ಆನ್‌ಲೈನ್‌ ಗೇಮ್‌ಗೆ ಮತ್ತೊಬ್ಬ ಬಾಲಕಿ ಬಲಿ! – ಪೋಷಕರೇ ಎಚ್ಚರ.. ಬ್ಲಾಕ್ಔಟ್ ಚಾಲೆಂಜ್ ಎಷ್ಟು ಡೇಂಜರ್‌ ಗೊತ್ತಾ?

ಆನ್‌ಲೈನ್‌ ಗೇಮ್‌ಗೆ ಮತ್ತೊಬ್ಬ ಬಾಲಕಿ ಬಲಿ! – ಪೋಷಕರೇ ಎಚ್ಚರ.. ಬ್ಲಾಕ್ಔಟ್ ಚಾಲೆಂಜ್ ಎಷ್ಟು ಡೇಂಜರ್‌ ಗೊತ್ತಾ?

ಇದು ಡಿಜಿಟಲ್‌ ಯುಗ.. ಈಗನ ಮಕ್ಕಳು ಹೊರಗೆ ಹೋಗಿ ಆಟ ಆಡೋದಿಕ್ಕಿಂತ ಮನೆಯಲ್ಲಿ ಕೂತು ಮೊಬೈಲ್‌ನಲ್ಲಿ ಕಾಲ ಕಳಿತಾರೆ. ಆನ್‌ಲೈನ್‌ ಗೇಮ್‌ ಆಡಲು ಶುರು ಮಾಡಿದ್ರೆ ಪ್ರಪಂಚದಲ್ಲಿ ಏನು ನಡೆಯುತ್ತೆ ಅನ್ನೋದೇ ಗೊತ್ತಾಗಲ್ಲ. ಇದೀಗ ಇಲ್ಲೊಂದು ಕಡೆ ಬಾಲಕಿಯೊಬ್ಬಳು ಆನ್‌ಲೈನ್‌ ಗೇಮ್‌ನ ಚಾಲೆಂಜ್‌ವೊಂದನ್ನ ಸ್ವೀಕರಿಸಿ, ಪ್ರಾಣ ಕಳೆದುಕೊಂಡಿದ್ದಾಳೆ.

ಇದನ್ನೂ ಓದಿ: ವಾಹನ ಸವಾರರಿಗೆ ಬಿಗ್‌ ಶಾಕ್!‌ –  ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ!

ಈ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಬ್ಲಾಕ್ಔಟ್ ಚಾಲೆಂಜ್ ಆಡುತ್ತಿದ್ದ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಇದರ ಬೆನ್ನಲ್ಲೇ ಬಾಲಕಿ ಪೋಷಕರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

ಏನಿದು ಘಟನೆ?

ಟೆಕ್ಸಾಸ್ ನಿವಾಸಿಗಳಾದ ಕರ್ಟಿಸ್ ಹಾಗೂ ವೆಂಡಿ ಬ್ಲಾಕ್‌ವೆಲ್ ದಂಪತಿಯ ಪುತ್ರಿ 9 ವರ್ಷದ ಜಾಕ್ಲಿನ್ ಕಯೆ ಬ್ಲಾಕ್‌ವೆಲ್ ದುರಂತ ಅಂತ್ಯಕಂಡಿದ್ದಾಳೆ. ಹಾಡಿನಲ್ಲಿ ಅತೀವ ಆಸಕ್ತಿ ಹೊಂದಿದ್ದ ಜಾಕ್ಲಿನ್ ಯೂಟ್ಯೂಬ್ ಸೇರಿದಂತೆ ಇತರ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಿದ್ದ ಹಾಡುಗಾರರ ವಿಡಿಯೋಗಳನ್ನು ನೋಡಿ ಕಲಿಯುತ್ತಿದ್ದರು. ಇದರ ನಡುವೆ ಸೋಶಿಯಲ್ ಮೀಡಿಯಾ, ರೀಲ್ಸ್ ಸೇರಿದಂತೆ ಇತರ ವಿಡಿಯೋಗಳು, ಗೇಮ್‌ಗಳ ಕುರಿತು ಆಸಕ್ತಿ ಬೆಳೆಯುತ್ತಾ ಹೋಗಿ ಕೊನೆಗೆ ಇದೇ ಅಪಾಯಕಾರಿ ಗೇಮ್‌ಗೆ ಅಡಿಕ್ಟ್‌ ಆಗಿದ್ದಾಳೆ. ಬಳಿಕ ಅಪಾಯಕಾರಿ ಬ್ಲಾಕ್ಔಟ್ ಚಾಲೆಂಜ್ ಗೇಮ್ ಸ್ವೀಕರಿಸಿ ಆಡಿದ ಈ ಬಾಲಕಿ ತಂತಿಯ ಸಹಾಯದಿಂದ ತಾನೇ ಉಸಿರುಗಟ್ಟಿಸಿ ಬದುಕು ಅಂತ್ಯಗೊಳಿಸಿದ್ದಾಳೆ.

