ಸಿದ್ದೇಗೌಡ್ರಿಗೆ DKD ಫೈನಲ್‌ ಟಿಕೆಟ್.. ಶೋನಲ್ಲಿ ಗುಂಡಮ್ಮಗೆ ಮೋಸ ಆಯ್ತಾ? – ಡ್ಯಾನ್ಸ್‌ ಶೋ ಗೆಲ್ಲೋದು ಇದೇ ಜೋಡಿ?

ಸಿದ್ದೇಗೌಡ್ರಿಗೆ DKD ಫೈನಲ್‌ ಟಿಕೆಟ್.. ಶೋನಲ್ಲಿ ಗುಂಡಮ್ಮಗೆ ಮೋಸ ಆಯ್ತಾ? – ಡ್ಯಾನ್ಸ್‌ ಶೋ ಗೆಲ್ಲೋದು ಇದೇ ಜೋಡಿ?

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ಏರ್ಪಟ್ಟಿದೆ. ಎಲ್ಲರ ಕಣ್ಣು ಟ್ರೋಫಿ ಮೇಲಿದೆ. . ಸದ್ಯ ಕ್ವಾಟರ್‌ ಫಿನಾಲೆ ಹಂತ ಮುಕ್ತಾಯವಾಗಿದ್ದು, ಒಂದು ಜೋಡಿ ಫಿನಾಲೆಗೆ ಅರ್ಹತೆ ಪಡೆದಿದೆ.

ಇದನ್ನೂ ಓದಿ: ಮದುವೆ ಮಂಟಪದಲ್ಲಿ ಸುನಿ ರಹಸ್ಯ ಬಯಲು – ಕೇಡಿ ಜೈದೇವ್ ಪಾಲಿಕೆ ಬೆಂಕಿಯಾದ ಭೂಮಿಕಾ

ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿದೆ. ಸ್ಪರ್ಧಿಗಳು ತಮ್ಮ ಡ್ಯಾನ್ಸ್‌ ಮೂಲಕವೇ ವೀಕ್ಷಕರಿಗೆ ಮೋಡಿ ಮಾಡಿದ್ರು. 12 ಸೆಲೆಬ್ರಿಟಿಗಳು ಮತ್ತು 14 ಡ್ಯಾನ್ಸ್‌ ಪ್ರತಿಭೆಗಳ ಜೊತೆಗೆ ಶುರುವಾದ ಈ ಶೋ ಈಗ ಫಿನಾಲೆ ಹಂತಕ್ಕೆ ತಲುಪಿದೆ. DKD ಸೀಸನ್ 5ರ ಕ್ವಾಟರ್ ಫಿನಾಲೆ ನಡೆದಿದ್ದು, ಒಂದು ಜೋಡಿ ಫಿನಾಲೆಗೆ ಎಂಟ್ರಿ ಪಡೆದಿದೆ.

ಶನಿವಾರ ಹಾಗೂ ಭಾನುವಾರ ಡಿಕೆಡಿ ಶೋನ ಕ್ವಾಟರ್‌ ಫಿನಾಲೆ ನಡೆದಿದೆ. ಎಲ್ಲಾ ಸ್ಪರ್ಧಿಗಳ ಮಧ್ಯೆ ಟರ್ಫ್‌ ಫೈಟ್‌ ಏರ್ಪಟ್ಟಿತ್ತು. ಅಂತಿಮವಾಗಿ  ಸಿದ್ದೇಗೌಡ್ರು ಮತ್ತು ದೀಶಲ್‌ ಜೋಡಿ ಫಿನಾಲೆ ಟಿಕೆಟ್‌ ಪಡೆದು ಡೈರೆಕ್ಟ್‌ ಫಿನಾಲೆಗೆ ಕಾಲಿಟ್ಟಿದ್ದಾರೆ. ಈ ಮೂಲಕ ಮೊದಲ ಫೈನಲಿಸ್ಟ್‌ ಜೋಡಿ ಆಗಿ ಎಂಟ್ರಿ ಪಡೆದುಕೊಂಡಿದ್ದಾರೆ.

