ಗರ್ಭಿಣಿಯನ್ನು ಬಿಡಲಿಲ್ಲ ದೇವಮಾನವ – ಗಾಡ್‌ಮ್ಯಾನ್ ಗುರೂಜಿಯ 100 ರಾಸಲೀಲೆ ವಿಡಿಯೋ ಪತ್ತೆ..!

ಗರ್ಭಿಣಿಯನ್ನು ಬಿಡಲಿಲ್ಲ ದೇವಮಾನವ – ಗಾಡ್‌ಮ್ಯಾನ್ ಗುರೂಜಿಯ 100 ರಾಸಲೀಲೆ ವಿಡಿಯೋ ಪತ್ತೆ..!

ಜ್ಯೋತಿಷಿ ಹಾಗೂ ಸ್ವಯಂಘೋಷಿತ ದೇವಮಾನವನ ರಾಸಲೀಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ನಾಸಿಕ್ ನ ಸ್ವಯಂ ಘೋಷಿತ ದೇವಮಾನವ, ಜ್ಯೋತಿಷಿ ಅಶೋಕ್ ಕುಮಾರ್ ಎಕನಾಥ್ ಖಾರಟ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 100 ವಿಡಿಯೋಗಳು ಪತ್ತೆಯಾಗಿವೆ.

ಇದನ್ನೂ ಓದಿ: ಕೆಂಗೇರಿ ಕಸದ ರಾಶಿಯಲ್ಲಿ ಮಹಿಳೆಯ ಶವ – ಸಾಕ್ಷ್ಯ ನಾಶಕ್ಕೆ ಕೊಲೆಗಾರರು ಮಾಡಿದ ಪ್ಲ್ಯಾನ್ ಏನು ಗೊತ್ತಾ?

ಕಾಮುಕ ದೇವಮಾನವ ಈಗಾಗಲೆ ಅರೆಸ್ಟ್ ಆಗಿದ್ದು ಗೊತ್ತೇ ಇದೆ. ಇದರ ಮಧ್ಯೆ, 100 ವಿಡಿಯೋಗಳು ಪೊಲೀಸರ ಕೈ ಸೇರಿದೆ. ವಿಪರ್ಯಾಸವೆಂದರೆ, ಈ ಕಾಮುಕ ಸ್ಪಯಂಘೋಷಿತ ದೇವಮಾನವ ಗರ್ಭಿಣಿ ಮಹಿಳೆಯನ್ನೂ ಬಿಡದೇ ಕಾಮಕ್ಕೆ ಬಳಸಿಕೊಂಡಿದ್ದಾನೆ.

ಗುರೂಜಿ ಬಳಿ ತಮ್ಮ ಸಮಸ್ಯೆ ಹೇಳಿಕೊಂಡು ದಂಪತಿಗಳು ಬರುತ್ತಿದ್ದರು. ಗಂಡನ ಹೊರಗೆ ಕಳುಹಿಸಿ ಕಳಶ ಹಿಡಿಯಬೇಕು, ದಾರ ಕಟ್ಟಬೇಕು, ಮಹಿಳೆಯ ದೇಹದಲ್ಲಿರುವ ನೆಗಟೀವ್ ಪವರ್ ಹೋಗಬೇಕು. ತಾನು ಮಾಡುವ ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ನೆಗಟೀವ್ ಪವರ್ ಮಹಿಳಯ ದೇಹದಿಂದ ಹೊರಹೋಗುವಾಗ ಗಂಡನ ದೇಹಕ್ಕೆ ಆ ಪವರ್ ಸೇರಿಕೊಳ್ಳಬಹುದು. ಹೀಗಾಗಿ ಗಂಡ ಹೊರಗೆ ಇರಬೇಕು ಎಂದು ಕಳುಹಿಸುತ್ತಿದ್ದ. ಬಳಿಕ ಆಚರಣೆ, ಪದ್ಧತಿ ಹೆಸರಿನಲ್ಲಿ ಮಹಿಳೆಯರನ್ನು ಟಚ್ ಮಾಡುತ್ತಿದ್ದ. ಬಂದವರಿಗೆ ಗೊತ್ತಾಗದಂತೆ ಪ್ರಸಾದ ಹೆಸರಿನಲ್ಲಿ ವಯಾಗ್ರ ನೀಡಿ ಪ್ರಚೋದಿಸುತ್ತಿದ್ದ. ಬಳಿಕ ಚೇಂಬರ್‌ನಲ್ಲೇ ಮಹಿಳೆಯನ್ನು ಬಳಸಿಕೊಳ್ಳುತ್ತಿದ್ದ. ಈ ವಿಡಿಯೋಗಳನ್ನು ಮಾಜಿ ಉದ್ಯೋಗಿ ಸೆರೆ ಹಿಡಿದಿದ್ದಾನೆ. ಗರ್ಭಿಣಿ ಮಹಿಳೆಯನ್ನು ಬಿಡದೆ ತನ್ನ ಪಾಪ ಕೃತ್ಯಕ್ಕೆ ಬಳಕೆ ಮಾಡಿಕೊಂಡಿರುವುದು ಕೂಡಾ ವಿಡಿಯೋದಲ್ಲಿ ಬಯಲಾಗಿದೆ. ಮಗು ಸುರಕ್ಷಿತವಾಗಿ ಡೆಲಿವರಿ ಆಗಲು ಇದು ಅಗತ್ಯ ಎಂದು ಕೃತ್ಯ ಎಸಗಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದರೂ ಬಿಡದೆ ಬಳಸಿಕೊಂಡಿದ್ದಾನೆ ಎಂದು ಮಾಜಿ ಉದ್ಯೋಗಿ ಹಲವು ಘಟನೆಗಳ ವಿಡಿಯೋ ಕುರಿತು ಮಾತನಾಡಿದ್ದಾರೆ.

