RCB Vs CSK ರಿವೇಂಜ್ ಫೈಟ್ ಇಲ್ಲ – ಬೆಂಗಳೂರಲ್ಲಿ ಫಸ್ಟ್ ಆಫ್ ಮಾತ್ರ ಯಾಕೆ?
14 ಪಂದ್ಯ.. ರಾಯ್ಪುರ ಪ್ಲಸ್ Or ಮೈನಸ್?

2026ರ ಐಪಿಎಲ್ ಸ್ಟಾರ್ಟ್ ಆಗೋ ಮೊದ್ಲೇ ಬಿಸಿಸಿಐ ಕಂಪ್ಲೀಟ್ ಶೆಡ್ಯೂಲ್ ಅನೌನ್ಸ್ ಮಾಡಿದೆ. ನಾಳೆಯಿಂದ ಮೇ 31ರವರೆಗೆ ಪಂದ್ಯಗಳು ನಡೆಯಲಿವೆ. ಈ ಸಲ ಹೆಚ್ಚುವರಿ 10 ಪಂದ್ಯಗಳನ್ನ ಌಡ್ ಮಾಡ್ತಾರೆ ಅನ್ನೋ ಚರ್ಚೆ ಇತ್ತು. ಬಟ್ ಕಳೆದ ಸೀಸನ್ನಂತೆಯೇ ಯಾವುದೇ ಚೇಂಜಸ್ ಇಲ್ಲ. ಈ ಕನ್ಫ್ಯೂಷನ್ಗೆ ಕ್ಲಾರಿಟಿ ಸಿಕ್ಕಿದೆ. ಬಟ್ ಲಿಸ್ಟ್ ನೋಡಿದ್ಮೇಲೆ ಆರ್‌ಸಿಬಿ ಫ್ಯಾನ್ಸ್ ಸ್ವಲ್ಪ ನಿರಾಸೆಯಾಗಿದ್ದಾರೆ.
ಇದನ್ನೂ ಓದಿ : IPL ಆರಂಭಕ್ಕೂ ಮುನ್ನ 10 ತಂಡಗಳ ನಾಯಕರೊಂದಿಗೆ ಸಭೆ – ರೂಲ್ಸ್ ಕೇಳಿ ಕ್ಯಾಪ್ಟನ್‌ಗಳು ಆಕ್ರೋಶಗೊಂಡಿದ್ದೇಕೆ ಗೊತ್ತಾ?
19ನೇ ಆವೃತ್ತಿ.. 10 ಫ್ರಾಂಚೈಸಿ.. ಲೀಗ್ ಹಂತದಲ್ಲಿ ತಲಾ 14 ಮ್ಯಾಚಸ್.. ಟೋಟಲ್ 74 ಪಂದ್ಯಗಳು.. 2026ರ ಐಪಿಎಲ್ ಆರಂಭಕ್ಕೆ ಕೌಂಟ್ಡೌನ್ ಹೊತ್ತಲ್ಲೇ ಇಡೀ ಆವೃತ್ತಿಯ ವೇಳಾಪಟ್ಟಿಯನ್ನ ಬಿಸಿಸಿಐ ರಿಲೀಸ್ ಮಾಡಿದೆ. ಫಸ್ಟ್ ಪೇಸ್ನಲ್ಲಿ ಏಪ್ರಿಲ್ 12ರವರೆಗೆ 20 ಪಂದ್ಯಗಳ ಡಿಟೇಲ್ಸ್ ಕೊಟ್ಟಿದ್ರು. ಈಗ ಉಳಿದ 54 ಪಂದ್ಯಗಳ ಶೆಡ್ಯೂಲ್ ಕೂಡ ಹೊರಬಿದ್ದಿದೆ. ಇನ್ನು ಬೆಂಗಳೂರು ತಂಡ ಈ ಸೀಸನ್ನಲ್ಲಿ ಎರಡು ತವರು ಮೈದಾನಗಳಲ್ಲಿ ಪಂದ್ಯಗಳನ್ನ ಆಡಲಿದೆ. ಅಧಿಕೃತ ಹೋಂ ಪಿಚ್ ಆಗಿರುವ ಚಿನ್ನಸ್ವಾಮಿಯಲ್ಲಿ 5 ಪಂದ್ಯ ಹಾಗೇ ರಾಯ್ಪುರದಲ್ಲಿ 2 ಮ್ಯಾಚಸ್ ಇರುತ್ತೆ.
