ಹೊಂಬಾಳೆ ಫಿಲ್ಮ್ಸ್‌ಗೆ ರಿಷಭ್ ಕೈ ಕೊಟ್ರಾ? – ಕಾಂತಾರ-2 ಬರುತ್ತಾ? : ತೆಲೆಗೆ ಹುಳಬಿಟ್ಟ ಶೆಟ್ರು ಪೋಸ್ಟ್‌

ಹೊಂಬಾಳೆ ಫಿಲ್ಮ್ಸ್‌ಗೆ ರಿಷಭ್ ಕೈ ಕೊಟ್ರಾ? – ಕಾಂತಾರ-2 ಬರುತ್ತಾ? : ತೆಲೆಗೆ ಹುಳಬಿಟ್ಟ ಶೆಟ್ರು ಪೋಸ್ಟ್‌

ಕಾಂತಾರ ಚಾಪ್ಟರ್‌ 1 ಸಿನಿಮಾ ಆದ್ಮೇಲೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ರಿಷಬ್‌ ಶೆಟ್ಟಿ ಹೆಚ್ಚೇನೂ ಅಪ್‌ಡೇಟ್ಸ್‌ ಕೊಟ್ಟಿಲ್ಲ. ಕಾಂತಾರ ಚಾಪ್ಟರ್‌ 1 ಅಭೂತಪೂರ್ವ ಯಶಸ್ಸು ಗಳಿಸಿದೆ. ಅದಾದ ಬಳಿಕ ಅವರು ತಮ್ಮ ಪತ್ನಿಯೊಟ್ಟಿಗೆ ಹಲವು ದೇವಸ್ಥಾನಗಳಿಗೆ ತೆರಳಿ ಹರಕೆ-ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಯುಗಾದಿಯಂದು, ಅಂದರೆ ಇಂದು ಒಂದು ಮಹತ್ವದ ಅಪ್‌ಡೇಟ್‌ ಕೊಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರುವ ಜೊತೆಗೆ ʼಅಧ್ಯಾಯ 2 ಇಲ್ಲಿಂದ ಶುರುʼ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅದರ ಮೇಲ್ಭಾಗದಲ್ಲಿ ಸಂಸ್ಕೃತದಲ್ಲಿ ಓಂ ಎಂದೂ ಬರೆದಿದ್ದಾರೆ. ಅಂದರೆ ರಿಷಬ್‌ ಶೆಟ್ಟಿ ಕಾಂತಾರ ಚಾಪ್ಟರ್‌ 2 ಆರಂಭಿಸಿಯೇ ಬಿಟ್ಟರಾ ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್ ಸುಲ್ತಾನ್ ಆದ ಧುರಂಧರ್‌ 2 – ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಕಾಂತಾರ ಚಾಪ್ಟರ್‌ 1 ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಿತ್ತು. ಅಭೂತಪೂರ್ವ ಯಶಸ್ಸು ಕಂಡಿತ್ತು. ಅದಕ್ಕೂ ಮೊದಲು ಕಾಂತಾರ ಸಿನಿಮಾವು 2022ರಲ್ಲಿ ಬಿಡುಗಡೆಯಾಗಿ, ಅದು ಕೂಡ ಬಾಕ್‌ಆಫೀಸ್‌ ಧೂಳಿಪಟ ಮಾಡಿತ್ತು. ಕಾಂತಾರದ ಎರಡು ಭಾಗಗಳೂ ರಿಷಬ್‌ ಶೆಟ್ಟಿ ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು, ಜನಪ್ರಿಯತೆ ತಂದುಕೊಟ್ಟಿವೆ. ಹಾಗೇ, ಒಂದಷ್ಟು ವಿವಾದಗಳೂ ಈ ಸಿನಿಮಾಗಳ ಸುತ್ತ ಆಗಿವೆ. ಆದರೂ ರಿಷಬ್‌ ಶೆಟ್ಟಿ ಕಾಂತಾರ ಚಾಪ್ಟರ್‌ 2 ಸಿನಿಮಾವನ್ನ ತರಬಹುದು ಎಂದು ಹೇಳಲಾಗುತ್ತಿದೆ. ಇಷ್ಟು ಬೇಗ ಅದರ ಶೂಟಿಂಗ್‌ ಶುರು ಮಾಡಿದರಾ ಎಂಬ ಪ್ರಶ್ನೆಯೂ ಎದ್ದಿದೆ

ಆದರೆ, ರಿಷಬ್ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ. ‘ಕಾಂತಾರ’ ಸರಣಿಯನ್ನು ನಿರ್ಮಾಣ ಮಾಡಿರೋದು ಹೊಂಬಾಳೆ ಫಿಲ್ಮ್ಸ್. ಆದರೆ, ‘ಚಾಪ್ಟರ್ 2’ ಅನೌನ್ಸ್ ಮಾಡಿರೋದು ಅವರದ್ದೇ ಬ್ಯಾನರ್ ಅಡಿಯಲ್ಲಿ. ರಿಷಬ್ ಪೋಸ್ಟರ್​ ಅಲ್ಲಿ ಎಲ್ಲಿಯೂ ಇದು ‘ಕಾಂತಾರ: ಚಾಪ್ಟರ್ 2’ ಎಂದು ಅನೌನ್ಸ್ ಮಾಡಿಲ್ಲ. ಹೀಗಾಗಿ ವಿವಿಧ ಚರ್ಚೆ ನಡೆದಿದೆ. ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕೆ ಎರಡನೇ ಚಾಪ್ಟರ್ ಇದಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಇನ್ನೂ ಕೆಲವರು ‘ಕಾಂತಾರ: ಚಾಪ್ಟರ್ 2’ ಎನ್ನುತ್ತಿದ್ದಾರೆ. ಇವುಗಳ ಮಧ್ಯೆ ರಿಷಬ್ ಅವರು ಇನ್​​ಸ್ಟಾದಲ್ಲಿ ‘ಕಾಂತಾರ’ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಖಾತೆಯನ್ನು ಅನ್​​​ಫಾಲೋ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

Kishor KV

Leave a Reply

Your email address will not be published. Required fields are marked *