ಪಾನ್‌ ತಿಂದು ಎಲ್ಲೆಂದರಲ್ಲಿ ಉಗಿಯುತ್ತೀರಾ? – ರಸ್ತೆಯಲ್ಲಿ ಉಗಿದಿದ್ದಕ್ಕೆ ಬಿತ್ತು 3.4 ಲಕ್ಷ ರೂ. ಫೈನ್!‌

ಪಾನ್‌ ತಿಂದು ಎಲ್ಲೆಂದರಲ್ಲಿ ಉಗಿಯುತ್ತೀರಾ? – ರಸ್ತೆಯಲ್ಲಿ ಉಗಿದಿದ್ದಕ್ಕೆ ಬಿತ್ತು 3.4 ಲಕ್ಷ ರೂ. ಫೈನ್!‌

ಪಾನ್‌ ತಿಂದು ಸಿಕ್ಕ ಸಿಕ್ಕಲ್ಲಿ ಉಗುಳುವವರೇ ಹೆಚ್ಚು. ಎಷ್ಟು ನಿಯಮ ತಂದ್ರೂ, ದಂಡ ವಿಧಿಸಿದ್ರೂ ಜನ ಎಚ್ಚೆತ್ತುಕೊಳ್ಳುವುದಿಲ್ಲ. ಇದೀಗ ಭಾರತೀಯರಿಬ್ಬರು ಲಂಡನ್‌ನ ರಸ್ತೆಯಲ್ಲಿ ಪಾನ್‌ ತಿಂದು ಉಗುಳಿ ಸಿಕ್ಕಿ ಬಿದ್ದಿದ್ದಾರೆ. ಈ ವ್ಯಕ್ತಿಗಳಿಗೆ ಅಲ್ಲಿನ ಕೋರ್ಟ್‌ ಸರಿಯಾಗೇ ಪಾಠ ಕಲಿಸಿದೆ. ರಸ್ತೆಯಲ್ಲಿ ಪಾನ್‌ ಉಗುಳಿದ ವ್ಯಕ್ತಿಗಳಿಗೆ ತಲಾ 1.7 ಲಕ್ಷ ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಬುಕಿಂಗ್, ಡೆಲಿವರಿ ಟೆನ್ಷನ್ ಬಿಟ್ಟಾಕಿ.. 2 ನಿಮಿಷದಲ್ಲೇ ಸಿಗುತ್ತೆ ಗ್ಯಾಸ್ – ಇನ್ಮುಂದೆ ATMನಲ್ಲೇ ಲಭ್ಯ ಎಲ್ ಪಿಜಿ ಸಿಲಿಂಡರ್!

ಭಾರತೀಯ ಮೂಲದ ಇಬ್ಬರು ಲಂಡನ್‌ಗೆ ತೆರಳಿದ್ದರು. ಈ ವೇಳೆ ರಸ್ತೆಯಲ್ಲಿ ಪಾನ್‌ ತಿಂದು ಉಗುಳಿದ್ದಾರೆ. ಎಡ್ಗ್‌ವೇರ್ ನಿವಾಸಿ ಅಕ್ಷಿತ್‌ಕುಮಾರ್ ಭದ್ರೆ ಪಟೇಲ್ (31) ಜೂನ್ 11, 2025 ರಂದು ಅವರು ಕಿಂಗ್ಸ್‌ಬರಿಯ ರಸ್ತೆಯಲ್ಲಿ ಪಾನ್  ಉಗುಳಿದ್ದರು. ಈ ಬೆನ್ನಲ್ಲೇ ಅವರಿಗೆ 100 ಯುರೋ ದಂಡ ವಿಧಿಸಲಾಗಿತ್ತು. ಅವರು ದಂಡ ಪಾವತಿಸದೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ನ್ಯಾಯಾಲಯಕ್ಕೂ ಅವರು ಹಾಜರಾಗಿರಲಿಲ್ಲ. ಹೀಗಾಗಿ ವಾಯುವ್ಯ ಲಂಡನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 1,391 ಯೂರೋ ದಂಡ ವಿಧಿಸಿತ್ತು. ಬಳಿಕ ನ್ಯಾಯಾಲಯ ಅವರಿಗೆ 1,391 ಯುರೋ (1.7 ಲಕ್ಷ ರೂ.) ದಂಡ ವಿಧಿಸಲಾಗಿದೆ.

ಇನ್ನು ಇದೇ ರೀತಿಯ ಪ್ರತ್ಯೇಕ ಪ್ರಕರಣದಲ್ಲಿ, ರುಯಿಸ್ಲಿಪ್‌ನಲ್ಲಿ ವಾಸಿ ಹಿತೇಶ್ ಪಟೇಲ್ (32) ಅವರಿಗೂ ನ್ಯಾಯಾಲಯವು 1,391 ಯುರೋ (1.7 ಲಕ್ಷ ರೂ.) ದಂಡ ವಿಧಿಸಿದೆ. ಜೂನ್ 12, 2025 ರಂದು ವೆಂಬ್ಲಿ ಹಿಲ್‌ನ ರಸ್ತೆಯೊಂದರಲ್ಲಿ ಪಾನ್ ಉಗುಳಿದ್ದರು. ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ವಿಧಿಸಿದೆ.

ಪಾನ್ ಉಗುಳುವುದರಿಂದ ಉಂಟಾಗುವ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರತಿ ವರ್ಷ 30,000 ಯೂರೋಗಳಿಗಿಂತ (32,08,920 ರೂ.) ಹೆಚ್ಚು ಖರ್ಚು ಮಾಡಲಾಗುತ್ತದೆ. ಯಂತ್ರಗಳು ಸಹ ಆ ಕಲೆಯನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ರಸ್ತೆಯಲ್ಲಿ ಪಾನ್‌ ಉಗುಳುವುದನ್ನು ತಡೆಗಟ್ಟಲು ಕೌನ್ಸಿಲ್ ನಿಯಮಿತ ಮೇಲ್ವಿಚಾರಣೆ ಸಹ ಜಾರಿಗೆ ತರಲಾಗಿದೆ. ಮೇಲ್ವಿಚಾರಣೆಗಾಗಿ ಅಧಿಕಾರಿಗಳು ಪ್ರತಿದಿನ ಗಸ್ತು ತಿರುಗುತ್ತಾರೆ ಮತ್ತು ಪಾನ್ ಉಗುಳುವುದು ಕಂಡುಬಂದರೆ 100 ಯುರೋ ದಂಡ ವಿಧಿಸುತ್ತಾರೆ.

Shwetha M