ಬೇಸಿಗೆಗಾಲ ಎಂದು ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಕುಡಿಯುತ್ತೀರಾ? – ಎಚ್ಚರ.. ಒಂದು ತಪ್ಪು.. ಆರೋಗ್ಯಕ್ಕೆ ಕುತ್ತು!

ಬೇಸಿಗೆಗಾಲ ಎಂದು ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಕುಡಿಯುತ್ತೀರಾ? – ಎಚ್ಚರ.. ಒಂದು ತಪ್ಪು.. ಆರೋಗ್ಯಕ್ಕೆ ಕುತ್ತು!

ಬೇಸಿಗೆಗಾಲ ಶುರುವಾಗಿದೆ. ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆ ನಿರ್ಜಲೀಕರಣ ಸಮಸ್ಯೆ ಕೂಡ ಅನೇಕರನ್ನು ಕಾಡುತ್ತಿದೆ. ಹೀಗಾಗಿ ಅನೇಕರು ಎಳನೀರನ್ನ ಪ್ರತಿದಿನ ಕುಡಿಯುತ್ತಾರೆ. ಆದ್ರೆ ಎಳನೀರು ಸೇವನೆ ಎಲ್ಲರಿಗೂ ಒಳ್ಳೆಯದಲ್ಲ.

ಇದನ್ನೂ ಓದಿ: IPLನಲ್ಲಿ ಕನ್ನಡಿಗರ ದರ್ಬಾರ್! – ರಾಹುಲ್, ಕೃಷ್ಣ, ಕರುಣ್ ಯಾರೆಲ್ಲಾ?

ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ದೇಹವನ್ನು ಹೆಚ್ಚು ಹೈಡ್ರೇಟ್ ಆಗಿರಲು ವಿವಿಧ ರೀತಿಯ ತಂಪು ಪಾನೀಯ ಸೇವೆನೆಗೆ ಒತ್ತು ನೀಡುತ್ತೇವೆ. ಅದರಲ್ಲೂ ಬೇಸಗೆಯ ಬಿಸಿಲಿಗೆ ಎಳನೀರು ದೇಹಕ್ಕೆ ಹಿತವಾಗಿದ್ದು, ಇದು ನೈಸರ್ಗಿಕ ಎಲೆಕ್ಟ್ರೋಲೈಟ್‌ ಒದಗಿಸುತ್ತದೆ. ಜತೆಗೆ ಹಲವು ರೀತಿಯಿಂದಲೂ ಪ್ರಯೋಜನಕಾರಿ. ಆದರೆ ಇದನ್ನು ಮಿತಿಮೀರಿಯಾಗಿ ಸೇವಿಸಿದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ.

ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು

ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ ಎಂದು ವೈಜ್ಞಾನಿಕ ಅಧ್ಯಯನಗಳು ಹೇಳಿವೆ. ಇದು ಅತ್ಯಗತ್ಯ ಖನಿಜ. ಆದರೆ ಅಧಿಕವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಹೈಪರ್‌ಕಲೇಮಿಯಾ ಉಂಟಾಗಲಿದ್ದು ಈ ಸ್ಥಿತಿಯಲ್ಲಿ ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟ ಅಪಾಯಕಾರಿಯಾಗಿ ಹೆಚ್ಚುತ್ತದೆ .ಇದರಿಂದ ಸ್ನಾಯು ದೌರ್ಬಲ್ಯ, ಹೃದಯದ ತೊಂದರೆಗಳು ಉಂಟಾಗಬಹುದು.

ಜೀರ್ಣಕಾರಿ ಸಮಸ್ಯೆಗಳು ಮತ್ತು ಕರುಳಿನ ಅಸ್ವಸ್ಥತೆ

ಹೆಚ್ಚು ಎಳನೀರು ಕುಡಿಯುವುದು ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರಬಹುದು. ಇದು ಹುದುಗುವ ಕಾರ್ಬೋಹೈಡ್ರೇಟ್‌ಗಳನ್ನು‌ ಹೊಂದಿರುವುದರಿಂದ, ಅತಿಯಾದ ಸೇವನೆ ಅತಿಸಾರ, ಹೊಟ್ಟೆ ಉಬ್ಬುವುದು, ಹೊಟ್ಟೆ ಸೆಳೆತಕ್ಕೆ ಕಾರಣವಾಗಬಹುದು.

ಕಡಿಮೆ ರಕ್ತದೊತ್ತಡ ಸಮಸ್ಯೆ

ಎಳನೀರು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿದ್ದರೂ, ಹೆಚ್ಚು ಸೇವಿಸುವುದರಿಂದ ದೇಹದ ನೈಸರ್ಗಿಕ ಸಮತೋಲನಕ್ಕೆ ಅಡ್ಡಿಯಾಗಬಹುದು. ಅದರಲ್ಲೂ ಕಡಿಮೆ ರಕ್ತದೊತ್ತಡ ಇದ್ದವರು ಹೆಚ್ಚು ಸೇವಿಸಿದರೆ ಮತ್ತಷ್ಟು ಸಮಸ್ಯೆಯಾಗಬಹುದು

ಇವರು ಸೇವನೆ ಮಾಡುವುದು ಸೂಕ್ತವಲ್ಲ

ಮೂತ್ರಪಿಂಡದ ರೋಗಿಗಳು

ದುರ್ಬಲ ಮೂತ್ರಪಿಂಡ ಇರುವವರಿಂದ ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಇಂತವರಿಗೆ ಅಪಾಯಕಾರಿ.

ಮಧುಮೇಹ ಇದ್ದವರು

ನೈಸರ್ಗಿಕವಾಗಿ ಎಳನೀರು ಸಕ್ಕರೆಯನ್ನು ಹೊಂದಿರುತ್ತದೆ. ಆದರೆ ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರಿಕೆಯಾಗಬಹುದು.

Shwetha M