ಭಾಗ್ಯ ಅಲ್ಲ.. ಕುಸುಮಾ ಸೊಸೆ ಶ್ರೇಷ್ಠಾ! – ಮಕ್ಕಳಿಗಾಗಿ ಭಾಗ್ಯ ದೊಡ್ಡ ನಿರ್ಧಾರ!
ತಾಂಡವ್‌ ಕಣ್ಣೆದುರೇ ಭಾಗ್ಯ ಮದುವೆ?

ಭಾಗ್ಯ ಅಲ್ಲ.. ಕುಸುಮಾ ಸೊಸೆ ಶ್ರೇಷ್ಠಾ! – ಮಕ್ಕಳಿಗಾಗಿ ಭಾಗ್ಯ ದೊಡ್ಡ ನಿರ್ಧಾರ!ತಾಂಡವ್‌ ಕಣ್ಣೆದುರೇ ಭಾಗ್ಯ ಮದುವೆ?

ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನೋ ಮಾತಿನಂತೆ.. ತಾಂಡವ್‌ ಯಾವತ್ತೂ ಬದಲಾಗಲ್ಲ.. ಭಾಗ್ಯ ಜೀವನ ಹಾಳು ಮಾಡ್ಬೇಕು ಅಂತ ಮಾಡೋ ಕುತಂತ್ರ ಒಂದೆರಡಲ್ಲ. ಇದೀಗ ತಾಂಡವ್‌ ಒಳ್ಳೆತನದ ಮುಖವಾಡ ಹಾಕಿಕೊಂಡು ಭಾಗ್ಯ ಹಿಂದೆ ಬಂದಿದ್ದಾನೆ. ಭಾಗ್ಯ ಜೊತೆ ಇದ್ದುಕೊಂಡೇ ಆಕೆ ಹಿಂದೆ ಷಡ್ಯಂತರ ಮಾಡ್ತಿದ್ದಾನೆ. ಮತ್ತೊಂದ್ಕಡೆ ಇಷ್ಟು ದಿನ ಭಾಗ್ಯಳೇ ನನ್ನ ಸೊಸೆ ಅಂತಿದ್ದ ಕುಸುಮಾ ಈಗ ಶ್ರೇಷ್ಠಾಳನ್ನ ತನ್ನ ಸೊಸೆ ಅಂತ ಮನೆಗೆ ಕರೆಸಿದ್ದಾಳೆ.

ಇದನ್ನೂ ಓದಿ: 15 ನಿಮಿಷದಲ್ಲೇ ಆರ್‌ಸಿಬಿ ಪಂದ್ಯದ ಟಿಕೆಟ್ ಸೋಲ್ಡ್ ಔಟ್ – ವರ್ಷದಿಂದ ಕಾಯುತ್ತಿದ್ದ ಬೆಂಗಳೂರಿನ ಫ್ಯಾನ್ಸ್ ಆಕ್ರೋಶ

ಭಾಗ್ಯಲಕ್ಷ್ಮೀ ಸೀರಿಯಲ್‌ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಒಂಟಿ ಹೋರಾಟ ನಡೆಸ್ತಿದ್ದ ಭಾಗ್ಯ ಈಗ ಮತ್ತೆ ಜಂಟಿ ಜೀವನ ನಡೆಸಲು ಸಿದ್ದವಾಗಿದ್ದಾಳೆ. ತನ್ನ ಜೀವನದ ಕಹಿ ಘಟನೆಗಳನ್ನ ಮರೆತು ಆದಿಯನ್ನ ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದಾಳೆ. ಈಗಾಗಲೇ ಮದುವೆಗೆ ಸಿದ್ದತೆ ನಡೆಯುತ್ತಿದೆ. ಮತ್ತೊಂಡ್ಕಡೆ ತಾಂಡವ್‌ ನಿಜ ರೂಪ ಬಯಲಾಗಿದೆ. ಆತ ಭಾಗ್ಯ ಜೊತೆ ಇದ್ದುಕೊಂಡೇ ಷಡ್ಯಂತರ ನಡೆಸುತ್ತಿದ್ದಾನೆ..