ಆರ್ ಸಿಬಿ ಲೀಗ್ ಹಂತದ ಪಂದ್ಯಗಳು!
ದಿನಾಂಕ ಎದುರಾಳಿ ಸ್ಥಳ ಸಮಯ
ಮಾರ್ಚ್ 28 ಹೈದರಾಬಾದ್ ಬೆಂಗಳೂರು ಸಂಜೆ 7:30
ಏಪ್ರಿಲ್ 05 ಚೆನ್ನೈ – ಬೆಂಗಳೂರು ಸಂಜೆ 7:30
ಏಪ್ರಿಲ್ 10 ರಾಜಸ್ಥಾನ ಗುವಾಹಟಿ ಸಂಜೆ 7:30
ಏಪ್ರಿಲ್ 12 ಮುಂಬೈ ಮುಂಬೈ ಸಂಜೆ 7:30
ಏಪ್ರಿಲ್ 15 ಲಕ್ನೋ ಬೆಂಗಳೂರು ಸಂಜೆ 7:30
ಏಪ್ರಿಲ್ 18 ದೆಹಲಿ ಬೆಂಗಳೂರು ಮಧ್ಯಾಹ್ನ 3:30
ಏಪ್ರಿಲ್ 24 ಗುಜರಾತ್ ಬೆಂಗಳೂರು – ಸಂಜೆ 7:30
ಏಪ್ರಿಲ್ 27 ದೆಹಲಿ – ದೆಹಲಿ ಸಂಜೆ 7:30
ಏಪ್ರಿಲ್ 30 ಗುಜರಾತ್ ಅಹಮದಾಬಾದ್ ಸಂಜೆ 7:30
ಮೇ 07 ಲಕ್ನೋ ಲಕ್ನೋ ಸಂಜೆ 7:30
ಮೇ 10 ಮುಂಬೈ – ರಾಯ್ಪುರ ಸಂಜೆ 7:30
ಮೇ 13 ಕೋಲ್ಕತ್ತಾ ರಾಯ್ಪುರ ಸಂಜೆ 7:30
ಮೇ 17 ಪಂಜಾಬ್ – ಧರ್ಮಶಾಲಾ ಮಧ್ಯಾಹ್ನ 3:30
ಮೇ 22 ಹೈದರಾಬಾದ್ – ಹೈದರಾಬಾದ್ ಸಂಜೆ 7:30
ಐಪಿಎಲ್ನಲ್ಲಿ ಫೈನಲ್ ಮ್ಯಾಚ್ಗೂ ಇಲ್ದೆ ಇರೋವಷ್ಟು ಕ್ರೇಜ್ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಪಂದ್ಯಗಳಿಗೆ ಇರುತ್ತೆ. ಬಟ್ ಈ ಸಲ ಎರಡು ತಂಡಗಳ ನಡುವೆ ರಿವೇಂಜ್ ಮ್ಯಾಚ್ ಇಲ್ವೇ ಇಲ್ಲ. ಯಾಕಂದ್ರೆ ಈ ಸೀಸನ್ನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗುತ್ತಿವೆ. ಪ್ರತಿ ವರ್ಷ ಉಭಯ ತಂಡಗಳ ನಡುವೆ 2 ಪಂದ್ಯಗಳು ಇರ್ತಿತ್ತು. ಬಟ್ ಈ ಸಲ ಒಂದೇ ಪಂದ್ಯ ಇರೋದ್ರಿಂದ ರಿವೇಂಜ್ ಮ್ಯಾಚ್ ಸಿಗಲ್ಲ. ಆ ಪಂದ್ಯ ಕೂಡ ಸೀಸನ್ ಆರಂಭದಲ್ಲೇ ಇದೆ. ಏಪ್ರಿಲ್ 5ಕ್ಕೆ ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಮ್ಯಾಚ್ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಷ್ಟೇ ಅಲ್ಲದೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧವೂ ಒಂದು ಪಂದ್ಯ ಮಾತ್ರ ಇರುತ್ತೆ. ರಿವೇಂಜ್ ಮ್ಯಾಚಸ್ ಇರಲ್ಲ.
