BCCI ನಿಯಮಕ್ಕೆ ಕ್ಯಾಪ್ಟನ್ಸ್ ನಿಗಿನಿಗಿ – ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬೇಡ್ವಾ?
2027ರವರೆಗೆ ಬದಲಾವಣೆ ಇಲ್ಲ ಯಾಕೆ?

BCCI ನಿಯಮಕ್ಕೆ ಕ್ಯಾಪ್ಟನ್ಸ್ ನಿಗಿನಿಗಿ – ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬೇಡ್ವಾ?2027ರವರೆಗೆ ಬದಲಾವಣೆ ಇಲ್ಲ ಯಾಕೆ?

2026ರ ಐಪಿಎಲ್​ ಒಂಥರಾ ಸ್ಪೆಷಲ್ ಸೀಸನ್. ಯಾಕಂದ್ರೆ ಈ ಸಲ ಎಲ್ರೂ ಇಂಡಿಯನ್​ ಕ್ಯಾಪ್ಟನ್​ಗಳೇ ಇದ್ದಾರೆ. ಬುಧವಾರ ಕ್ಯಾಪ್ಟನ್ ಮೀಟ್ ಆಗಿದ್ದು ಟ್ರೋಫಿ ಜೊತೆ ಫೋಟೋಶೂಟ್ ಕೂಡ ನಡೀತು. ಇಂಟ್ರೆಸ್ಟಿಂಗ್ ಅಂದ್ರೆ ನಾಯಕರ ಸಭೆಯಲ್ಲಿ ಒಂದು ಗಂಭೀರ ವಿಚಾರವನ್ನ ಚರ್ಚೆ ಮಾಡಲಾಗಿದೆ. ವಿರೋಧದ ಅಲೆ ಎದ್ದಿದೆ. ಅದುವೇ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್.

ಇದನ್ನೂ ಓದಿ : ಐಪಿಎಲ್ ಫ್ಯಾನ್ಸ್‌ಗೆ ಬಿಗ್ ಶಾಕ್ – ಚಿನ್ನಸ್ವಾಮಿಯಲ್ಲಿ ನಡೆಯಲ್ಲ ಉದ್ಘಾಟನಾ ಸಮಾರಂಭ

ಐಪಿಎಲ್​ನಲ್ಲಿ 2023ರಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನ ತರಲಾಗಿದೆ. ಆದ್ರೆ ಈ ನಿಯಮದ ಬಗ್ಗೆ ಮೊದ್ಲಿಂದಲೂ ಪರವಿರೋಧ ಎರಡೂ ಇದೆ. ಈಗ 2026ರ ಐಪಿಎಲ್​ಗೂ ಮುನ್ನ ನಡೆದ ನಾಯಕರ ಸಭೆಯಲ್ಲಿ ಮತ್ತೆ ಈ ರೂಲ್ಸ್ ಬಗ್ಗೆ ಚರ್ಚೆಯಾಗಿದೆ. ಸಾಕಷ್ಟು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೂಲ್ಸ್ ಅಗತ್ಯ ಇಲ್ಲ ಎಂದಿದ್ದಾರೆ. ಕೆಲವು ನಾಯಕರು ಇದು ತಂಡದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆಲ್‌ರೌಂಡರ್‌ಗಳ ಮೌಲ್ಯವನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ. ಸಭೆಯಲ್ಲಿ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್, ಸಿಒಒ ಹೇಮಾಂಗ್ ಅಮೀನ್ ಮತ್ತು ಹಿರಿಯ ಬಿಸಿಸಿಐ ಅಧಿಕಾರಿಗಳು ಭಾಗವಹಿಸಿದ್ದರು. ಆದ್ರೆ ಬಿಸಿಸಿಐ ಮಾತ್ರ 2027ರವರೆಗೆ ಈ ನಿಯಮವನ್ನ ವಿಸ್ತರಿಸಿದೆ.

ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್!

2023ರಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ

11 ಆಟಗಾರರ ಬದಲಿಗೆ 12 ಆಟಗಾರರನ್ನು ಆಡಿಸುವ ಅವಕಾಶ ಇದೆ

ಬದಲಿ ಆಟಗಾರನಾಗಿ ಕಣಕ್ಕಿಳಿದ ಆಟಗಾರ ಬ್ಯಾಟಿಂಗ್ ಅಥವಾ ಬೌಲಿಂಗ್

ಯಾವುದೇ ಹಂತದಲ್ಲಿ ಬೇಕಾದರೂ ಬದಲಿ ಆಟಗಾರನನ್ನು ಬದಲಾಯಿಸಬಹುದು

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ಬಲಿಷ್ಠಪಡಿಸಿಕೊಳ್ಳಲು ಸಾಧ್ಯ

ಈ ನಿಯಮದಿಂದಾಗಿ ಆಲ್ ​ರೌಂಡರ್ ಆಟಗಾರರ ವ್ಯಾಲ್ಯೂ ಕಮ್ಮಿ ಆಗ್ತಿದೆ

ಬ್ಯಾಟರ್ ಅಥವಾ ಬೌಲರ್ ಮೇಲೆ ಫೋಕಸ್ ಮಾಡ್ತಿರುವ ಮಾಲೀಕರು

ಆಲ್ ​ರೌಂಡರ್ ಗಳ ಮಹತ್ವ ಕಡಿಮೆಯಾಗುತ್ತೆ ಅನ್ನೋದು ಆಟಗಾರರ ವಾದ

ಹಿರಿಯ ಆಟಗಾರರೂ ಈ ನಿಯಮವನ್ನ ವಿರೋಧಿಸಿಕೊಂಡೇ ಬಂದಿದ್ದಾರೆ

ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನ ಸದ್ಯಕ್ಕೆ ರದ್ದು ಮಾಡೋಕಂತೂ ಸಾಧ್ಯ ಇಲ್ಲ. ಯಾಕಂದ್ರೆ 2025ರ ಐಪಿಎಲ್​ಗೂ ಮುನ್ನ 3 ವರ್ಷಗಳ ಕಾಲ ಈ ನಿಯಮವನ್ನ ಬಿಸಿಸಿಐ ವಿಸ್ತರಣೆ ಮಾಡಿದೆ. ಪರಿಣಾಮ 2027ರವರೆಗೆ ಈ ನಿಯಮ ಜಾರಿಯಲ್ಲಿರುತ್ತೆ. ಐಪಿಎಲ್​ನ 20ನೇ  ಸೀಸನ್ ಪೂರ್ಣಗೊಂಡ ನಂತರವೇ ಮತ್ತೆ ನಿರ್ಧಾರವನ್ನ ಕೈಗೊಳ್ಳಲಾಗುತ್ತೆ.

Shantha Kumari