ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿದ ಕಾಲ್ ಸೊಮಾನಿ – 15.28 ಸಾವಿರ ಕೋಟಿ ರೂಪಾಯಿಗೆ ಡೀಲ್ ?

ಆರ್ಸಿಬಿ ಸೇಲ್ ಆಗುವ ಮುನ್ನವೇ ರಾಜಸ್ಥಾನ್ ರಾಯಲ್ಸ್ ಮಾರಾಟವಾಗಿದೆ. ಭಾರತ ಮೂಲದ ಅಮೆರಿಕನ್ ಉದ್ಯಮಿ ಕಾಲ್ ಸೊಮಾನಿ ಅವರು ರಾಯಲ್ಸ್ ತಂಡವನ್ನುತಮ್ಮ ಸ್ವಾಧೀನ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:RCB Vs SRH ಪಂದ್ಯಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಪೂಜೆ!
ಐಪಿಎಲ್ನ ಮೂಲ ಫ್ರಾಂಚೈಸಿಗಳಲ್ಲಿ ಒಂದಾದ ರಾಜಸ್ಥಾನ್ ರಾಯಲ್ಸ್ ಅನ್ನು ಕಾಲ್ ಸೊಮಾನಿ ಅವರ ನೇತೃತ್ವದ ಕನ್ಸಾರ್ಟಿಯಂ 1.63 ಬಿಲಿಯನ್ ಡಾಲರ್ಗೆ ಖರೀದಿ ಮಾಡಿದೆ. 1.63 ಬಿಲಿಯನ್ ಡಾಲರ್ ಎಂದರೆ ಸುಮಾರು 152820324000 ರೂ (15.28 ಸಾವಿರ ಕೋಟಿ ರೂ) ಆಗುತ್ತದೆ. ಅಮೆರಿಕದ ರೀಟೇಲ್ ಕಿಂಗ್ ಎನಿಸಿದ ವಾಲ್ಮಾರ್ಟ್ ಮೊದಲಾದ ಹಲವು ಸಂಸ್ಥೆಗಳು ಸೇರಿ ಮಾಡಿಕೊಳ್ಳಲಾದ ಕನ್ಸಾರ್ಟಿಯಂ, ಈಗ ರಾಯಲ್ಸ್ ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಕನ್ಸಾರ್ಟಿಯಂ ನೇತೃತ್ವ ವಹಿಸಿರುವ ಕಾಲ್ ಸೋಮಾನಿ ಅವರು ಭಾರತ ಮೂಲದ ಅಮೆರಿಕನ್ ಉದ್ಯಮಿ.
ರಾಜಸ್ಥಾನ್ ರಾಯಲ್ಸ್ ತಂಡದ ಮುಂಚಿನ ಮಾಲೀಕರು ಮನೋಜ್ ಬಡಲೆ. ಬ್ರಿಟನ್ ಮೂಲದ ಮನೋಜ್ ಬಡಲೆ ಅವರು ಎಮರ್ಜಿಂಗ್ ಮೀಡಿಯಾದ ಮುಖ್ಯಸ್ಥರು. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲಿ ಇವರು ಶೇ. 65ರಷ್ಟು ಪಾಲು ಹೊಂದಿದ್ದರು. ರಾಯಲ್ಸ್ನ ಮೊದಲ ಮಾಲೀಕರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ. ಬೆಟ್ಟಿಂಗ್ ಹಗರಣಕ್ಕೆ ಸಿಲುಕಿ ಅವರು ಫ್ರಾಂಚೈಸಿ ಕಳೆದುಕೊಳ್ಳಬೇಕಾಯಿತು. ಆ ಬಳಿಕ ಮನೋಜ್ ಬಡಲೆ ಅವರು ಮಾಲಕತ್ವ ಪಡೆದರು. ಕಾಲ್ ಸೊಮಾನಿ ಅವರು ಈ ಮುಂಚೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಪ್ರಮುಖ ಷೇರುದಾರರಲ್ಲಿ ಒಬ್ಬರಾಗಿದ್ದರು. ಇದೀಗ ಅವರ ಸಂಸ್ಥೆಯು ರಾಯಲ್ಸ್ ತಂಡದ ಪೂರ್ಣ ಷೇರುಗಳನ್ನು ಖರೀದಿ ಮಾಡಿದೆ. ಈ ಮಾರಾಟ ಅಥವಾ ಖರೀದಿಯು ಅಧಿಕೃತವಾಗಿ ಘೋಷಣೆ ಆಗಬೇಕು. ಹಾಗೆಯೇ, ಬಿಸಿಸಿಐನಿಂದ ಅನುಮೋದನೆ ಕೂಡ ಆಗಬೇಕು. ರಾಜಸ್ಥಾನ್ ರಾಯಲ್ಸ್ ತಂಡದ ಖರೀದಿಗೆ ಕಾಲ್ ಸೊಮಾನಿ ಮಾತ್ರವಲ್ಲ, ಇನ್ನೂ ಕೆಲ ದಿಗ್ಗಜರು ಪೈಪೋಟಿ ನಡೆಸಿದದ್ದರು.

ನೋಡಿರಿ

