RCB ಪ್ಲೇಯಿಂಗ್ 11 ಹೀಗಿರುತ್ತಾ? – ಬೆಥೆಲ್ Vs ಸಾಲ್ಟ್.. ಯಾರು ಔಟ್?
ಫಾರಿನರ್ಸ್ ರೇಸ್ ನಲ್ಲಿ ಯಾರಿಗೆ ಚಾನ್ಸ್?

2026ರ ಐಪಿಎಲ್ ಸೀಸನ್ನಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಆಗಿ ಕಣಕ್ಕಿಳಿಯುತ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲಿದೆ. ಹೋಂ ಪಿಚ್ನಲ್ಲೇ ಟೂರ್ನಿ ಆರಂಭ ಮಾಡ್ತಿದ್ದು ಬೆಂಗಳೂರು ಪರ ಈ ಸಲ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋ ಕನ್ಫ್ಯೂಷನ್ ಇದೆ. ಅದ್ರಲ್ಲೂ ಫಾಸ್ಟ್ ಬೌಲಿಂಗ್ ವಿಭಾಗದಲ್ಲಿ ಇಬ್ಬರು ಚಾಂಪಿಯನ್ ಬೌಲರ್ಗಳೇ ಹೊರಗುಳಿಯೋದ್ರಿಂದ ಮತ್ತೆ ಬೌಲಿಂಗ್ ವೀಕ್ ಆಗುತ್ತಾ ಅನ್ನೋ ಟೆನ್ಷನ್ ಕೂಡ ಇದೆ.
ಇದನ್ನೂ ಓದಿ : SSLC ವಿದ್ಯಾರ್ಥಿಗಳಿಗೆ ಶಾಕ್! – ಮಾ. 30 ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ!
ಐಪಿಎಲ್ ಇತಿಹಾಸದಲ್ಲಿ ಎರಡು ತಂಡಗಳು ಮಾತ್ರವೇ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದಿವೆ. 2010 ಮತ್ತು 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೇ 2020 ಮತ್ತು 2021ರಲ್ಲಿ ಮುಂಬೈ ಇಂಡಿಯನ್ಸ್ ಸತತವಾಗಿ ಟ್ರೋಫಿಗೆ ಮುತ್ತಿಟ್ಟಿದ್ರು. ಈಗ ಆರ್ಸಿಬಿ ಕೂಡ ಈ ದಾಖಲೆಯ ಲಿಸ್ಟ್ಗೆ ಸೇರೋ ಟಾರ್ಗೆಟ್ನಲ್ಲೇ ಟೀಂ ರೆಡಿ ಮಾಡಿದೆ. ತಂಡದ ಐಕಾನಿಕ್ ಪ್ಲೇಯರ್ ವಿರಾಟ್ ಕೊಹ್ಲಿ ಜೊತೆ ರಣಬೇಟೆಗಾರರ ಸೇನೆಯನ್ನೇ ರಚಿಸಿದೆ. ಆದ್ರೆ ಈಗ ಇರೋ ಪ್ರಶ್ನೆ ಅಂದ್ರೆ ಕದನಕಣಕ್ಕೆ ಯಾರ್ಯಾರನ್ನ ಇಳಿಸೋದು ಅನ್ನೋದು. ಐಪಿಎಲ್ ನಿಯಮದ ಪ್ರಕಾರ ಪ್ಲೇಯಿಂಗ್ 11ನಲ್ಲಿ 7 ದೇಶೀಯ ಆಟಗಾರರು ಮತ್ತು ನಾಲ್ವರು ವಿದೇಶಿ ಆಟಗಾರರ ಕಾಂಬಿನೇಷನ್ ಇರ್ಬೇಕು. ಹೀಗಾಗಿ ಬ್ಯಾಲೆನ್ಸ್ ಮಾಡಿ ಟೀಂ ಫೈನಲ್ ಮಾಡೋ ಸವಾಲೂ ಇದೆ.
ಆರ್ ಸಿಬಿ ಟಾಪ್ ಆರ್ಡರ್!
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್
ಆರ್ ಸಿಬಿ ಮಿಡಲ್ ಆರ್ಡರ್!
ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್
ಲೋಯರ್ ಮಿಡಲ್ ಆರ್ಡರ್!
ಕೃನಾಲ್ ಪಾಂಡ್ಯ, ರೊಮ್ಯಾರಿಯೋ ಶೆಫರ್ಡ್
ಆರ್ ಸಿಬಿ ಪ್ಲೇಯಿಂಗ್ 11 ಬೌಲರ್ಸ್!
ಜೇಕಬ್ ಡಫಿ, ಮಂಗೇಶ್ ಯಾದವ್, ಭುವನೇಶ್ವರ್ ಕುಮಾರ್
ಇದು ಸದ್ಯಕ್ಕೆ ಆರ್ಸಿಬಿಯ ಪ್ಲೇಯಿಂಗ್ 11 ಪ್ರೆಡಿಕ್ಷನ್. ಇನ್ನು ಕಳೆದ ಬಾರಿಯಂತೆಯೇ ಸುಯಾಶ್ ಶರ್ಮಾರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ತಾರೆ. ಆದ್ರೆ ಸಮಸ್ಯೆ ಇದಲ್ಲ. ಪ್ಲೇಯಿಂಗ್ 11ನಲ್ಲಿ ಆಡಿಸಲೇಬೇಕು ಎನ್ನುವಂಥ ಪ್ರೆಶರ್ ಕ್ರಿಯೇಟ್ ಮಾಡಿರೋ ಪ್ಲೇಯರ್ಸ್ ಕೂಡ ಇದ್ದಾರೆ. ಬೆಂಚ್ ಕಾಯಿಸೋಕೆ ಆಗದಂಥ ಸ್ಥಿತಿ.
