ದೇಹದ ಮೇಲೆ 30 ಸಾವಿರ ಹರಳು – ಗಾಯಕಿ ಡ್ರೆಸ್ ಗೆ ಫ್ಯಾನ್ಸ್ ಮರುಳು!

ದೇಹದ ಮೇಲೆ 30 ಸಾವಿರ ಹರಳು – ಗಾಯಕಿ ಡ್ರೆಸ್ ಗೆ ಫ್ಯಾನ್ಸ್ ಮರುಳು!

ಇತ್ತೀಚಿನ ದಿನಗಳಲ್ಲಿ ಏನು ಮಾಡಿದರೂ ಫ್ಯಾಷನ್ ಆಗುತ್ತೆ. ಯಾರಾದರೂ ಹರಿದ ಬಟ್ಟೆ ಹಾಕಿದರೆ ಸಾಕು. ಮರುದಿನ ಅದೇ ಟ್ರೆಂಡ್ ಆಗಿ ಬದಲಾಗಿರುತ್ತೆ. ಇನ್ನೂ ಫ್ಯಾಷನ್ ಶೋಗಳಲ್ಲಿ ಹಾಕೋ ಉಡುಪುಗಳ ಬಗ್ಗೆ ಕೇಳಬೇಕೆ? ಅವರು ಹಾಕುವ ಬಟ್ಟೆಗಳು ಯಾವಾಗಲು ಡಿಫರೆಂಟ್ ಆಗಿಯೇ ಇರುತ್ತದೆ. ಇಲ್ಲೊಬ್ಬಳು ಗಾಯಕಿ ಫ್ಯಾಷನ್ ಶೋ ದಲ್ಲಿ ಧರಿಸಿರುವ ಉಡುಪು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.

ಇದನ್ನೂ ಓದಿ: 50 ನಿಮಿಷದಲ್ಲಿ 5 ಕಿ.ಮೀ ಓಡಿದ 80ರ ಅಜ್ಜಿ – ಇವರ ಫಿಟ್ನೆಸ್ ರಹಸ್ಯ ಏನು ಗೊತ್ತಾ?

ಅಮೆರಿಕದ ರ‍್ಯಾಪರ್ ಹಾಗೂ ಗಾಯಕಿ ಡೋಜಾ ಕ್ಯಾಟ್ ಪ್ಯಾರಿಸ್​ ಫ್ಯಾಷನ್ ವೀಕ್​ನಲ್ಲಿ ಭಾಗವಹಿಸಿದ್ದಾರೆ. ಅವರ ಧರಿಸಿರುವ ಬಟ್ಟೆ ಎಲ್ಲರನ್ನು  ಬೆರಗುಗೊಳಿಸಿದೆ. ಕೆಂಪು ಬಣ್ಣದ ಬಟ್ಟೆ ಧರಿಸಿದ್ದ ಆಕೆ, ತಲೆ, ಎದೆ ಭಾಗ, ಕತ್ತು ಸೇರಿದಂತೆ ಸಂಪೂರ್ಣ ದೇಹದ ಮೇಲೆ ಹರಳುಗಳನ್ನು ಅಂಟಿಸಿಕೊಂಡಿದ್ದಾಳೆ. ಆಕೆಯ ದೇಹದ ಮೇಲೆ ಬರೋಬ್ಬರಿ 30 ಸಾವಿರ ಹರಳುಗಳು ಇದ್ದವು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಬಟ್ಟೆಯನ್ನು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್​ ಪ್ಯಾಟ್ ಮೆಕ್​ಗ್ರಾಥ್ ಎಂಬವರು ವಿನ್ಯಾಸ ಮಾಡಿದ್ದಾರೆ. ಅಲ್ಲದೇ ಡೋಜಾ ದೇಹದ ಮೇಲೆ ಸುಮಾರು  30 ಸಾವಿರ ಹರಳುಗಳನ್ನು ಅಂಟಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ‘ಡೋಜಾ ಅವರ ಜತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಈ ಲುಕ್​ಗಾಗಿ ಐದು ಗಂಟೆ ಸಮಯ ತೆಗೆದುಕೊಂಡಿದ್ದೇವೆ. ನಾವು ಇದಕ್ಕಾಗಿ 30 ಸಾವಿರ ಹರಳುಗಳನ್ನು ಬಳಸಿದ್ದೇವೆ. ಇದರ ಫಲಿತಾಂಶ ಖುಷಿ ನೀಡಿದೆ’ ಎಂದು ಪ್ಯಾಟ್ ಮೆಕ್​ಗ್ರಾಥ್ ಅವರು ಹೇಳಿದ್ದಾರೆ.

ಈ ಬಟ್ಟೆ ನೋಡಿದ ನೆಟ್ಟಿಗರು ಕೆಲವರು ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಇದು ‘ಡೋಜಾ ಅವರು ಅತೀ ಕೆಟ್ಟದಾಗಿ ಕಾಣುತ್ತಿದ್ದಾರೆ’ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಗಾಯಕಿಯನ್ನು ಹೊಗಳಿದ್ದಾರೆ. ನಟಿಯ ಲುಕ್ ಅದ್ಭುತವಾಗಿ ಎಂದಿದ್ದಾರೆ. ಫ್ಯಾನ್ಸ್ ಅಂತೂ ನೆಚ್ಚಿನ ಗಾಯಕಿಯ ಹರಳಿನ ಡ್ರೆಸ್ ನೋಡಿ ಮರುಳಾಗಿದ್ದಾರೆ.

 

View this post on Instagram

 

A post shared by Schiaparelli (@schiaparelli)

suddiyaana