ಭಾಗ್ಯ ಮುಂದೆ ಸೋತು ಸುಣ್ಣವಾದ್ರೂ ತಾಂಡವ್‌ ಮಾತ್ರ ಬದಲಾಗಲ್ಲ.. ಹಳೇ ದ್ವೇಷವನ್ನ ಈಗಲೂ ಮುಂದುವರಿಸಿದ್ದಾನೆ. ಭಾಗ್ಯ ಜೀವನ ಸರ್ವನಾಶ ಮಾಡಬೇಕು ಎಂದು ಏನಾದ್ರೂ ಮಾಡ್ತಾನೆ ಇರ್ತಾನೆ. ಇಷ್ಟು ದಿನ ಶ್ರೇಷ್ಠಾ ಜೊತೆ ಇದ್ದ ತಾಂಡವ್‌ ಆಕೆಯನ್ನ ಬಿಟ್ಟು ಭಾಗ್ಯ ಮನೆಗೆ ಬಂದಿದ್ದ. ತಾನು ಬದಲಾಗಿದ್ದೇನೆ ಎಂದೆಲ್ಲಾ ಡ್ರಾಮಾ ಮಾಡಿದ್ದ. ಇದೀಗ ಆದಿ, ಭಾಗ್ಯ ಮದುವೆಗೂ ಕೂಡ ಗ್ರೀನ್‌ ಸಿಗ್ನಲ್‌  ಕೊಟ್ಟಿದ್ದಾನೆ.. ಅಷ್ಟೇ ಅಲ್ಲ ತನ್ವಿ, ಸುನಂದಾಳನ್ನು ಕೂಡ ಒಪ್ಪಿಸಿದ್ದಾನೆ. ಇವೆಲ್ಲದ್ರ ಹಿಂದೆ ತಾಂಡವ್‌ ಬೇರೆಯದ್ದೇ ಪ್ಲ್ಯಾನ್‌ ಇದೆ. ಯಾಕಂದ್ರೆ ತಾಂಡವ್‌ ಭಾಗ್ಯ ಜೀವನ ಹಾಳು ಮಾಡ್ಬೇಕು ಅಂತ ಆಕೆ ಹಿಂದೆ ಸುತ್ತುತಾ ಇರೋದು. ಇದೀಗ ಆದಿ – ಭಾಗ್ಯ ಮಧ್ಯೆ ಬಿರುಕು ಮೂಡುವಂತೆ ಮಾಡಿ, ಆ ಮದುವೆ ನಿಲ್ಲಿಸಲು ಈ ಡ್ರಾಮಾ ಮಾಡ್ತಿದ್ದಾನೆ.

ಮತ್ತೊಂದ್ಕಡೆ ಇಷ್ಟು ದಿನ ಭಾಗ್ಯಳೇ ನನ್ನ ಸೊಸೆ ಅಂತ ಹೇಳ್ತಿದ್ದ ಕುಸುಮಾ ಈಗ ಉಲ್ಟಾ ಹೊಡೆದಿದ್ದಾಳೆ. ಕುಸುಮಾ ಏಕಾಏಕಿ ಶ್ರೇಷ್ಠಾಳನ್ನ ಮನೆಗೆ ಕರೆಸಿದ್ದಾಳೆ. ಅಷ್ಟೇ ಅಲ್ಲ ಶ್ರೇಷ್ಠಾ ನನ್ನ ಸೊಸೆ ಅಂದಿದ್ದಲ್ಲದೇ, ಆಕೆಯನ್ನ ಗಟ್ಟಿಯಾಗಿ ಹಗ್‌ ಮಾಡಿದ್ದಾಳೆ. ಇದನ್ನ ನೋಡಿ ಮನೆಯವರೆಲ್ಲಾ ಶಾಕ್‌ ಆಗಿದ್ದಾರೆ. ಆದ್ರೆ ಕುಸುಮಾ ಈ ಪ್ಲ್ಯಾನ್‌ ಮಾಡಿರೋದು ಭಾಗ್ಯಗಾಗಿ. ಭಾಗ್ಯ ತಾಂಡವ್‌ ಜೊತೆಗಿದ್ರೆ ಆತನ ನರಕ ತೋರಿಸುತ್ತಾನೆ ಅನ್ನೋದು ಗೊತ್ತು. ಶ್ರೇಷ್ಠಾಳನ್ನ ತನ್ನ ಬಲೆಗೆ ಬೀಳಿಸಿ, ಮನ ಜೊತೆ ಇರುವಂತೆ ಮಾಡಿ. ಬಳಿಕ ಆದಿ ಭಾಗ್ಯ ಮದುವೆ ಮಾಡಿಸಲು ಕುಸುಮಾ ಈ ಪ್ಲ್ಯಾನ್‌ ಮಾಡಿದ್ದಾಳೆ. ಹೀಗಾಗಿ ಆದಿ, ಭಾಗ್ಯ ಮದುವೆ ತಾಂಡವ್‌ ಮುಂದೆಯೇ ನಡೆಯೋದು ಫಿಕ್ಸ್‌ ಆಗಿದೆ.

