ನೀರಿನಲ್ಲಿ ಶವಗಳಂತೆ ತೇಲುತ್ತಾ ಪ್ರೀ-ವೆಡ್ಡಿಂಗ್ ಫೋಟೋಶೂಟ್ – ಮದುವೆ ಹೊಸ್ತಿಲಲ್ಲೇ ನವಜೋಡಿ ಫುಲ್ ಟ್ರೋಲ್!

ಮದುವೆ ಎಂದರೆ ಕೇವಲ ಸತಿಪತಿಗಳಾಗುವುದಲ್ಲ. ಸಮರಸ ಜೀವನದ ಆರಂಭವೇ ಮದುವೆ. ಜೊತೆಗಾರ ಅಥವಾ ಜೊತೆಗಾತಿಯ ಆಯ್ಕೆಗಾಗಿ ಮದುವೆ ಎನ್ನುವುದು ಮಾನವ ಸಮಾಜದ ಪವಿತ್ರ ಅಡಿಪಾಯ. ಪ್ರತಿಯೊಬ್ಬರ ಬದುಕಿನಲ್ಲಿ ಮದುವೆ ಎನ್ನುವುದು ಮಧುರ ಕ್ಷಣ. ಹಿಂದೆಲ್ಲಾ ಮದುವೆಗಳು ಅಂದಾಗ ವಾರಗಟ್ಟಲೆ ಶಾಸ್ತ್ರ, ಸಂಪ್ರದಾಯ ಅಂತಾ ಹಿರಿಯರೆಲ್ಲಾ ಕೂಡಿ ಮಾಡುತ್ತಿದ್ರು. ಆದರೆ ಈಗ ಪೋಷಕರ ಆಡಂಬರ, ವಧುವರರ ವೈಭವವೇ ಆಗಿದೆ. ಅದರಲ್ಲೂ ಈಗಿನ ಜೋಡಿಗಳಿಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಇರಲೇಬೇಕು. ಭಿನ್ನವಿಭಿನ್ನವಾಗಿ ಫೋಟೋಗಳನ್ನ ತೆಗೆಸಿಕೊಳ್ಳುವುದು ಪ್ರತಿಷ್ಠೆಯಾಗಿ ಹೋಗಿದೆ. ಹೀಗೆ ಇಲ್ಲೊಂದು ಜೋಡಿ ವಿವಾಹಪೂರ್ವ ತಮ್ಮ ಸುಮಧುರ ಕ್ಷಣಗಳನ್ನ ಸೆರೆಹಿಡಿಯಲು ಹೋಗಿ ಅಪಹಾಸ್ಯಕ್ಕೊಳಗಾಗಿದ್ದಾರೆ.
ಇದನ್ನೂ ಓದಿ : ಯುಗಾದಿ ಹಬ್ಬದಲ್ಲಿ ಜೂಜಾಡುತ್ತಿದ್ದವರನ್ನ ಅರೆಸ್ಟ್ ಮಾಡಿ ಹಲ್ಲೆ? – ಠಾಣೆಯಲ್ಲಿ ವ್ಯಕ್ತಿಯ ಜೀವ ತೆಗೆದ್ರಾ ಪೊಲೀಸರು?
ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಫೋಟೋಶೂಟ್ ಕ್ರೇಜ್ ಹೆಚ್ಚಾಗುತ್ತಿದ್ದು ಇಲ್ಲೊಂದು ಜೋಡಿ ಹೊಸ ಐಡಿಯಾ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಎಲ್ಲರಿಗಿಂತೂ ನಾವೇ ವಿಶೇಷವಾಗಿ ಕಾಣಬೇಕು ಅಂತಾ ಕೆಸರು ನೀರಿನಲ್ಲಿ ಬೇಡದೇ ಇರೋ ಸಾಹಸ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಜೋಡಿ ಯುವಕ ಹಾಗೇ ಯುವತಿ ಕೆಸರು ಮಿಶ್ರಿತ ನೀರಿನಲ್ಲಿ ಕಣ್ಣು ಮುಚ್ಚಿ ಮಲಗಿದ್ದಾರೆ. ನೋಡಲು ಇವರು ತೇಲುತ್ತಿರುವಂತೆ ಕಂಡರೂ ಶವಗಳಂತೆ ಮಲಗಿರುವ ಈ ದೃಶ್ಯ ರೋಮ್ಯಾಂಟಿಕ್ ಎನಿಸುವ ಬದಲು ವಿಚಿತ್ರವಾಗಿ ಕಾಣುತ್ತಿದೆ. ಇನ್ನು ಮೊಣಕಾಲಿನವರೆಗೆ ಕೆಸರಿನಲ್ಲೇ ನಿಂತಿರುವ ಫೋಟೋಗ್ರಾಫರ್ಸ್ ತಂಡವು ಬಹಳ ಗಂಭೀರವಾಗಿ ಇವರಿಗೆ ಪೋಸ್ ನೀಡಲು ಸೂಚನೆ ಕೊಡುತ್ತಿರುವುದು ವಿಡಿಯೋದಲ್ಲಿದೆ. ಈ ಫೋಟೋಶೂಟ್‌ನ ಉದ್ದೇಶ ರೋಮ್ಯಾಂಟಿಕ್ ಆಗಿರಬಹುದು, ಆದರೆ ಜನರ ಕಣ್ಣಿಗೆ ಮಾತ್ರ ಇದು ಯಾವುದೋ ‘ಸರ್ವೈವಲ್ ಥ್ರಿಲ್ಲರ್’ ಸಿನೆಮಾದ ಆರಂಭಿಕ ದೃಶ್ಯದಂತೆ ಅಥವಾ ಯಾವುದೋ ಒಂದು ‘ಕ್ರೈಮ್ ಸೀನ್’ನಂತೆ ಕಾಣುತ್ತಿದೆ. ಈ ವಿಚಿತ್ರ ಪರಿಕಲ್ಪನೆಯು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಸುರಿಮಳೆಗೇ ಕಾರಣವಾಗಿದೆ. ಯಾಕಂದ್ರೆ ಪೋಟೋಶೂಟ್ ನಲ್ಲಿ ಯುವತಿ ಯುವತಿ ಪ್ರಾಣ ಬಿಟ್ಟು ನೀರಿನಲ್ಲಿ ಶವಗಳು ತೇಲುತ್ತಿರುವಂತೆ ಭಾಸವಾಗುತ್ತಿದೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನವಜೋಡಿ ಹಾಗೇ ಫೋಟೋಗ್ರಾಫರ್ ಗೆ ಜನ ಛೀಮಾರಿ ಹಾಕಿದ್ದಾರೆ.
ಮದುವೆ ಹೊಸ್ತಿಲಲ್ಲಿ ಈ ರೀತಿ ಫೋಟೋಗಳನ್ನ ತೆಗೆಸಿಕೊಂಡಿದ್ದಕ್ಕೆ ಹಾಗೇ ಈ ಐಡಿಯಾ ಮಾಡಿದ ಫೋಟೋಗ್ರಾಫರ್ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಗಲು ಕಲಿತು, ಕೊನೆಗೆ ವೆಡಿಂಗ್ ಫೋಟೋಗ್ರಾಫರ್ ಆದರೆ ಹೀಗೆ ಆಗುವುದು ಎಂದು ಕಾಲೆಳೆದಿದ್ದಾರೆ. ಬಜೆಟ್ ಸಿಂಪಲ್ ಫೋಟೋಶೂಟ್,ಎನ್ನುತ್ತಿದೆ, ಆದರೆ ಡೈರೆಕ್ಟರ್ ‘ಟೈಟಾನಿಕ್ ಮತ್ತು ಗಂಗ್ನಮ್ ಸ್ಟೈಲ್’ ಮಿಶ್ರಣ ಎನ್ನುತ್ತಿದ್ದಾರೆ. ಮುಂದಿನ ಹಂತದಲ್ಲಿ ಬಹುಶಃ ಜೋಡಿಯು ರೋಮ್ಯಾಂಟಿಕ್ ಆಗಿ ಮುಳುಗುತ್ತಿದ್ದರೆ ಡ್ರೋನ್ ಮೂಲಕ 8K ನಲ್ಲಿ ಶೂಟ್ ಮಾಡಬಹುದು ಎಂದು ತಮಾಷೆ ಮಾಡಿದ್ದಾರೆ. ಇವರು ಮದುವೆಯಾಗುತ್ತಿದ್ದಾರಾ ಅಥವಾ ಇದು ಕ್ರೈಮ್ ಪೆಟ್ರೋಲ್ ಮುಂದಿನ ಸೀಸನ್‌ನ ತುಣುಕೇ ಎಂದು ಲೇವಡಿ ಮಾಡಿದ್ದಾರೆ.

ನೋಡಿರಿ