ಅಶೋಕ್ ಖಾರಟ್ ಕಚೇರಿಯಲ್ಲಿ 2024ರ ವರೆಗೆ ಕೆಲಸ ಮಾಡುತ್ತಿದ್ದ ಉದ್ಯೋಗಿ ಈ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಅಶೋಕ್ ಖಾರಟ್ ಮಹಿಳೆಯನ್ನು ಕಾಮಕ್ಕೆ ಬಳಸುತ್ತಿದ್ದಾನೆ ಅನ್ನೋ ಅನುಮಾನ ಬಲಗೊಳ್ಳುತ್ತಿದ್ದಂತೆ ಹಲವು ಮಹಿಳೆಯರು ಕಣ್ಣೀರಿಟ್ಟುಕೊಂಡು ತೆರಳುತ್ತಿದ್ದ ಘಟನೆಗಳನ್ನು ಈ ಉದ್ಯೋಗಿ ಗಮನಿಸಿದ್ದಾನೆ. ಹೀಗಾಗಿ ಅಶೋಕ್ ಖಾರಟ್ ಛೇಂಬರ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ಸೆರೆ ಹಿಡಿದಿದ್ದಾನೆ.. ಈ ವಿಡಿಯೋಗಳನ್ನು ತನಿಖಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. 2019ರಲ್ಲಿ ಅಶೋಕ್ ಖಾರಟ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಈ ಉದ್ಯೋಗಿಗೆ ಗುರೂಜಿಯ ಕಾಮಕಾಂಡ ಗೊತ್ತಾಗಿತ್ತು. 2022ರ ವೇಳೆಗೆ ಕೆಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದ. 2024ರ ವೇಳೆಗೆ ಗುರೂಜಿ ನಡೆಯನ್ನೇ ಪ್ರಶ್ನಿಸಿದ್ದ. ಹೀಗಾಗಿ ಕೆಲಸದಿಂದ ಕಿತ್ತು ಹಾಕಿದ್ದರು. ಇಷ್ಟೇ ಅಲ್ಲ ಕೊಲೆ ಬೆದರಿಕೆಯನ್ನು ಹಾಕಲಾಗಿತ್ತು. 100 ವಿಡಿಯೋ ದಾಖಲೆ ಪೊಲೀಸರ ಕೈಸೇರಿದ ಬೆನ್ನಲ್ಲೇ ಮಹಿಳೆಯೊಬ್ಬರು ಅಶೋಕ್ ಖಾರಟ್ ವಿರುದ್ಧ ದೂರು ನೀಡಿದ್ದಾರೆ.

 

Sulekha