ಇನ್ನು ತನ್ಮಯ್‌ಗೆ ಭಾಗ್ಯ ಎರಡನೇ ಮದುವೆ ಒಪ್ಪಿಗೆ ಇದ್ರೆ, ತನ್ವಿಗೆ ಈ ಮದುವೆ ಒಪ್ಪಿಗೆ ಇಲ್ಲ.. ಭಾಗ್ಯ ತಾಂಡವ್‌ ಜೊತೆಗೆ ಇರ್ಬೇಕು ಅಂತ ಬಯಸ್ತಾ ಇದ್ದಾಳೆ. ಯಾಕಂದ್ರೆ ತಾಂಡವ್‌ ಬದಲಾಗಿದ್ದಾನೆ ಅಂತ ಆಕೆ ಅಂದ್ಕೊಂಡಿದ್ದಾಳೆ. ಇದೀಗ ತನ್ಮಯ್‌, ತನ್ವಿಗೆ ಅಮ್ಮ  ನಾವು ಖುಷಿಯಾಗಿ ಇರ್ಬೇಕು ಅಂತ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ. ಅವರಿಗಾಗಿ ನಾವು ಏನಾದ್ರೂ ಮಾಡ್ಲೇಬೇಕು. ಅಮ್ಮ ಖುಷಿಯಾಗಿ ಇರ್ಬೇಕು ಅಂದ್ರೆ ಆದಿ ಅಂಕಲ್‌ನ ಮದುವೆ ಆಗ್ಬೇಕು ಅಂತ ಹೇಳಿದ್ದಾನೆ. ಇದೀಗ ತನ್ಮಯ್‌ ಮಾತು ಕೇಳಿದ ತನ್ವಿ ಮನಸ್ಸು ಬದಲಾಯಿಸಿದ್ದಾಳೆ. ಆದಿ ಭಾಗ್ಯ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾಳೆ. ಇದ್ರಿಂದ ಮನೆಯವರು ಖುಷಿಪಟ್ರೆ, ತಾಂಡವ್‌ಗೆ ಶಾಕ್‌ ಆಗಿದೆ. ತನ್ನ ಪ್ಲ್ಯಾನ್‌ ತನಗೆ ಉಲ್ಟಾ ಹೊಡಿತಲ್ವಾ ಅಂತ ಮನಸಲ್ಲೇ ಅಂದ್ಕೊಂಡಿದ್ದಾನೆ.

ಒಟ್ಟಾರೆ ಭಾಗ್ಯಲಕ್ಷ್ಮೀ ಸೀರಿಯಲ್‌ ಸ್ಟೋರಿಯಲ್ಲಿ ಸಾಕಷ್ಟು ಟ್ವಿಸ್ಟ್‌ ಎದುರಾಗಲಿದೆ. ಇದೀಗ ತಾಂಡವ್‌ ಬದಲಾಗಿಲ್ಲ ಅನ್ನೋದು ಮನೆಯವರ ಮುಂದೆ ಬಯಲಾಗುತ್ತಾ? ಆದಿ ಭಾಗ್ಯ ಮದುವೆ ನಡೆಯುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

Shwetha M