2026ರ IPL ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟ – ಆರ್‌ಸಿಬಿ ಪಂದ್ಯ ಯಾವಾಗ ಗೊತ್ತಾ?

2026ರ  IPL ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟ – ಆರ್‌ಸಿಬಿ ಪಂದ್ಯ ಯಾವಾಗ ಗೊತ್ತಾ?

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮಾರ್ಚ್‌ 26 ರಂದು ಗುರುವಾರ ಪ್ರಕಟಿಸಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಿಮಿತ್ತ ಕಳೆದ ತಿಂಗಳು ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಘೋಷಣೆ ಮಾಡಿತ್ತು. ಆದರೆ, ಇದೀಗ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಗುರುವಾರ ಟಾಟಾ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಲೀಗ್ ಹಂತದಲ್ಲಿ ಉಳಿದಿದ್ದ 50 ಪಂದ್ಯಗಳು ಏಪ್ರಿಲ್ 13ರಿಂದ ಮೇ 24ರವರೆಗೆ ಭಾರತದೆಲ್ಲೆಡೆ 12 ಸ್ಥಳಗಳಲ್ಲಿ ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಬೆಂಗಳೂರು, ಮುಂಬೈ,ಚೆನ್ನೈ, ಕೋಲ್ಕತಾ, ದೆಹಲಿ, ಅಹಮದಾಬಾದ್‌, ಹೈದರಾಬಾದ್‌, ಲಖನೌ, ಜೈಪುರ, ಧರ್ಮಶಾಲಾ, ರಾಯ್ಪುರ ಹಾಗೂ ನ್ಯೂ ಚಂಡೀಗಢ ನಗರಗಳಲ್ಲಿ ನಡೆಯಲಿವೆ.

ಇದನ್ನೂ ಓದಿ: RCB ಪ್ಲೇಯಿಂಗ್ 11 ಹೀಗಿರುತ್ತಾ? – ಬೆಥೆಲ್ Vs ಸಾಲ್ಟ್.. ಯಾರು ಔಟ್?

ಇದಕ್ಕೂ ಮುನ್ನ ಬಿಸಿಸಿಐ ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ನಡೆಯುವ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. 2026ರ ಏಪ್ರಿಲ್ 13 ರಿಂದ ಪಂದ್ಯಗಳು ಪುನರಾರಂಭವಾಗಲಿದೆ. ಇದು ಮುಂದಿನ ರೋಚಕ ಪಂದ್ಯಗಳ ಸರಣಿಗೆ ಶುಭಾರಂಭವಾಗಲಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ‘ಎಲ್ ಕ್ಲಾಸಿಕೊ’ ಮೊದಲ ಪಂದ್ಯ ಏಪ್ರಿಲ್ 23ರಂದು ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಮೇ 2ರಂದು ನಲ್ಲಿ ನಡೆಯಲಿದೆ.

ಎರಡನೇ ಹಂತದಲ್ಲಿ ಒಟ್ಟು ಎಂಟು ಡಬಲ್-ಹೆಡರ್ ಪಂದ್ಯಗಳು ನಡೆಯಲಿದ್ದು, ಮಧ್ಯಾಹ್ನ ಪಂದ್ಯಗಳು 03:30ಕ್ಕೆ ಮತ್ತು ಸಂಜೆ ಪಂದ್ಯಗಳು ರಾತ್ರಿ 07:30ಕ್ಕೆ ಆರಂಭವಾಗಲಿವೆ. ಪಂಜಾಬ್‌ ಕಿಂಗ್ಸ್‌ ತಂಡ, ತನ್ನ ತವರು ಪಂದ್ಯಗಳನ್ನು ನ್ಯೂ ಚಂಡೀಗಢ ಮತ್ತು ಧರ್ಮಶಾಲಾದಲ್ಲಿ ಆಡಲಿದೆ. ಈ ಹಂತದಲ್ಲಿ ಧರ್ಮಶಾಲಾದಲ್ಲಿ ಮೂರು ಪಂದ್ಯಗಳು ನಡೆಯಲಿವೆ. ರಾಜಸ್ಥಾನ್‌ ರಾಯಲ್ಸ್‌ ತನ್ನ ನಾಲ್ಕು ತವರು ಪಂದ್ಯಗಳನ್ನು ಜೈಪುರದಲ್ಲಿ ಆಯೋಜಿಸಲಿದೆ.

ಇದೇ ವೇಳೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೂರು ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಹಾಗೂ ಇನ್ನೆರಡು ಪಂದ್ಯಗಳನ್ನು ರಾಯ್ಪುರದಲ್ಲಿ ಆಡಿಸಲಾಗುತ್ತದೆ. ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ತಡವಾಗಿ ಪ್ರಕಟಿಸಲಾಗುತ್ತದೆ.

Kishor KV