ಕುರ್ಚಿ ತರಲು ಲೇಟ್ ಆಗಿದ್ದಕ್ಕೆ ರೊಚ್ಚಿಗೆದ್ದ ಸಚಿವ – ಕಾರ್ಯಕರ್ತರ ಮೇಲೆ ಕಲ್ಲೆಸೆದು ದರ್ಪ!
ರಾಜಕೀಯ ನಾಯಕರು ಅಂದ್ರೆ ಕಾರ್ಯಕರ್ತರಿಗೆ ಮಾದರಿಯಾಗಿರಬೇಕು. ಅದನ್ನ ಬಿಟ್ಟು ಕೋಪದ ಕೈಗೆ ಬುದ್ಧಿ ಕೊಟ್ರೆ ಎಡವಟ್ಟೇ ಆಗೋದು. ಆದ್ರಿಲ್ಲಿ ಸಚಿವರು ಮಾಡಿರೋ ಕೆಲಸ ನೋಡಿದ್ರೆ ನೀವೇ ಶಾಕ್ ಆಗ್ತೀರಾ.
ಕುಳಿತುಕೊಳ್ಳೋಕೆ ಕುರ್ಚಿ ತರಲು ತಡವಾಯ್ತು ಅನ್ನೋ ಒಂದೇ ಕಾರಣಕ್ಕೆ ಇಲ್ಲೊಬ್ಬ ಸಚಿವ ದರ್ಪ ತೋರಿದ್ದಾರೆ. ಕಾರ್ಯಕರ್ತರ ಮೇಲೆಯೇ ಕಲ್ಲು ಎಸೆದು ದೌಲತ್ತಿನಿಂದ ವರ್ತಿಸಿದ್ದಾರೆ. ತಮಿಳುನಾಡಿನ ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಎಸ್.ಎಂ.ನಾಸರ್ ಇಂಥಾ ವರ್ತನೆ ತೋರಿದ್ದಾರೆ. ತಿರುವಳ್ಳೂರಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಕಾರ್ಯಕರ್ತರ ಮೇಲೆ ಕಲ್ಲು ಎಸೆದಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ವಿವಿಗಳಲ್ಲಿ ಮೋದಿ ಕುರಿತ ನಿಷೇಧಿತ ಸಾಕ್ಷ್ಯಚಿತ್ರ ಪ್ರದರ್ಶನ – ಎಲ್ಲೆಲ್ಲಿ ವಿವಾದ..!?
ತಮಿಳುನಾಡಿನ ತಿರುವಳ್ಳೂರಿನಲ್ಲಿ ಭಾಷಾ ಹೋರಾಟದ ಹೋರಾಟಗಾರರ ಕಾರ್ಯಕ್ರಮ ನಾಳೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕೂಡ ಭಾಗಿಯಾಗಲಿದ್ದಾರೆ. ಇದಕ್ಕಾಗಿ ತಿರುವಳ್ಳೂರು ಐಸಿಎಂಆರ್ ಬಳಿ 15 ಎಕರೆ ಭೂಮಿಯಲ್ಲಿ ವೇದಿಕೆ ನಿರ್ಮಿಸಲಾಗುತ್ತಿದೆ. ವೇದಿಕೆ ನಿರ್ಮಾಣದ ಪರಿಶೀಲನೆಗಾಗಿ ಸಚಿವ ಎಸ್.ಎಂ ನಾಸರ್ ತೆರಳಿದ್ದ ವೇಳೆ ಕುರ್ಚಿ ಪ್ರಸಂಗ ನಡೆಸಿದೆ. ಸಚಿವರು ಕಲ್ಲು ಎಸೆದಿರೋ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
#WATCH | Tamil Nadu Minister SM Nasar throws a stone at party workers in Tiruvallur for delaying in bringing chairs for him to sit pic.twitter.com/Q3f52Zjp7F
— ANI (@ANI) January 24, 2023