ರಿಷಬ್ ಶೆಟ್ಟಿ ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್, ಹೊಂಬಾಳೆ ಫಿಲ್ಮ್ಸ್ನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿದ್ದಾರೆ. ರಿಷಬ್ ಶೆಟ್ಟಿ ಈ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: RCB ಪಂದ್ಯದ ಟಿಕೆಟ್ಗೆ ಡಿಮ್ಯಾಂಡ್ ಮಾಡಿದ ಶಾಸಕರಿಗೆ ಗುಡ್ನ್ಯೂಸ್! – MLAಗಳಿಗೆ ಸಿಗಲಿದೆ 1+1 ಟಿಕೆಟ್!
ನಟ ರಿಷಭ್ ಶೆಟ್ಟಿ ಯುಗಾದಿ ಹಬ್ಬದ ದಿನ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ್ರು. ಅದಾದ ಕೆಲವೇ ಹೊತ್ತಲ್ಲಿ ಹೊಂಬಾಳೆ ಫಿಲ್ಮ್ಸ್ನ್ನು ಅನ್ಫಾಲೋ ಮಾಡಿದ್ದರು. ಈ ಬಗ್ಗೆ ವದಂತಿ ವೈರಲ್ ಆಗುತ್ತಿರುವಾಗಲೇ ಇದೀಗ ರುಕ್ಮಿಣಿ ವಸಂತ್ ಹಾಗೂ ರಾಜ್ ಬಿ ಶೆಟ್ಟಿ ಅವರನ್ನು ಅನ್ಫಾಲೋ ಮಾಡಿದ್ದಾರೆ. ಹೀಗಾಗಿ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅದೇ ಕಾರಣಕ್ಕೆ ಇನ್ಸ್ಟಾಗ್ರಾಮ್ನಲ್ಲಿ ಹೊಂಬಾಳೆ ಅಕೌಂಟ್ ಅನ್ಫಾಲೋ ಮಾಡಿದ್ದಾರೆ ಎನ್ನುವ ಚರ್ಚೆ ನಡೆದಿತ್ತು.
ರಿಷಬ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆ ಪಡದಿದ್ದು ಕಾಂತಾರ ಸಿನಿಮಾ ಮೂಲಕ. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು. ಆ ಬಳಿಕ ಕಾಂತಾರ: ಚಾಪ್ಟರ್ 1 ಸಿನಿಮಾ ಮಾಡಿದರು. ಈ ಚಿತ್ರಕ್ಕೆ ಎರಡನೇ ಚಾಪ್ಟರ್ ಬರಬೇಕಿತ್ತು. ಹೀಗಿರುವಾಗಲೇ ರಿಷಬ್ ಅವರು ಯುಗಾದಿಗೆ ‘ಚಾಪ್ಟರ್ 2’ ಎಂದು ರಿಷಬ್ ಘೋಷಣೆ ಮಾಡಿದ್ದರು.
ಕಾಂತಾರ ಸರಣಿಯನ್ನು ನಿರ್ಮಾಣ ಮಾಡಿರೋದು ಹೊಂಬಾಳೆ ಫಿಲ್ಮ್ಸ್. ಆದರೆ, ‘ಚಾಪ್ಟರ್ 2’ ಅನೌನ್ಸ್ ಮಾಡಿರೋದು ಅವರದ್ದೇ ಬ್ಯಾನರ್ ಅಡಿಯಲ್ಲಿ. ರಿಷಬ್ ಪೋಸ್ಟರ್ ಅಲ್ಲಿ ಎಲ್ಲಿಯೂ ಇದು ಕಾಂತಾರ: ಚಾಪ್ಟರ್ 2 ಎಂದು ಅನೌನ್ಸ್ ಮಾಡಿಲ್ಲ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಕ್ಕೆ ಎರಡನೇ ಚಾಪ್ಟರ್ ಇದಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಇವುಗಳ ಮಧ್ಯೆ ರಿಷಬ್ ಅವರು ಇನ್ಸ್ಟಾದಲ್ಲಿ ಕಾಂತಾರ ಹಾಗೂ ಹೊಂಬಾಳೆ ಫಿಲ್ಮ್ಸ್ ಖಾತೆಯನ್ನು ಅನ್ಫಾಲೋ ಮಾಡಿ, ಈಗ ರಾಜ್ ಹಾಗೂ ರುಕ್ಮಿಣಿ ಅವರನ್ನೂ ಅನ್ಫಾಲೋ ಮಾಡಿರೋದು ಚರ್ಚೆಗೆ ಕಾರಣ ಆಗಿದೆ. ಆದರೆ ರಾಜ್ ಹಾಗೂ ರುಕ್ಮಿಣಿ ಅವರು ರಿಷಬ್ ಅವರನ್ನು ಫಾಲೋ ಮಾಡ್ತಾ ಇದ್ದಾರೆ.

ನೋಡಿರಿ