ರಾಯ್ಪುರದ ಪಂದ್ಯಗಳು ಆರ್ ಸಿಬಿಗೆ ಸವಾಲಾಗುತ್ತಾ?
ಇನ್ನು ಈ ಸೀಸನ್ ಆರಂಭಕ್ಕೂ ಮುನ್ನ ಚಿನ್ನಸ್ವಾಮಿಯಲ್ಲಿ ಪಂದ್ಯಗಳಿಗೆ ಅನುಮತಿ ಸಿಗುತ್ತೋ ಇಲ್ವೋ ಅನ್ನೋ ಟೆನ್ಷನ್ನಲ್ಲಿದ್ದ ಫ್ರಾಂಚೈಸಿ ಛತ್ತೀಸ್ಗಢದ ರಾಯ್ಪುರದಲ್ಲಿ ತನ್ನ ತವರಿನ ಪಂದ್ಯಗಳನ್ನ ಆಡೋದಾಗಿ ಘೋಷಣೆ ಮಾಡಿತ್ತು. ಆ ನಂತ್ರ ಬೆಂಗಳೂರಲ್ಲಿ ಪರ್ಮಿಷನ್ ಸಿಕ್ಕ ಮೇಲೆ ಆರ್‌ಸಿಬಿ ಅಟ್ಲೀಸ್ಟ್ 2 ಮ್ಯಾಚ್ಗಳನ್ನಾದ್ರೂ ರಾಯ್ಪುರದಲ್ಲಿ ಆಡ್ತೀವಿ ಅಂದಿದ್ರು. 65 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರೋ ಈ ಸ್ಟೇಡಿಯಂ ಭಾರತದ ಎರಡನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ. ಅದ್ರಂತೆ 2 ಪಂದ್ಯಗಳ ಲಿಸ್ಟ್ ಅನೌನ್ಸ್ ಆಗಿದೆ. ಎರಡನೇ ತವರು ಮೈದಾನದಲ್ಲಿ ಎರಡು ಪಂದ್ಯಗಳನ್ನು ಆಡಲಿದ್ದು, ಮೇ 10 ರಂದು ಮುಂಬೈ ವಿರುದ್ಧ ಮತ್ತು ಮೇ 13 ರಂದು ಕೆಕೆಆರ್ ವಿರುದ್ಧದ ಪಂದ್ಯಗಳು ನಡೆಯಲಿವೆ. ಬ್ಯಾಕ್ ಟು ಬ್ಯಾಕ್ ಅದೇ ಮೈದಾನದಲ್ಲಿ ಮ್ಯಾಚ್ ಇರುತ್ತೆ. ಆದ್ರೆ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಮೈದಾನ ಆರ್ಸಿಬಿಗೆ ಸವಾಲಾಗೋ ಸಾಧ್ಯತೆಗಳಿವೆ. ಯಾಕಂದ್ರೆ ಯಾವುದೇ ತಂಡಕ್ಕೂ ಹೋಂ ಪಿಚ್ ಅಡ್ವಾಂಟೇಜಸ್ ಜಾಸ್ತಿ. ಆದ್ರೆ ರಾಯ್ಪುರ ಪಿಚ್ ಆರ್ಸಿಬಿಗೂ ಹೊಸದು. ರಾಯ್‌ಪುರದಲ್ಲಿ ಕೊನೆಯ ಬಾರಿಗೆ 2013 ರಲ್ಲಿ ಐಪಿಎಲ್ ಪಂದ್ಯ ನಡೆದಿದ್ದು. ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಫೇಸ್ ಮಾಡಿತ್ತು. ಅಂದಿನಿಂದ ಮತ್ತೆ ಇಲ್ಲಿ ಐಪಿಎಲ್ ಪಂದ್ಯಗಳು ನಡೆದಿಲ್ಲ. ಹೀಗಾಗಿ ಆರ್ಸಿಬಿಗೆ ಸವಾಲಾಗೋ ಸಾಧ್ಯತೆಗಳಿವೆ. ಇತ್ತ ಚಿನ್ನಸ್ವಾಮಿ ಮೈದಾನಗಳ ಬಗ್ಗೆ ಬೇರೆಯದ್ದೇ ಬೇಸರ ಇದೆ.
