13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಹರೀಶ್ ರಾಣಾ ನಿಧನ – ಸುಪ್ರೀಂ ತೀರ್ಪಿನಂತೆ ನಡೆದ ದಯಾಮರಣ ಪ್ರಕ್ರಿಯೆ

ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಬದುಕುತ್ತಿದ್ದ 32 ವರ್ಷ ವಯಸ್ಸಿನ ಹರೀಶ್ ರಾಣಾ ನಿಧನರಾಗಿದ್ದಾರೆ. ಇವರಿಗೆ ಮಾರ್ಚ್ ಇತ್ತೀಚಿಗೆ ಸುಪ್ರೀಂ ಕೋರ್ಟ್ ಭಾರತದ ಮೊದಲ ಕಾನೂನುಬದ್ಧ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತು. 13 ವರ್ಷಗಳ ಕಾಲ ಕೋಮಾದಲ್ಲಿದ್ದ ನಂತರ, ಘನತೆಯಿಂದ ಸಾವನ್ನಪ್ಪುವ ಹಕ್ಕಿನಡಿ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆದುಹಾಕಲು ಕೋರ್ಟ್ ಅವಕಾಶ ನೀಡಿತ್ತು.
ಇದನ್ನೂ ಓದಿ: ಭಾರತಕ್ಕೆ ತಲೆ ಬಾಗಿದ ಬಾಂಗ್ಲಾ – IPL ಪ್ರಸಾರ ಬ್ಯಾನ್ ಯು ಟರ್ನ್
2013 ರಲ್ಲಿ ಸಂಭವಿಸಿದ ಅಪಘಾತದ ನಂತರ ಹರೀಶ್ ರಾಣಾ ಅವರು ಮೆದುಳಿನ ಗಾಯದಿಂದಾಗಿ ಕೋಮಾದಲ್ಲಿದ್ದರು. ಭಾರತದ ಸರ್ವೋಚ್ಚ ನ್ಯಾಯಾಲಯವು ಮಾರ್ಚ್ 11, 2026 ರಂದು ಅವರ ಕುಟುಂಬದ ಮನವಿಯ ಮೇರೆಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮೋದನೆ ನೀಡಿತು. ಇದು ಭಾರತದ ಇತಿಹಾಸದಲ್ಲಿ ಇಂತಹ ಮೊದಲ ಪ್ರಕರಣವಾಗಿದೆ. ವೈದ್ಯಕೀಯ ಮಂಡಳಿಯು ಹರೀಶ್ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ವರದಿ ಮಾಡಿತ್ತು. ಇದರಿಂದಾಗಿ ಕುಟುಂಬವು ಅವರ ಸಂಕಟವನ್ನು ಕೊನೆಗೊಳಿಸಲು ಈ ನಿರ್ಧಾರ ಕೈಗೊಂಡಿತು.
2013 ರಿಂದ ಕೋಮಾದಲ್ಲಿದ್ದ 31 ವರ್ಷದ ಅವರನ್ನು ಗಾಜಿಯಾಬಾದ್‌ನ ಮನೆಯಿಂದ ಏಮ್ಸ್ ನಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆಯ ಉಪಶಾಮಕ ನಿಗಾ ಘಟಕಕ್ಕೆ ಶನಿವಾರ ಸ್ಥಳಾಂತರಿಸಲಾಗಿತ್ತು. ಪ್ರೊಫೆಸರ್ ಮತ್ತು ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಸೀಮಾ ಮಿಶ್ರಾ ನೇತೃತ್ವದ ವಿಶೇಷ ವೈದ್ಯಕೀಯ ತಂಡವನ್ನು ದಯಾಮರಣ ಪ್ರಕ್ರಿಯೆ ಕಾರ್ಯಗತಗೊಳಿಸಲು ರಚಿಸಲಾಗಿತ್ತು.

ನೋಡಿರಿ

