RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್!‌ – ಟಿಕೆಟ್‌ ಮಾರಾಟಕ್ಕೆ ಡೇಟ್‌ ಅನೌನ್ಸ್!‌

RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್!‌ – ಟಿಕೆಟ್‌ ಮಾರಾಟಕ್ಕೆ ಡೇಟ್‌ ಅನೌನ್ಸ್!‌

IPL ಟೂರ್ನಿ ಆರಂಭಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ಉದ್ಘಾಟನಾ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೀಗ RCB ತಂಡದ ಮೊದಲ ಹಂತದ ಪಂದ್ಯಗಳ ಟಿಕೆಟ್ ಮಾರಾಟದ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ.

ಇದನ್ನೂ ಓದಿ: ಪ್ರೇಯಸಿ ಮಹಿಕಾಗೆ ಫೆರಾರಿ ಕಾರು ಗಿಫ್ಟ್ ಕೊಟ್ಟ ಪಾಂಡ್ಯ – ಹಾರ್ದಿಕ್ ಜೊತೆ ಗೆಳೆತಿಯ ಜಾಲಿ ರೈಡ್

ಈ ಬಾರಿ ಆರ್‌ಸಿಬಿ ತನ್ನ ತವರಿನ ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕರ್ನಾಟಕ ಸರ್ಕಾರದಿಂದ ಅನುಮತಿ ಪಡೆದಿದೆ. ಇದರಿಂದ ಹೋಂ ಗ್ರೌಂಡ್ ಮ್ಯಾಚ್ ವೀಕ್ಷಣೆಗೆ ಟಿಕೆಟ್  ಖರೀದಿಗೆ ಭಾರೀ ಡಿಮ್ಯಾಂಡ್ ಶುರುವಾಗಲಿದೆ. ಇದೀಗ RCB ಮ್ಯಾನೆಜ್‌ಮೆಂಟ್ ಇನ್ನೆರೆಡು ದಿನದಲ್ಲಿ ಅಧಿಕೃತವಾಗಿ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನ ಆರಂಭಿಸಲಿದೆ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಆರ್‌ಸಿಬಿ ಹಂಚಿಕೊಂಡಿದೆ. ಆರ್‌ಸಿಬಿ ವೆಬ್‌ಸೈಟ್ ಹಾಗೂ ಆ್ಯಪ್‌ನಲ್ಲಿ ಮಾತ್ರ ಟಿಕೆಟ್‌ಗಳು ಲಭ್ಯವಿರಲಿವೆ ಎಂದು ತಿಳಿಸಿದೆ.

ಸಾಮಾನ್ಯವಾಗಿ ಮೊದಲು ಆರ್‌ಸಿಬಿ ಆ್ಯಪ್‌ನ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆ. ನಂತರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ. ಟಿಕೆಟ್, ದರ, ಗೇಟ್‌ಗಳ ನಕ್ಷೆ, ಎಂಟ್ರಿ, ಎಕ್ಸಿಟ್ ಬಗ್ಗೆ ಸೋಮವಾರ ಅಧಿಕೃತವಾಗಿ ಮಾಹಿತಿ ನೀಡುವ ಸಾಧ್ಯತೆಯಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28ರಂದು ಈ ಆವೃತ್ತಿಯ ಮೊದಲ ಪಂದ್ಯ ನಡೆಯಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೆಣಸಾಡಲಿದೆ.

ನಂತರ ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯ ನಡೆಯಲಿದೆ. ತವರಿನಲ್ಲಿ ನಡೆಯಲಿರುವ ಈ ಪಂದ್ಯಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕ್ರೀಡಾಂಗಣದ ಬಳಿ ಇತ್ತೀಚೆಗೆ ನಡೆದ ಘಟನೆಗಳ ನಂತರ ಪಂದ್ಯಗಳು ನಡೆಯುವ ಬಗ್ಗೆ ವದಂತಿಗಳಿದ್ದವು. ಈಗ ಪೊಲೀಸ್ ಮತ್ತು ಆಡಳಿತ ಮಂಡಳಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಪಂದ್ಯಗಳು ಅದ್ಧೂರಿಯಾಗಿ ನಡೆಯಲಿವೆ.

Shwetha M