ಗಂಡನ ಜೊತೆ ನಡೆದಿಲ್ಲ ಮೊದಲ ರಾತ್ರಿ – ಫಸ್ಟ್ ನೈಟ್ ಆಗದೇ ಬೇಸತ್ತ ಪತ್ನಿಯಿಂದ ಪೊಲೀಸರಿಗೆ ದೂರು..!

ಮದುವೆ ಹೆಣ್ಣು ಗಂಡಿನ ನಡುವೆ ಅನುಬಂಧ ಬೆಳೆಸುತ್ತದೆ. ಮದುವೆ ಬಗ್ಗೆ ಗಂಡಿನಷ್ಟೇ ಹೆಣ್ಣಿಗೂ ನೂರಾರು ಕನಸುಗಳಿರುತ್ತದೆ. ಆದರೆ, ಇಲ್ಲೊಬ್ಬಳು ನವವಧು ಹೊಸಬದುಕಿನ, ಹೊಸಜೀವನದ ಕನಸು ಕಂಡು ಮದುವೆಯಾಗಿದ್ದಳು. ಆದರೆ, ಗಂಡ ಯಾಕೋ ಹೆಂಡತಿಯ ಹತ್ತಿರ ಕೂಡಾ ಬರುತ್ತಿಲ್ಲ. ಇದರಿಂದ ಬೇಸತ್ತ ಪತ್ನಿ ಪೊಲೀಸರ ಮೊರೆಹೋಗಿದ್ದಾಳೆ. ಗಂಡನ ಜೊತೆ ಮೊದಲ ರಾತ್ರಿ ನಡೆದಿಲ್ಲ ಎಂದು ದೂರಿನಲ್ಲಿ ದಾಖಲಿಸಿದ್ದಾಳೆ.
ಇದನ್ನೂ ಓದಿ:ರಾಜ್ಯದ 17 ಜಿಲ್ಲೆಗಳಲ್ಲಿ ಇಂದು ಗುಡುಗು-ಸಿಡಿಲು ಸಹಿತ ಮಳೆ! – ಎಲ್ಲೆಲ್ಲಿ ಎಲ್ಲೋ ಅಲರ್ಟ್ ಘೋಷಣೆ?
ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಪೊಲೀಸರ ಬಳಿ ವಿಚಿತ್ರ ದೂರು ನೀಡಿದ್ದಾರೆ. ಮದುವೆಯಾದಗಿನಿಂದಲೂ ಫಸ್ಟ್ ನೈಟ್ ನಡೆದಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮದುವೆಯ ಬಳಿಕ ಗಂಡ ಹತ್ತಿರವೂ ಬರಲಿಲ್ಲ. ನನ್ನ ಮತ್ತು ಗಂಡನ ನಡುವೆ ಮೊದಲ ರಾತ್ರಿ ಆಗಲೇ ಇಲ್ಲ ಎಂದು ಪೊಲೀಸರ ಬಳಿ ದೂರು ಕೊಟ್ಟಿದ್ದಾರೆ. ಗಂಡನ ವಿರುದ್ಧ ಕಿರುಕುಳದ ಆರೋಪ ಮಾಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತಿ ರಾಘವೇಂದ್ರ ಸೇರಿದಂತೆ ಕುಟುಂಬದ 6 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಅಂದ್ರೆ ಜನವರಿ ತಿಂಗಳಲ್ಲೇ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಗಂಡನಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಮದುವೆ ವೇಳೆ ಚಿನ್ನದ ಆಭರಣ ನೀಡಿದ್ರೂ ಕಿರುಕುಳ ತಪ್ಪಿಲ್ಲ. ಅಲ್ಲದೇ ಪತ್ನಿಯನ್ನ ಮನೆಯಲ್ಲೇ ಬಿಟ್ಟು ಸಂಪರ್ಕಕ್ಕೂ ಸಿಗದೇ ಗಂಡ ಮನೆ ಬಿಟ್ಟು ಹೋಗಿದ್ದ ಎಂದು ಗಂಡನ ವಿರುದ್ದ ಪತ್ನಿ ನಾನಾ ಆರೋಪ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ದಕ್ಷಿಣ ಮಹಿಳಾ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. 2024 ಜೂನ್ನಿಂದ ಡಿಸೆಂಬರ್ವರೆಗೆ ಮಹಿಳೆಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಗಬ್ಬಲಾಳದಲ್ಲಿ ಈ ಘಟನೆ ನಡೆದಿದೆ. ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಆರೋಪ ಕೇಳಿ ಬಂದಿದೆ. BNS ಸೆಕ್ಷನ್ 85, 115(2) ಅಡಿ ಪ್ರಕರಣ ದಾಖಲಾಗಿದೆ.

ನೋಡಿರಿ