ಅಂದ್ಹಾಗೆ ಸಿದ್ದೇಗೌಡ್ರು ಹಾಗೂ ದಿಶಲ್‌ ಜೋಡಿ ಆರಂಭದಿಂದಲೇ ಬೆಸ್ಟ್‌ ಪರ್ಫಾಮೆನ್ಸ್‌ ನೀಡ್ತಾ ಬಂದಿದ್ರು. ಕ್ವಾಟರ್‌ ಫಿನಾಲೆ ರೌಂಡ್‌ನಲ್ಲೂ ಹಠವಾದಿ ಸಿನಿಮಾದ ಆಟ ಹುಡುಗಾಟವೋ ಹಾಡಿಗೆ ಭರ್ಜರಿ ಪರ್ಫಾಮೆನ್ಸ್‌ ನೀಡಿದ್ರು. ಇವರ ಡ್ಯಾನ್ಸ್ ನೋಡಿ ಎಲ್ಲರೂ ಕಳೆದು ಹೋದ್ರು. ಇವರ ಪಾರ್ಫಾಮೆನ್ಸ್‌ ಮುಗಿಯುತ್ತಿದ್ದಂತೆ ಶಿವಣ್ಣ ಹ್ಯಾಟ್ಸಫ್‌ ಹೇಳಿದ್ರು.  ಬಳಿಕ ಅಮೇಸಿಂಗ್..‌ ಫೈನಲ್‌ಗೆ ಸ್ಯಾಂಪಲ್‌ ಇದ್ದಂತಿತ್ತು ಎಂದಿದ್ದಾರೆ.  ಅನುಶ್ರೀ ಕೂಡ ಬೆಸ್ಟ್‌ ಫೈಟರ್‌ ಅಂತ ಹೇಳಿದ್ರು.  ವಿಜಯ್ ರಾಘವೇಂದ್ರ ಕೂಡ ಇಬ್ಬರನ್ನ ಹಾಡಿಹೊಗಳಿದ್ರು. ಇನ್ನು ಜನ್ಯ ಕೂಡ ಫೈಯರ್‌ ವೇದಿಕೆ ಮೇಲೆ ನಿಂತ್ರೆ ಫಯರ್‌ ಬಂಧೇ ಬರುತ್ತೆ ಅಂತ ಹೇಳಿದ್ರು. ಈ ಮೂಲಕ ಬೆಸ್ಟ್‌ ಪರ್ಫಾಮೆನ್ಸ್‌ ನೀಡೋ ಮೂಲಕ ದೀಶಲ್‌ ಹಾಗೂ ಸಿದ್ದೇಗೌಡ್ರು ಫಿನಾಲೆ ಟಿಕೆಟ್‌ ಪಡೆದಿದ್ದಾರೆ.

ಅಂದ್ಹಾಗೆ ನಟ ಧನಂಜಯ್‌ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಪಾತ್ರ ಮಾಡ್ತಿದ್ದಾರೆ. ಇದೀಗ ನಟನೆ ಮಾತ್ರವಲ್ಲ ಡ್ಯಾನ್ಸ್‌ ಮೂಲಕವೂ ಮೋಡಿ ಮಾಡ್ತಿದ್ದಾರೆ. ಇನ್ನು ಧನಂಜಯ್‌ ಅವರಿಗೆ  ಚಿಕ್ಕ ವಯಸ್ಸಿನಿಂದಲೂ ಡ್ಯಾನ್ಸ್‌ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಈಗ ಡಿಕೆಡಿ ವೇದಿಕೆಯಲ್ಲಿ ಚಾನ್ಸ್‌ ಸಿಕ್ಕಿದ್ದು, ಸಿಕ್ಕ ಅವಕಾಶವನ್ನ ಸರಿಯಾಗೇ ಸದುಪಯೋಗಪಡಿಸಿಕೊಂಡಿದ್ದಾರೆ. ಇನ್ನು ಇವರಿಗೆ ಪಾರ್ಟ್‌ನರ್‌ ಆಗಿ ಸಿಕ್ಕಿದ್ದ ಅದ್ಭುತ ಪ್ರತಿಭೆ ದೀಶಲ್‌. ಚಿಕ್ಕಮಗಳೂರಿನ ಪ್ರತಿಭೆ ಇವರು. ಹಲವು ಸೂಪರ್‌ ಹಿಟ್‌ ಪರ್ಫಾಮೆನ್ಸ್ ಕೊಟ್ಟಿರುವ ಜೋಡಿ ಕ್ವಾಟರ್‌ ಫಿನಾಲೆಯಲ್ಲಿ ಆಟವೋ ಹುಡುಗಾಟವೋ ಸಾಂಗ್‌ಗೆ ಜಬರ್ದಸ್ತ್‌ ಡ್ಯಾನ್ಸ್ ಮಾಡಿ ಫಿನಾಲೆ ಟಿಕೆಟ್‌ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ವಾರ 3 ಜೋಡಿ ಡೆಂಜರ್‌ ಜೋನ್ ತಲುಪಿದ್ದರು. ಗುಂಡಮ್ಮ-ರಾಘು, ಪೂಜಾ -ಯಶವಂತ್ ಹಾಗೂ ಜಗಪ್ಪ-ಸೃಜನ್ಯ ಜೋಡಿ ಮೇಲೆ ಎಲಿಮಿನೇಷನ್‌ ತೂಗುಗತ್ತಿ ಇತ್ತು. ಕೊನೆಗೆ ಅಣ್ಣಯ್ಯ ಧಾರಾವಾಹಿಯಲ್ಲಿ ಗುಂಡಮ್ಮ ಪಾತ್ರ ಮಾಡಿರುವ ನಟಿ ಪ್ರತೀಕ್ಷಾ ಅವರು ಮತ್ತು ರಾಘು ಎಲಿಮಿನೇಟ್‌ ಆದ್ದಾರೆ. ಆದ್ರೆ ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಗುಂಡಮ್ಮಗಿಂತ ಬೇರೆ ಯಾರನ್ನಾದ್ರೂ ಎಲಿಮಿನೇಟ್‌ ಮಾಡ್ಬೋದಿತ್ತು ಅಂತ ಹೇಳಿದ್ದಾರೆ.

Shwetha M