ಶಾಲೆಗೆ ಲೇಟ್ ಆಗುತ್ತಿದ್ದರೂ ಮಗಳು ಎದ್ದಬರಲಿಲ್ಲ ಎಂದು ನೋಡಲು ಹೋದರೆ ಬೆಡ್‌ರೂಂನಲ್ಲಿ ಮಗಳು ಇರಲಿಲ್ಲ. ಈ ವೇಳೆ ಜಾಕ್ಲಿನ್ ಮನೆಯ ಹಿತ್ತಲಿನ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಕಿರುಚಾಟ ಕೇಳಿ ಓಡೋಡಿ ಬಂದ ತಂದೆ ಆಕೆಗೆ ಸಿಪಿಆರ್ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಗಳು ಬದುಕುಳಿಯಲಿಲ್ಲ. ಮಗಳು ತಂತಿಯ ಸಹಾಯದಿಂದ ಉಸಿರುಗಟ್ಟಿಸಿ ಪ್ರಾಣ ಕಳೆದುಕೊಂಡಿದ್ದಳು. ಇದೀಗ ಜಾಕ್ಲಿನ್ ಪೋಷರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಮಕ್ಕಳು ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರೆ ಗಮನಹರಿಸಬೇಕು. ಮಕ್ಕಳು ಯಾವ ವಿಡಿಯೋ ನೋಡುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋ ಕುರಿತು ತೀವ್ರ ನಿಗಾವಹಿಸಲು ಸೂಚಿಸಿದ್ದಾರೆ.

ಏನಿದು ಬ್ಲಾಕ್ಔಟ್ ಚಾಲೆಂಜ್?

ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳಿಗಾಗಿ ನೀಡುವ ಚಾಲೆಂಜ್ ಗೇಮ್ ಇದು. ಈ ಚಾಲೆಂಜ್ ಸ್ವೀಕರಿಸುವ ಮಕ್ಕಳು ಪ್ರಜ್ಞೆ ತಪ್ಪುವವರೆಗೆ ಉಸಿರು ಬಿಗಿಹಿಡಿಯುವ ಆಟ. ಒಂದು ಕ್ಷಣದ ಕಿಕ್, ಅತೀವ ಸಂತೋಷ ಇದರಿಂದ ಸಿಗುತ್ತೆ ಎಂದು ಬ್ಲಾಕ್ಔಟ್ ಚಾಲೆಂಜ್ ಹೇಳುತ್ತೆ. ಈ ತಪ್ಪು ಕಲ್ಪನೆ ಹಾಗೂ ಕುತೂಹಲ ಮಕ್ಕಳಲ್ಲಿ ಮೂಡಿಸಲಾಗುತ್ತದೆ. ಸ್ವಯಂ ಉಸಿರು ಬಿಗಿ ಹಿಡಿಯುವುದು ಅಥವಾ ಇತರ ವಸ್ತುಗಳ ಮೂಲಕ ಉಸಿರು ಬಿಗಿಹಿಡಿಯುವಂತೆ ಮಾಡಲು ಕೆಲ ಸಲಕರಣೆಗಳ ಆಯ್ಕೆಯನ್ನು ಗೇಮ್ ನೀಡುತ್ತದೆ. ಸಿಡಿಸಿ ವರದಿ ಪ್ರಕಾರ ಈ ಬ್ಲಾಕ್‌ಔಟ್ ಗೇಮ್ ಚಾಲೆಂಜ್ ಸ್ವೀಕರಿಸಿ ಆಡಿದ ಮಕ್ಕಳ ಪೈಕಿ 80 ಮಕ್ಕಳು ಬಲಿಯಾಗಿದ್ದಾರೆ. ಬಲಿಯಾದ ಎಲ್ಲರೂ 9 ರಿಂದ 14 ವರ್ಷ ಮಕ್ಕಳು.

Shwetha M