ಕದನ ವಿರಾಮದ ಬೆನ್ನಲ್ಲೇ ಗುಡ್‌ನ್ಯೂಸ್‌ ಕೊಟ್ಟ ಇರಾನ್!‌ – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಓಪನ್‌!

ಕದನ ವಿರಾಮದ ಬೆನ್ನಲ್ಲೇ ಗುಡ್‌ನ್ಯೂಸ್‌ ಕೊಟ್ಟ ಇರಾನ್!‌ – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಓಪನ್‌!

ಇರಾನ್‌ ಇಸ್ರೇಲ್‌ ನಡುವಿನ ಯುದ್ದದಿಂದಾಗಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅಡುಗೆ ಅನಿಲದ ಅಭಾವ ಉಂಟಾಗಿದೆ. ಇದೀಗ ಕದನ ವಿರಾಮದ ಬೆನ್ನಲ್ಲೇ ಮಹತ್ವದ ಬೆಳವಣಿಗೆಯಾಗಿದೆ. ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳ ಹಡುಗುಗಳು ಹಾರ್ಮುಜ್‌ ಜಲಸಂಧಿಯ‌ ಮೂಲಕ ಸಾಗಲು ಇರಾನ್‌ ಅನುಮತಿ ನೀಡಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

ಇದನ್ನೂ ಓದಿ: ಟಿಪ್ಪರ್ ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಖಾಸಗಿ ಬಸ್!‌ – 12 ಮಂದಿ ಸಜೀವ ದಹನ!

ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯಗಳು ಕಂಡುಬರುತ್ತಿದ್ದ ಹಿನ್ನೆಲೆ ಹಾರ್ಮುಜ್‌ ಜಲಸಂಧಿಯನ್ನ ತೆರೆಯುವಂತೆ ಇರಾನ್‌ಗೆ ವಿಶ್ವಸಂಸ್ಥೆ ಕರೆ ನೀಡಿತ್ತು. ಇದೀಗ ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ನಾವು ಅನುಮತಿ ನೀಡಿದ್ದೇವೆ ಎಂದು ಅರಘ್ಚಿ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯುದ್ಧ ಕೊನೆಗೊಳಿಸಲು 15 ಅಂಶಗಳನ್ನ ಪ್ರಸ್ತಾಪಿಸಿದ ಮರುದಿನವೇ ಈ ಬೆಳವಣಿಗೆ ಕಂಡುಬಂದಿದೆ.

ಇಸ್ರೇಲ್‌ ಮತ್ತು ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ತೈಲ ಸಾಗಾಟ ಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನ ಇರಾನ್‌ ನಿರ್ಬಂಧಿಸಿತ್ತು. ಆದ್ರೆ ಇತ್ತೀಚೆಗೆ ಅಮೆರಿಕ 1 ತಿಂಗಳ ಕದನ ವಿರಾಮ ಘೋಷಿಸಿದ ಕೆಲ ದಿನಗಳ ಬಳಿಕ ಇರಾನ್‌ ಮಿತ್ರರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿಯನ್ನ ಮುಕ್ತಗೊಳಿಸಿದೆ.

ಮಿತ್ರರಾಷ್ಟ್ರಗಳಿಗೆ ಜಲಮಾರ್ಗವನ್ನ ಮುಕ್ತಗೊಳಿಸಲಾಗಿದ್ದು, ಶತ್ರು ರಾಷ್ಟ್ರಗಳಿಗೆ ಮಾತ್ರ ಮುಚ್ಚಲಾಗಿದೆ. ಶತ್ರು ರಾಷ್ಟ್ರದ ಹಡಗುಗಳು ಹಾದುಹೋಗಲು ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ ಎಂದು ಇರಾನ್‌ನ ಸಚಿವರು ಎಚ್ಚರಿಕೆ ನೀಡಿದ್ದಾರೆ.

Shwetha M