ಇರಾನ್ ನಮಗೆ ದೊಡ್ಡ ಗಿಫ್ಟ್ ಕೊಟ್ಟಿದೆ.. ಕದನ ವಿರಾಮದ ಬೆನ್ನಲ್ಲೇ ಹಾರ್ಮುಜ್ ಓಪನ್ ಬಗ್ಗೆ ಟ್ರಂಪ್ ಮಹತ್ವದ ಹೇಳಿಕೆ!

ಮಧ್ಯಪ್ರಾಚ್ಯ ಯುದ್ಧದ 5 ದಿನಗಳ ಕಾಲ ಮುಂದೂಡಿಕೆಯಾಗಿದೆ. ಈ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇರಾನ್ ನಮಗೆ ದೊಡ್ಡ ಗಿಫ್ಟ್ ಕೊಟ್ಟಿದೆ ಎಂದು ಹಾರ್ಮುಜ್ ಓಪನ್ ಆಗೋ ಬಗ್ಗೆ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: 16,600 ಕೋಟಿ ರೂಗೆ RCB ಸೇಲ್! – ಹೊಸ ಮಾಲೀಕರು ಯಾರು ಗೊತ್ತಾ?
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಹಲವು ರಾಷ್ಟ್ರಗಳು ತೊಂದರೆಗೆ ಸಿಲುಕಿವೆ. ಭಾರತಕ್ಕೂ ಯುದ್ದದ ಎಫೆಕ್ಟ್ ತಟ್ಟಿದೆ. ಮೊನ್ನೆಯಷ್ಟೇ ಟ್ರಂಪ್ 5 ದಿನಗಳ ಕಾಲ ಯುದ್ದ ಮುಂಡೂಡಿಕೆ ಮಾಡಿದ್ರು. ಇದೀಗ ಯುದ್ಧದ ಬಗ್ಗೆ ಟ್ರಂಪ್ ಹೊಸ ಹೇಳಿಕೆ ನೀಡಿದ್ದಾರೆ. ಇರಾನ್ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದಂತಾಗಿದೆ. ಇರಾನ್ ನಿನ್ನೆ ಅದ್ಭುತವಾದ ಕೆಲಸ ಮಾಡಿದೆ. ನಮಗೆ ಇರಾನ್ ದೊಡ್ಡ ಉಡುಗೊರೆ ನೀಡಿದೆ. ತೈಲ, ಅನಿಲ ಸಂಬಂಧಿಸಿದ ಗಿಫ್ಟ್ ಕೊಟ್ಟಿದೆ. ಇರಾನ್ ಅಮೆರಿಕಕ್ಕೆ ತೈಲ, ಅನಿಲಕ್ಕೆ ಸಂಬಂಧಿಸಿದ ಹಾರ್ಮುಜ್ ಉಡುಗೊರೆ ನೀಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ನಿನ್ನೆ ಇರಾನ್ ಅದ್ಭುತವಾದ ಕೆಲಸ ಮಾಡಿದೆ. ಅದು ನಿಜಕ್ಕೂ ಅದ್ಭುತ. ಅವರು ನಮಗೆ ಉಡುಗೊರೆಯನ್ನು ನೀಡಿದರು. ಉಡುಗೊರೆ ಇಂದು ಬಂದಿದೆ. ಅದು ಅಪಾರ ಮೊತ್ತದ ಹಣದ ದೊಡ್ಡ ಉಡುಗೊರೆಯಾಗಿತ್ತು. ಆ ಉಡುಗೊರೆ ಏನೆಂದು ನಾನು ನಿಮಗೆ ಹೇಳುವುದಿಲ್ಲ. ಆದರೆ, ಅದು ಬಹಳ ಮಹತ್ವದ ಬಹುಮಾನವಾಗಿತ್ತು ಎಂದು ಟ್ರಂಪ್ ಶ್ವೇತಭವನದಲ್ಲಿ ತಿಳಿಸಿದ್ದಾರೆ.
ಜಾಗತಿಕ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗ ಹಾದುಹೋಗುವ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಗೆ ಇದು ಸಂಬಂಧಿಸಿದೆಯೇ ಎಂದು ಕೇಳಿದಾಗ, ಟ್ರಂಪ್ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಜೊತೆಗೆ, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರುವುದಿಲ್ಲ ಎಂದು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

ನೋಡಿರಿ

