ಆಹಾ.. ಐಸ್‌ಕ್ರೀಂ ಎಷ್ಟು ಟೇಸ್ಟಿಯಾಗಿದೆ.. – ಪುಟ್ಟ ಹುಡುಗಿ ಐಸ್ ಕ್ರೀಂ ಕೊಟ್ಟಿದ್ದಕ್ಕೆ ಕಿಸ್ ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ!

ಆಹಾ.. ಐಸ್‌ಕ್ರೀಂ ಎಷ್ಟು ಟೇಸ್ಟಿಯಾಗಿದೆ.. – ಪುಟ್ಟ ಹುಡುಗಿ ಐಸ್ ಕ್ರೀಂ ಕೊಟ್ಟಿದ್ದಕ್ಕೆ ಕಿಸ್ ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ!

ಮುದ್ದು ಮುದ್ದಾಗಿರುವ ಆನೆಮರಿಗಳನ್ನ ಕಂಡರೆ ಎಲ್ಲರಿಗೂ ಇಷ್ಟ. ಆನೆಗಳು ಕೂಡ ಮನುಷ್ಯರ ಜೊತೆ ಬೇಗ ಸ್ನೇಹ ಬೆಳೆಸಿಕೊಳ್ಳುತ್ತವೆ. ಅವುಗಳು ಕೂಡ ಮನುಷ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತವೆ. ಇದೀಗ ಇಲ್ಲೊಂದು ಆನೆಮರಿಗೆ ಬಾಲಕಿ ಐಸ್‌ಕ್ರೀಂ ನೀಡಿದ್ದಾಳೆ. ಆನೆಮರಿಗೆ ಐಸ್‌ಕ್ರೀಂ ಸಿಗುತ್ತಿದ್ದಂತೆ ಆಕೆಗೆ ಕ್ಯೂಟ್‌ ಆಗಿ ಥ್ಯಾಂಕ್ಯೂ ಹೇಳಿದೆ. ಇದ್ರ ವಿಡಿಯೋ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಕೋತಿ ಕಿತಾಪತಿಗೆ ಕಾರು ಶೋರೂಂ ಮೇಲ್ವಿಚಾರಕ ಬಲಿ! – ಆ ಸಂಜೆ ರಸ್ತೆಯಲ್ಲಿ ನಡೆದಿದ್ದೇನು?

ಆನೆಗಳು ಮನುಷ್ಯರೊಂದಿಗೆ ಬಹುಬೇಗನೇ ಆಪ್ತವಾಗುತ್ತವೆ. ಆನೆಗಳ ಜೊತೆಗಿನ ಸ್ನೇಹ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ.  ಇದೀಗ ಪುಟ್ಟ ಹುಡುಗಿಯೊಂದಿಗೆ ಆನೆಮರಿಯೊಂದು  ಐಸ್ ಕ್ರೀಂ ಸವಿದಿದೆ. ಅಷ್ಟೇ ಅಲ್ಲ ಐಸ್‌ಕ್ರೀಂ ಕೊಟ್ಟ ಬಾಲಕಿಗೆ ಮುತ್ತು ನೀಡಿ ಧನ್ಯವಾದ ತಿಳಿಸಿದೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

primepost07 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಆನೆಗೆ ಐಸ್ ಕ್ರೀಂ ಕೊಡುವುದನ್ನು ಕಾಣಬಹುದು. ಐಸ್ ಕ್ರೀಂ ಕೊಟ್ಟ ಖುಷಿಗೆ ಆನೆ ಪುಟ್ಟ ಹುಡುಗಿಗೆ ಥ್ಯಾಂಕ್ಸ್ ಹೇಳಿ ಮುತ್ತು ನೀಡಿದೆ. ಪುಟ್ಟ ಹುಡುಗಿಯೂ ಖುಷಿಯಿಂದ ನಕ್ಕಿರುವುದನ್ನು ಕಾಣಬಹುದು.

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಐಸ್ ಕ್ರೀಮ್ ಕೊಟ್ಟದ್ದಕ್ಕೆ ಈ ಗಜರಾಜನಿಗೆ ಎಷ್ಟು ಖುಷಿ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮುಗ್ಧ ಮನಸ್ಸುಗಳ ಶುದ್ಧ ಗೆಳತನ ಎಂದು ಹೇಳಿದ್ದಾರೆ.

Shwetha M