ಫಸ್ಟ್ ಆಫ್ ನಲ್ಲಿ ಮಾತ್ರವೇ ಚಿನ್ನಸ್ವಾಮಿಯಲ್ಲಿ ಪಂದ್ಯಗಳು!
ಕರ್ನಾಟಕ ಕ್ರಿಕೆಟಿಗರ ಹೃದಯದಂತಿರೋ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನ ಆಯೋಜನೆ ಮಾಡ್ಲೇಬೇಕು ಅಂತಾ ಕೆಎಸ್ಸಿಎ ಹತ್ತಾರು ಸರ್ಕಸ್ ಮಾಡಿತ್ತು. ಸರ್ಕಾರದ ಒಪ್ಪಿಗೆ ಪಡೆದು ಫ್ರಾಂಚೈಸಿಯನ್ನ ಒಪ್ಪಿಸೋಕೆ ಕಸರತ್ತು ನಡೆಸಿತ್ತು. ಕೊನೆಗೂ ಪರ್ಮಿಷನ್ ಗಿಟ್ಟಿಸಿಕೊಂಡಿತ್ತು. ಕಳೆದೊಂದು ವರ್ಷದಿಂದ ಇಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. ಈ ಸಲ ಅನುಮತಿ ಸಿಕ್ಕಿದ್ದು ಖುಷಿ ವಿಚಾರವೇ. ಆದ್ರೆ ಫಸ್ಟ್ ಆಫ್ನಲ್ಲಿ ಮಾತ್ರವೇ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತೆ. ಸೆಕೆಂಡ್ ಆಫ್ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯಗಳೂ ನಡೆಯಲ್ಲ. ಮೊದಲ 7 ಪಂದ್ಯಗಳಲ್ಲೇ ಆರ್‌ಸಿಬಿ ಇಲ್ಲಿ 5 ಪಂದ್ಯಗಳನ್ನ ಆಡಲಿದೆ. ಆ ನಂತ್ರದ 7 ಪಂದ್ಯಗಳು ರಾಯ್ಪುರ 2 ಹಾಗೇ ಅವೇ ಪಿಚ್ಗಳಲ್ಲಿ ನಡೆಯಲಿವೆ. ಸೋ ಸೆಕೆಂಡ್ ಆಫ್ನಲ್ಲಿ ಪ್ಲೇ ಆಫ್ ಲೆಕ್ಕಾಚಾರದ ನಡುವೆ ಹೈವೋಲ್ಟೇಜ್ ಮ್ಯಾಚ್ಗಳನ್ನ ಬೆಂಗಳೂರಿನಲ್ಲಿ ನೋಡೋಕೆ ಫ್ಯಾನ್ಸ್ಗೆ ಅವಕಾಶ ಇರಲ್ಲ. ಸೋ ಇದು ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದೆ.

ನೋಡಿರಿ