ಜೇಕಬ್ ಬೆಥೆಲ್, ವೆಂಕಟೇಶ್ ಅಯ್ಯರ್, ನುವಾನ್ ತುಷಾರಾ ಕಥೆ ಏನು?
ಆರ್ಸಿಬಿಗೆ ಇರೋ ಟೆನ್ಷನ್ ಇವ್ರೇ. ಜೇಕಬ್ ಬೆಥೆಲ್ ಯಂಗ್ ಡೈನಮಿಕ್. ಟಿ-20 ಫಾರ್ಮೆಟ್ನಲ್ಲಿ ಬೆಸ್ಟ್ ಬ್ಯಾಟರ್. ಇತ್ತೀಚೆಗೆ ಟಿ-20 ವಿಶ್ವಕಪ್ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಇಂಡಿಯನ್ ಸಾಯಿಲ್ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ಇದೆ. ಸೋ ಬೆಥೆಲ್ನ ಕೂರಿಸೋಕೂ ಆಗಲ್ಲ. ಒಂದ್ವೇಳೆ ಪ್ಲೇಯಿಂಗ್ 11ನಲ್ಲಿ ಆಡಿಸ್ಬೇಕು ಅಂದ್ರೆ ಫಿಲ್ ಸಾಲ್ಟ್ನ ಹೊರಗಿಡಬೇಕಾಗುತ್ತೆ. ಹೀಗಾಗಿ ಆರಂಭದ ಪಂದ್ಯಗಳಲ್ಲಿ ಸಾಲ್ಟ್ರನ್ನ ಆಡಿಸಿ ಕ್ಲಿಕ್ ಆಗಿಲ್ಲ ಅಂದ್ರೆ ನಂತರದಲ್ಲಿ ಅವಕಾಶ ಕೊಡ್ಬೋದು. ಇನ್ನು ವೆಂಕಟೇಶ್ ಅಯ್ಯರ್. ಸ್ಟಾರ್ ಆಲ್ರೌಂಡರ್. ಕಳೆದ ಸೀಸನ್ ಡಲ್ ಆದ್ರೂ ಈ ಆವೃತ್ತಿಯಲ್ಲಿ ನಂಬಿಕೆ ಇಡ್ಬೋದು. ಆರ್ಸಿಬಿ ಕ್ಯಾಂಪ್ನಲ್ಲಿ ಪ್ರಾಕ್ಟೀಸ್ ವೇಳೆ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಸದ್ದು ಮಾಡಿದ್ದಾರೆ. ಸೋ ವೆಂಕಿ ಬರಬೇಕು ಅಂದ್ರೆ ಪಡಿಕ್ಕಲ್ನ ಆಚೆ ಇಡ್ಬೇಕಾಗುತ್ತೆ. ಸೋ ಇದೂ ಕೂಡ ಕಷ್ಟ ಇದೆ. ಇನ್ನು 31 ವರ್ಷದ ಶ್ರೀಲಂಕಾದ ಫಾಸ್ಟ್ ಬೌಲರ್ ನುವಾನ್ ತುಷಾರಾ ಕೂಡ ಪ್ಲೇಯಿಂಗ್ 11 ನಿರೀಕ್ಷೆಯಲ್ಲಿದ್ದಾರೆ. ಸಾಕಷ್ಟು ಎಕ್ಸ್ಪೀರಿಯನ್ಸ್ ಇರೋ ತುಷಾರರನ್ನ ಎಲ್ಲಿ ಆಡಿಸೋದು ಅನ್ನೋ ಗೊಂದಲವೂ ಇದೆ. ಒಟ್ನಲ್ಲಿ 2026ರ ಐಪಿಎಲ್ಗೆ ಸಿದ್ಧವಾಗ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೆಚ್ಚಿನ ಆಪ್ಶನ್ಸ್ ಇರೋದ್ರಿಂದ ಯಾರ್ಯಾರನ್ನ ಫೈನಲ್ ಮಾಡ್ತಾರೆ ಅನ್ನೋ ಕುತೂಹಲವೂ ಇದೆ.
ಆರ್ ಸಿಬಿ ಸಂಭಾವ್ಯ ಪ್ಲೇಯಿಂಗ್ 11
ಫಿಲ್ ಸಾಲ್ಟ್
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ಕೃನಾಲ್ ಪಾಂಡ್ಯ
ರೊಮ್ಯಾರಿಯೋ ಶೆಫರ್ಡ್
ಜೇಕಬ್ ಡಫಿ
ಭುವನೇಶ್ವರ್ ಕುಮಾರ್
ಮಂಗೇಶ್ ಯಾದವ್
ಸುಯಾಶ್ ಶರ್ಮಾ ( IP)

ನೋಡಿರಿ

